ಕೂಡಿಗೆ, ಜೂ. ೧೬: ಕುಶಾಲನಗರ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ತಂಬಾಕು ತನಿಖಾ ತಂಡ ಮತ್ತು ಜಿಲ್ಲಾ ತಂಬಾಕು ತನಿಖಾ ತಂಡ ಶಿರಂಗಾಲ ಗ್ರಾಮದಲ್ಲಿ ಅಂಗಡಿ, ಹೊಟೇಲ್, ಬೇಕರಿ, ಬಾರ್‌ಗಳಿಗೆ ಭೇಟಿ ನೀಡಿ, ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ, ನಿಯಮ ಉಲ್ಲಂಘನೆಯ ಏಳು ಪ್ರಕರಣಗಳಲ್ಲಿ ೧,೩೦೦ ರೂಪಾಯಿ ದಂಡ ವಿಧಿಸಿತು.
ಹೊಟೇಲ್‌ಗಳಲ್ಲಿ ಸ್ವಚ್ಛತೆ ಬಗ್ಗೆ ಪರಿಶೀಲಿಸಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಹೊಟೇಲ್ ಮಾಲೀಕರಿಗೆ ಸೂಚಿಸಿತು. ತಂಡದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಜಿಲ್ಲಾ ಮೇಲ್ವಿಚಾರಕಿ ಪುನೀತಾ, ಆರೋಗ್ಯ ನಿರೀಕ್ಷಕರಾದ ಸಂಜಯ್, ಮುಖೇಶ್ ಹಾಜರಿದ್ದರು.