ಮಡಿಕೇರಿ, ಜೂನ್ ೧೭: ಆಭರಣ ಕ್ಷೇತ್ರದಲ್ಲಿ ತನ್ನ ವಿಶಿಷ್ಟ ಸೇವೆ, ಗುಣಮಟ್ಟ ಮತ್ತು ಗ್ರಾಹಕ ವಿಶ್ವಾಸದ ಮೂಲಕ ಜನಪ್ರಿಯತೆ ಗಳಿಸಿರುವ ಮುಳಿಯ ಜ್ಯುವೆಲ್ಸ್ ಸಂಸ್ಥೆಯ ಮಡಿಕೇರಿ ಹಾಗೂ ಗೋಣಿಕೊಪ್ಪ ಶಾಖೆಗಳಲ್ಲಿ ಮಾರ್ಚ್ ೨೮ ರಿಂದ ಮೇ ೧೦ ರವರೆಗೆ ಆಯೋಜಿಸಲಾಗಿದ್ದ ವಿಶೇಷ “ಡೈಮಂಡ್ ಫೆಸ್ಟ್” ಅಭಿಯಾನದ ಅಂಗವಾಗಿ ಗ್ರಾಹಕರಿಗೆ ವಿತರಿಸಲಾಗಿದ್ದ ಲಕ್ಕಿ ಕೂಪನ್ಗಳ ಡ್ರಾ ಕಾರ್ಯಕ್ರಮವು ಮಡಿಕೇರಿಯ ಮುಳಿಯ ಜ್ಯುವೆಲ್ಸ್ ಶಾಖೆಯಲ್ಲಿ ಗ್ರಾಹಕರ ಸಮ್ಮುಖದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಳಿಯ ಸಂಸ್ಥೆಯ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯ ವಹಿಸಿ ಮಾತನಾಡಿ, ಗ್ರಾಹಕರ ವಿಶ್ವಾಸವೇ ಸಂಸ್ಥೆಯ ಬೆಳವಣಿಗೆಯ ಪ್ರಮುಖ ಆಧಾರವಾಗಿದ್ದು, ಮುಂದಿನ ದಿನಗಳಲ್ಲಿಯೂ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಆಭರಣಗಳು ಹಾಗೂ ಆಕರ್ಷಕ ಯೋಜನೆಗಳನ್ನು ಪರಿಚಯಿಸಲಾಗುವುದು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಾದ ದಿವ್ಯ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಾಥ್ ಹಾಗೂ ಟೌನ್ ಪೊಲೀಸ್ ಠಾಣೆಯ ಎ.ಎಸ್.ಐ ಶಿವಾನಂದ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮಾ ನಿರೂಪಿಸಿ, ಡೈಮಂಡ್ ಫೆಸ್ಟ್ ಅಭಿಯಾನದ ಉದ್ದೇಶ ಹಾಗೂ ಅದರ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಡಿಕೇರಿ ಶಾಖಾ ವ್ಯವಸ್ಥಾಪಕ ಸಂತೋಷ್ ರಾಜೇ ಅರಸ್, ಗೋಣಿಕೊಪ್ಪ ಶಾಖಾ ವ್ಯವಸ್ಥಾಪಕ ಕಿಶೋರ್ ಹಾಗೂ ಉಭಯ ಶಾಖೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಲಕ್ಕಿ ಡ್ರಾದಲ್ಲಿ ಸಿದ್ದಾಪುರದ ಬೋಪಣ್ಣ ಡಿ.ಸಿ. ವಿಜೇತರಾಗಿ ಆಯ್ಕೆಯಾದರು.