ಶನಿವಾರಸಂತೆ, ಜೂ. ೧೪: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಭಾರತಿ ವಿದ್ಯಾಸಂಸ್ಥೆಯಲ್ಲಿ ಮಲೇರಿಯಾ ವಿರೋಧಿÀ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮಲೇರಿಯಾ ವಿರೋಧ ಮಾಸಾಚರಣೆ ಉದ್ದೇಶ, ರೋಗ ಲಕ್ಷಣ, ಚಿಕಿತ್ಸಾ ವಿಧಾನ, ಡೆಂಗ್ಯೂ ಜ್ವರ, ಅದರ ಲಕ್ಷಣ, ಚಿಕಿತ್ಸಾ ವಿಧಾನಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿ, ಹೆಚ್‌ಪಿವಿ ಲಸಿಕೆ ಮಾಡಿಸಿಕೊಳ್ಳುವಂತೆ ಕರೆ ನೀಡಲಾಯಿತು.

ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ, ನಶಾಮುಕ್ತ ಭಾರತ ಅಭಿಯಾನದ ಮಹತ್ವದ ಬಗ್ಗೆ ಸಂಪನ್ಮೂಲ ಹಾಗೂ ಎಲ್ಲಾ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮದ ಮಾಹಿತಿ ನೀಡಲಾಯಿತು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞ, ಎಸ್‌ಟಿಎಲ್‌ಎಸ್ ಪುಟ್ಟರಾಜ್, ಕೊಡ್ಲಿಪೇಟೆ ಸರ್ಕಾರಿ ಆರೋಗ್ಯ ಕೇಂದ್ರದ ನಿರೀಕ್ಷಾಣಾಧಿಕಾರಿ ಮಹೇಶ್, ಪ್ರಯೋಗ ಶಾಲಾ ತಂತ್ರಜ್ಞ ಅಧಿಕಾರಿಗಳಾದ ರಶೀದ್ ಕಲ್ಮನಿ, ರುದ್ರೇಶ್, ಭಾರತಿ, ಪ್ರೌಢಶಾಲಾ ಮುಖ್ಯಶಿಕ್ಷಕ ಪಿ. ನರಸಿಂಹಮೂರ್ತಿ, ಸಹ ಶಿಕ್ಷಕರಾದ ಗೋಪಾಲ್, ಮಂಗಳಾ, ಶಬಾನಾ, ಭವಾನಿ, ಸರೋಜಿನಿ, ಆದರ್ಶ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.