ಮಡಿಕೇರಿ, ಜೂ. ೧೬: ಶಾಸಕÀ ಡಾ ಮಂತರ್ ಗೌಡ ಅವರ ನಿರ್ದೇಶನ ಮೇರೆಗೆ ಕಾಲೂರು- ಮಾಂದಲಪಟ್ಟಿ ರಸ್ತೆ ದುರಸ್ತಿ ಕಾರ್ಯ ಆರಂಭಗೊAಡಿದೆ.

ವಾರದ ಹಿಂದೆ ಕಾಲೂರು ಗ್ರಾಮಸ್ಥರು ರಸ್ತೆ ಹಾಳಾಗಿರುವುದರಿಂದ ಬಸ್ ಸಂಚಾರವಿಲ್ಲದೆ ವಿಧ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದು ಡಾ ಮಂತರ್ ಗೌಡ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಮಳೆ ಆರಂಭ ಗೊಂಡಿರುವುದರಿAದ ಪೂರ್ಣ ಪ್ರಮಾಣದಲ್ಲಿ ರಸ್ತೆ ನಿರ್ಮಾಣ ಅಸಾಧ್ಯವಾಗಿದ್ದು ಸದ್ಯಕ್ಕೆ ತಾತ್ಕಾಲಿಕ ದುರಸ್ತಿ ಮಾಡಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಶಾಸಕರು ಭರವಸೆ ನೀಡಿದ್ದರು. ಶಾಸಕರು ಭರವಸೆ ನೀಡಿದಂತೆ ಈಗ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಯುತ್ತಿದೆ.