ಸೋಮವಾರಪೇಟೆ, ಜೂ. ೧೪: ತಾಲೂಕಿನ ತಾಕೇರಿ ಗ್ರಾಮದಲ್ಲಿ ಇಂದು ನಸುಕಿನ ಜಾವ ಕಾಡಾನೆಯೊಂದು ಜನವಸತಿ ಪ್ರದೇಶದಲ್ಲಿ ದಾಂಧಲೆ ನಡೆಸಿರುವ ಘಟನೆ ನಡೆದಿದೆ.
ಗ್ರಾಮದ ನಾರಾಯಣ ಅವರ ಮನೆ ಮುಂಭಾಗದ ಶೀಟ್‌ಗಳಿಗೆ ಹಾನಿ ಮಾಡಿರುವ ಕಾಡಾನೆ, ಶಿವಪ್ರಸಾದ್ ಎಂಬವರಿಗೆ ಸೇರಿದ ಮನೆಯ ಕಾಂಪೌAಡನ್ನು ಜಖಂಗೊಳಿಸಿದೆ. ಇದರೊಂದಿಗೆ ಕೆ.ಪಿ. ರಾಜು ಅವರ ಪುತ್ರ ಅನೂಪ್ ಎಂಬವರಿಗೆ ಸೇರಿದ ಕಾರಿನ ಮೇಲೆ ಧಾಳಿ ನಡೆಸಿದೆ.
ಬೆಳಗ್ಗಿನ ೩ ಗಂಟೆ ಸುಮಾರಿಗೆ ಮನೆಯ ಪರಿಸರದಲ್ಲಿ ಓಡಾಡಿರುವ ಕಾಡಾನೆ ಮನಸೋಯಿಚ್ಚೆ ದಾಂಧಲೆ ನಡೆಸಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.