ಪಾಲಿಬೆಟ್ಟ, ಜೂ. ೧೭: ಪಾಲಿಬೆಟ್ಟ ವರ್ತಕರ ಸಂಘದಿAದ ಪಾಲಿಬೆಟ್ಟ ಪಶುವೈದ್ಯ ಆಸ್ಪತ್ರೆಯಲ್ಲಿ ಗಿಡಗಳನ್ನು ನೆಡುವುದರೊಂದಿಗೆ ಪರಿಸರ ದಿನಾಚರಣೆಗೆ ಪಶು ವೈದ್ಯಾಧಿಕಾರಿ ಡಾ. ನವೀನ್ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ಗಿಡಗಳನ್ನು ನೆಡುವುದರಿಂದ ಮುಂದಿನ ಪೀಳಿಗೆಗೆ ಉಪಕಾರ ವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವರ್ತಕರ ಸಂಘದ ಅಧ್ಯಕ್ಷ ಎಂ. ಯು. ಮುನೀರ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶೀಬಾ, ಚೆಶೈರ್ ಹೋಂನ ಮುಖ್ಯೋಪಾಧ್ಯಾಯರಾದ ಶಿವರಾಜ್, ವರ್ತಕರ ಸಂಘದ ಖಜಾಂಚಿ ಅಬೂಬಕರ್, ಉಪಾಧ್ಯಕ್ಷರುಗಳಾದ ಟಿ. ಜಿ. ವಿಜೇಶ್, ಮೈಕಲ್, ಪ್ರ. ಕಾರ್ಯದರ್ಶಿ ಶಮೀರ್, ಕಾರ್ಯದರ್ಶಿಗಳಾದ ಫೈಜಲ್, ಹೆಚ್ ಡಿ ಅಯ್ಯಪ್ಪ, ಸಲಹೆಗಾರರಾದ ಪುತ್ತಂ ಪ್ರದೀಪ್, ನಿರ್ದೇಶಕರುಗಳು ಹಾಗೂ ವಿಶೇಷಚೇತನ ವಿದ್ಯಾರ್ಥಿಗಳು ಹಾಜರಿದ್ದರು.