ಮಡಿಕೇರಿ, ಜೂ. ೧೫: ಕೊಡಗು ಜಿಲ್ಲೆಯವರಾದ, ದೇಶದ ಖ್ಯಾತ ಸ್ಕಾ÷್ವಷ್ ಕ್ರೀಡಾಪಟು ಕುಟ್ಟಂಡ ಜೋಶ್ನಾ ಚಿಣ್ಣಪ್ಪ ಅವರು ಸೆಪ್ಟಂಬರ್ - ಅಕ್ಟೋಬರ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ. ಈ ಮೂಲಕ ಜೋಶ್ನಾ ಸತತ ೭ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳುತ್ತಿರುವ ಕೀರ್ತಿಯೊಂದಿಗೆ ಹೊಸ ದಾಖಲೆ ಸೃಷ್ಟಿಸಲಿದ್ದಾರೆ. ಸ್ಕಾ÷್ವಷ್ ಮಾತ್ರವಲ್ಲ ಇತರ ಯಾವುದೇ ಕ್ರೀಡೆಯಲ್ಲೂ ದೇಶದ ಯೊರೊಬ್ಬ ಕ್ರೀಡಾಪಟು ಸತತವಾಗಿ ಏಳು ಏಷ್ಯನ್ ಗೇಮ್ಸ್ನಲ್ಲಿ ಈ ತನಕ ಪಾಲ್ಗೊಗೊಂಡಿಲ್ಲ ಎಂಬುದು ವಿಶೇಷವಾಗಿದೆ.
ಭಾನುವಾರ ಚೆನ್ನೆöÊಯ ಐಎಸ್‌ಟಿಎ ಅಕಾಡೆಮಿಯಲ್ಲಿ ನಡೆದ ಆಯ್ಕೆ ಟ್ರಯಲ್ಸ್ನಲ್ಲಿ ಐದು ಪಂದ್ಯಗಳ ಕಠಿಣ ಮುಖಾಮುಖಿಯಲ್ಲಿ ಉನ್ನತಿ ತ್ರಿಪಾಠಿ ಅವರನ್ನು ಸೋಲಿಸುವ ಮೂಲಕ ೩೯ರ ಪ್ರಾಯದವರಾದ ಜೋಶ್ನಾ ಈ ಬಾರಿಯ ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಏಷ್ಯನ್ ಗೇಮ್ಸ್ನಲ್ಲಿ ಐದು ಬಾರಿ ಪದಕ ವಿಜೇತೆಯಾಗಿರುವ ಜೋಶ್ನಾ ಈ ಬಾರಿಯೂ ಉತ್ತಮ ಸಾಧನೆ ತೋರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪುತ್ರಿಯ ಸಾಧನೆಯ ಬಗ್ಗೆ “ಶಕ್ತಿ’’ಯೊಂದಿಗೆ ಸಂತಸ ವ್ಯಕ್ತಪಡಿಸಿರುವ ಜೋಶ್ನಾ ಅವರ ಪೋಷಕರಾದ ಪಾಲಿಬೆಟ್ಟದ ಕುಟ್ಟಂಡ ಅಂಜನ್ ಚಿಣ್ಣಪ್ಪ ಹಾಗೂ ಸುನಿತಾ ಚಿಣ್ಣಪ್ಪ ಸತತ ೭ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳುತ್ತಿರುವುದು ಆಕೆಯ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಸಾಧಾರಣವಾಗಿ ೩೯ರ ವಯೋಮಿತಿಯ ಕ್ರೀಡಾಪಟುಗಳು ತಮ್ಮ ವೃತ್ತಿಜೀವನದಿಂದ ನಿವೃತ್ತರಾಗುತ್ತಾರೆ. ಆದರೆ ಜೋಶ್ನಾ ಈ ಬಾರಿಯೂ ಕಠಿಣ ಸಾಧನೆ ತೋರಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆ ಎನಿಸಿದೆ ಎಂದು ಹೇಳಿದರು. - ಶಶಿ