ಮಡಿಕೇರಿ, ಜೂ. ೧೫: ಮಂಡ್ಯ - ಮದ್ದೂರು ಮಾರ್ಗದ ನಡುವೆ ನಿನ್ನೆ ಸಂಜೆ ಕಾರು ಹಾಗೂ ಲಾರಿ ನಡುವೆ ಅವಘಡ ಸಂಭವಿಸಿದ್ದು, ಜಿಲ್ಲೆಯ ದಂಪತಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಮಡಿಕೇರಿಯ ಎಸ್‌ಪಿ ಕಚೇರಿಯಲ್ಲಿ ಕಂಪ್ಯೂಟರ್ ವಿಭಾಗದಲ್ಲಿ ಹೆಡ್‌ಕಾನ್ಸ್ಟೇಬಲ್ ಆಗಿರುವ ಜಿಲ್ಲೆಯ ಬೋಯಿಕೇರಿ ನಿವಾಸಿ ನಂದಿನೆರವAಡ ತಿಮ್ಮಯ್ಯ (ವಿವೇಕ್) ಹಾಗೂ ಅವರ ಪತ್ನಿ ಕಾವ್ಯ ಈ ಅವಘಡದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಮುಖಭಾಗ ಸೇರಿದಂತೆ ಹಲವು ಭಾಗಕ್ಕೆ ಪೆಟ್ಟಾಗಿದ್ದು, ಇಬ್ಬರಿಗೂ ಶಸ್ತçಚಿಕಿತ್ಸೆ ನಡೆಸಬೇಕಿದೆ ಎಂದು ತಿಳಿದು ಬಂದಿದೆ. ಕಾರಿನಲ್ಲಿ ಇವರೊಂದಿಗಿದ್ದ ಮಕ್ಕಳಾದ ಮಹಿಮ್ ಮುದ್ದಯ್ಯ ಹಾಗೂ ಮೋಹಕ್ ಮೊಣ್ಣಪ್ಪ ಅದೃಷ್ಟವಶಾತ್ ಪಾರಾಗಿದ್ದಾರೆ.

ತಿಮ್ಮಯ್ಯ ಅವರು ಕುಟುಂಬದೊAದಿಗೆ ನಿನ್ನೆ ಬೆಂಗಳೂರಿನಲ್ಲಿರುವ ತಮ್ಮ ಸಂಬAಧಿಯೋರ್ವರ ಆರೋಗ್ಯ ವಿಚಾರಿಸಿ ಮೈಸೂರಿನತ್ತ ಹಿಂತಿರುಗುತ್ತಿದ್ದಾಗ ಮಂಡ್ಯ - ಮದ್ದೂರು ನಡುವಿನ ಗೆಜ್ಜೆಲಗೆರೆ ಎಂಬಲ್ಲಿ ಇವರು ಚಾಲಿಸುತ್ತಿದ್ದ ಕಾರು ಟ್ರಕ್‌ವೊಂದಕ್ಕೆ ಹಿಂಬದಿಯಿAದ ಡಿಕ್ಕಿಯಾಗಿದೆ ಎನ್ನಲಾಗಿದೆ. ಗಾಯಾಳುಗಳಿಬ್ಬರು ಇದೀಗ ಚೇತರಿಸಿಕೊಳ್ಳುತ್ತಿರುವುದಾಗಿ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಪೊಲೀಸ್ ಇಲಾಖೆಯ ಸಿಬ್ಬಂದಿಯಾಗಿರುವ ತಿಮ್ಮಯ್ಯ ಅವರು ಏಪ್ರಿಲ್ ೨ ರಂದು ನಡೆದ ಪೊಲೀಸ್ ಧ್ವಜ ದಿನಾಚರಣೆ ಸಂದರ್ಭ ಉತ್ತಮ ಕಾರ್ಯನಿರ್ವಹಣೆಗೆ ನೀಡುವ ಫೀ.ಮಾ. ಕಾರ್ಯಪ್ಪ ಟ್ರೋಫಿಗೆ ಭಾಜನರಾಗಿದ್ದರು. ಕಾವ್ಯ ಅವರು ಈ ಹಿಂದೆ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಇದೀಗ ಕೆಲ ವರ್ಷದಿಂದ ಮೈಸೂರಿನಲ್ಲಿ ಎನ್‌ಪಿಎಸ್ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಮಕ್ಕಳ ವ್ಯಾಸಂಗ ನಿಮಿತ್ತ ಅಲ್ಲಿ ವಾಸವಾಗಿದ್ದರು. ಅವಘಡದ ರಭಸಕ್ಕೆ ಕಾರು ನಜ್ಜುಗುಜ್ಜಾಗಿರುವುದು ಭೀಕರತೆಗೆ ಸಾಕ್ಷಿಯಾಗಿದೆ. ಕಾರಿನ ಏರ್‌ಬ್ಯಾಗ್ ಓಪನ್ ಆಗಿದ್ದು, ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ ಎಂದು ತಿಳಿದು ಬಂದಿದೆ.