ಮಡಿಕೇರಿ, ಜೂ. ೨೧: ಫುಟ್ಬಾಲ್ ಜಗತ್ತಿನ ಅತ್ಯಂತ ಪ್ರಸಿದ್ಧ ಕ್ರೀಡೆಯಾಗಿದ್ದು,ಕ್ರೀಡೆಗೆ ಜಾತಿ,ಧರ್ಮ, ಜನಾಂಗ ಎಲ್ಲವನ್ನೂ ಮೀರಿ ಎಲ್ಲರನ್ನೂ ಒಂದೆಡೆ ಸೇರಿಸುವ ಶಕ್ತಿ ಇದೆ ಎಂದು ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.
ಅಮ್ಮತ್ತಿಯಲ್ಲಿ ಮಿಲನ್ಸ್ ಫುಟ್ಬಾಲ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಫಿಫಾ ಫ್ಯಾನ್ಸ್ ಫೀಸ್ಟಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಫುಟ್ಬಾಲ್ ಆಟಕ್ಕೆ ವಿಶ್ವದಲ್ಲಿ ಅತೀ ಹೆಚ್ಚು ಅಭಿಮಾನಿಗಳಿದ್ದಾರೆ. ವಿಶ್ವದಲ್ಲಿ ಇದೀಗ ಫಿಫಾ ವರ್ಲ್ಡ್ ಕಪ್ ನಡೆಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ಕೂಡ ವಿವಿಧ ದೇಶಗಳ ಆಟಗಾರರಿಗೆ ಬೆಂಬಲ ವ್ಯಕ್ತವಾಗಿದೆ. ವಿಶೇಷವಾಗಿ ಅಮ್ಮತ್ತಿಯಲ್ಲಿ ಎಲ್ಲಾ ತಂಡಗಳ ಆಟಗಾರರ ಬ್ಯಾನರ್ ಹಾಕುವುದರ ಮೂಲಕ ಹಬ್ಬದ ವಾತಾವರಣವನ್ನು ನಿರ್ಮಿಸಿದ್ದು ಸಂತೋಷದ ವಿಷಯ. ಕೊಡಗು ಜಿಲ್ಲೆಯಲ್ಲಿ ಅತ್ಯುತ್ತಮ ಫುಟ್ಬಾಲ್ ಆಟಗಾರರು ಇದ್ದಾರೆ. ವಿಶೇಷವಾಗಿ ಅಮ್ಮತ್ತಿ ಭಾಗದಲ್ಲಿ ಉತ್ತಮ ಫುಟ್ಬಾಲ್ ಆಟಗಾರರು ಇದ್ದು, ಮುಂದಿನ ದಿನಗಳಲ್ಲಿ ಇದೇ ಭಾಗದಲ್ಲಿ ಖಂಡಿತವಾಗಿ ಅಂತರರಾಷ್ಟಿçÃಯ ಗುಣಮಟ್ಟದ ಫುಟ್ಬಾಲ್ ಆಟದ ಮೈದಾನವನ್ನು ಮಾಡಲು ಕ್ರಮಕೈಗೊಳ್ಳುತ್ತೇನೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ಭರವಸೆ ನೀಡಿದರು.
ಶಾಸಕ ಪೊನ್ನಣ್ಣ ಅವರಿಗೆ ಮಿಲನ್ಸ್ ಫುಟ್ಬಾಲ್ ಕ್ಲಬ್ ಅಧ್ಯಕ್ಷ ಲಿಜೇಶ್ ಅಮ್ಮತ್ತಿ ಅವರು ಅರ್ಜೆಂಟೀನಾ ಫುಟ್ಬಾಲ್ ತಂಡದ ಜೆರ್ಸಿ ಕೊಡುಗೆಯಾಗಿ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ಅರುಣ್ ಅವರು ಶಾಸಕರಿಗೆ ಅರ್ಜೆಂಟೀನಾ ತಂಡದ ಲೋಗೋ ಇರುವ ಕ್ಯಾಪ್ ಅನ್ನು ನೀಡಿದರು.
ಮಿಲನ್ಸ್ ಫುಟ್ಬಾಲ್ ಕ್ಲಬ್ ಅಮ್ಮತ್ತಿ ಆಶ್ರಯದಲ್ಲಿ ಅಮ್ಮತ್ತಿ ಭಾಗದಲ್ಲಿ ಫಿಫಾ ವರ್ಲ್ಡ್ ಕಪ್ ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸುವ ತಂಡವನ್ನು ಸರಿಯಾಗಿ ಅಂದಾಜು ಮಾಡುವ ಫುಟ್ಬಾಲ್ ಅಭಿಮಾನಿಗಳಿಗೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಸಹಿ ಮಾಡಿರುವ ಬಾಲ್ ಅನ್ನು ನೀಡಲು ತೀರ್ಮಾನಿಸಿದ್ದು, ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರು ಫುಟ್ಬಾಲ್‌ಗೆ ಸಹಿ ಮಾಡಿದರು. ಇದೇ ಸಂದರ್ಭ ಪೊನ್ನಣ್ಣ ಅವರು ಚಾಂಪಿಯನ್ ತಂಡವನ್ನು ಅಂದಾಜು ಮಾಡಿ ಗೆಲ್ಲುವ ಆಟಗಾರರನಿಗೆ ಹತ್ತು ಸಾವಿರ ಬೆಲೆ ಬಾಳುವ ಸಂಪೂರ್ಣ ಫುಟ್ಬಾಲ್ ಕಿಟ್ ನೀಡುವುದಾಗಿ ಘೋಷಿಸಿದರು.
ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಪಿ.ಎ ನಾಗೇಶ್ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕ ಅರುಣ್ ಸ್ವಾಗತಿಸಿದರು. ಈ ಸಂದರ್ಭ ವೀರಾಜಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷÀ ಜಾನ್ಸನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಪ್ರು ರವೀಂದ್ರ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ, ಸಮಾಜ ಸೇವಕರಾದ ಚೋಕಂಡ ಸಂಜು ಸುಬ್ಬಯ್ಯ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಹಂಸ ಹಾಗೂ ಮಿಲನ್ಸ್ ಫುಟ್ಬಾಲ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಇದ್ದರು.