ಗೋಣಿಕೊಪ್ಪ, ಜೂ. ೧೬: ಇತ್ತೀಚೆಗೆ ಗೋಣಿಕೊಪ್ಪದ ಕಾವೇರಿ ಹಿಲ್ಸ್ ಬಡಾವಣೆಯ ಕಾವೇರಿಕೇರಿಯ ೯ನೇ ವರ್ಷದ ವಾರ್ಷಿಕ ಮಹಾಸಭೆ ಚೋನಿರ ಸತ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮೊದಲಿಗೆ ಪುರುಷರಿಗೆ. ಮಹಿಳೆಯರಿಗೆ, ಮಕ್ಕಳಿಗೆ ಪಾಸ್ ಇನ್ ದ ಬಾಲ್, ಮ್ಯೂಸಿಕಲ್ ಚೇರ್ ಕ್ರೀಡೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ೧೦ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಚೊಟ್ಟೆಯಂಡ ನಮನ ಮುತ್ತಣ್ಣ, ಕುಲ್ಲಚಂಡ ರಿಷಿತ್ ತಿಮ್ಮಣ್ಣ, ದ್ವಿತೀಯ ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ಚೆರಿಯಂಡ ತನಿಶ್ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.

ವಾರ್ಷಿಕ ಸಭೆಯ ವರದಿಯನ್ನು ಕಾರ್ಯದರ್ಶಿ ಕೋಡಿರ ವೀಣಾ ಮಂಡನೆ ಮಾಡಿದರು. ಶಾಂತೆಯAಡ ಟೀನಾ ಮಾಚಯ್ಯ ಪ್ರಾರ್ಥಿಸಿದರು. ಸಭೆಯಲ್ಲಿ ವಾರ್ಷಿಕ ವಿಷಯದ ಬಗ್ಗೆ ಚರ್ಚೆ ಮಾಡಲಾಯಿತು ಸಭೆಯಲ್ಲಿ ಕೊಡಂದೆರ ಸ್ವಾತಿ, ಮಾಚಿಮಾಡ ಭೀಮಯ್ಯ, ಮುಕುಂದ, ಮಲ್ಲೇಂಗಡ ಪದ್ಮಿನಿ, ಕೂಪದಿರ ಕಾವೇರಪ್ಪ, ಚಿಂಡಮಡ ಕಸ್ತೂರಿ, ತಿರುನೆಲ್ಲಿಮಾಡ ಧನು ಜೀವನ್, ಶಾಂತೆಯAಡ ಮಧು ಮಾಚಯ್ಯ ಹಾಜರಿದ್ದರು. ನಂತರ ಹೊಸ ಆಡಳಿತ ಮಂಡಳಿಯನ್ನು ರಚನೆ ಮಾಡಲಾಯಿತು.