ಮಡಿಕೇರಿ, ಜೂ.೧೫: ಫ್ರಾನ್ಸ್ನಲ್ಲಿ ಜರುಗಿದ ಟೆನಿಸ್‌ನ ಪ್ರತಿಷ್ಠಿತ ಎ.ಟಿ.ಪಿ (ಅಸೋಸಿಯೇಷನ್ ಆಫ್ ಟನ್ನಿಸ್ ಪ್ರೊಫೆಷನಲ್ಸ್)ಚ್ಯಾಲೆಂಜರ್ ೧೦೦ನ ಡಬಲ್ಸ್ ಅಂತಿಮ ಪಂದ್ಯದಲ್ಲಿ ಮೂಲತಃ ಕೊಡಗಿನವರಾದ ಕಲಿಯಂಡ ನಿಕ್ಕಿ ಪೂಣಚ್ಚ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ನಿಕ್ಕಿ ಪೂಣಚ್ಚ ಹಾಗೂ ತಮ್ಮ ಜೊತೆ ಆಟಗಾರ ಥೈಲ್ಯಾಂಡ್‌ನ ಪ್ರುಚ್ಯೋ ಇಸಾರೋ ಜೋಡಿಯು ತಾ.೧೩ರಂದು ನಡೆದ ಅಂತಿಮ ಪಂದ್ಯದಲ್ಲಿ ಟುನೀಷಿಯಾದ ಸ್ಕಂದರ್ ಮನ್ಸೂರಿ ಹಾಗೂ ಆಸ್ಟಿçಯಾದ ಮಾಕ್ಸಿಮಿಲಾನ್ ನ್ಯೂಕ್ರಿಸ್ಟ್ ಜೋಡಿಯನ್ನು ಮಣಿಸಿ ಎ.ಟಿ.ಪಿ ಚ್ಯಾಲೆಂಜರ್-೧೦೦ ಡಬಲ್ಸ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ೬-೦, ೬-೧ ಸೆಟ್‌ಗಳ ಮೂಲಕ ಸುಲಭವಾಗಿ ನಿಕ್ಕಿ ಹಾಗೂ ಪ್ರುಚ್ಯೋ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಇದು ನಿಕ್ಕಿ ಪೂಣಚ್ಚ ಅವರ ೧೦ನೇ ಎ.ಟಿ.ಪಿ ಚ್ಯಾಲೆಂಜರ್ ಡಬಲ್ಸ್ ಕಿರೀಟವಾಗಿದ್ದು ಪ್ರಸ್ತುತ ಸಾಲಿನ ೪ನೇ ಕಿರೀಟವಾಗಿದೆ.
ಬೆಂಗಳೂರು ಓಪನ್ ಚ್ಯಾಲೆಂಜರ್ ೫೦, ಮೆನರ‍್ಕಾ ಎ.ಟಿ.ಪಿ ಚ್ಯಾಲೆಂಜರ್ ೧೦೦ ಹಾಗೂ ಚೆನ್ನೆöÊ ಎ.ಟಿ.ಪಿ ಚ್ಯಾಲೆಂಜರ್-೫೦ ಕಿರೀಟಗಳನ್ನು ನಿಕ್ಕಿ ಪೂಣಚ್ಚ ಪ್ರಸ್ತುತ ವರ್ಷ ಗಳಿಸಿದ್ದರು.
ನಿಕ್ಕಿ ಪೂಣಚ್ಚ ಅವರು ಮೂಲತಃ ಕಕ್ಕಬ್ಬೆ ಗ್ರಾಮದವರಾದ ಕಲಿಯಂಡ ಮನು ಪೂಣಚ್ಚ ಹಾಗೂ ವೀಣಾ ದಂಪತಿಯ ಪುತ್ರ.