ಮಡಿಕೇರಿ, ಜೂ. ೧೪: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಕ್ಕಳು ಮತ್ತು ಯುವಜನರ ಕಲಾಪ್ರತಿಭೆ ಗುರುತಿಸಿ ಅವರಿಗೆ ಉತ್ತೇಜನ ನೀಡುವ ಮತ್ತು ಅವರು ತಮ್ಮ ಕಲಾನೈಪುಣ್ಯ ವೃದ್ಧಿಗೊಳಿಸುವಂತೆ ಪ್ರೋತ್ಸಾಹಿಸಲು ಕಲಾ ಪ್ರತಿಭೋತ್ಸವ ರೂಪಿಸಲಾಗಿದೆ.

ಈ ಉತ್ಸವವು ಆಗಸ್ಟ್ ೪ ಹಾಗೂ ಆಗಸ್ಟ್ ೫ ರಂದು ನಗರದ ಗಾಂಧಿ ಭವನದಲ್ಲಿ ನಡೆಯಲಿದೆ.

ಬಾಲಪ್ರತಿಭೆ/ ಕಿಶೋರ ಪ್ರತಿಭೆ/ ಯುವಪ್ರತಿಭೆ ಎಂಬ ಶೀರ್ಷಿಕೆಯಡಿ ಮೂರು ವಿಭಾಗಗಳಲ್ಲಿ ಸ್ಪರ್ಧಾ ರೂಪದಲ್ಲಿ ಏರ್ಪಡಿಸಲಾಗುವುದು. ಆಗಸ್ಟ್ ೪ ರಂದು ಬಾಲಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಆಗಸ್ಟ್ ೫ ರಂದು ಯುವ ಪ್ರತಿಭೆ ಸ್ಪರ್ಧೆಗಳು ನಡೆಯಲಿವೆ.

ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದವರಲ್ಲಿ ಪ್ರಥಮ ಸ್ಥಾನ ಪಡೆದವರನ್ನು ವಲಯ ಮಟ್ಟದ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು.

ಬಾಲ ಪ್ರತಿಭೆ: (ಏಕವ್ಯಕ್ತಿ ಸ್ಪರ್ಧೆ): ಬಾಲ ಪ್ರತಿಭೆಯ ವಿಭಾಗದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕನಿಷ್ಟ ೮ ವರ್ಷ ತುಂಬಿರಬೇಕು. ೧೪ ವರ್ಷಕ್ಕಿಂತ ಕಡಿಮೆಯಿರಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅಭ್ಯರ್ಥಿಯು ವಯೋಮಿತಿಯ ದೃಢೀಕರಣಕ್ಕಾಗಿ ಶಾಲೆಯಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಶಾಲೆಯಿಂದ ಬಂದ ಅಭ್ಯರ್ಥಿಯಲ್ಲದಿದ್ದಲ್ಲಿ ಅವರ ವಯಸ್ಸಿನ ಬಗ್ಗೆ ಪಂಚಾಯಿತಿ, ನಗರಸಭೆ, ಪುರಸಭೆ, ಪಾಲಿಕೆ ಕಚೇರಿಯಿಂದ ದೃಢೀಕರಣ ಪತ್ರ ಪಡೆದು ಸಲ್ಲಿಸಬೇಕು.

ಕಿಶೋರ ಪ್ರತಿಭೆ: (ಏಕವ್ಯಕ್ತಿ ಸ್ಪರ್ಧೆ): ಕಿಶೋರ ಪ್ರತಿಭೆಯ ವಿಭಾಗದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕನಿಷ್ಟ ೧೪ ವರ್ಷವಾಗಿರಬೇಕು. ೧೮ ವರ್ಷಕ್ಕಿಂತ ಕಡಿಮೆಯಿರಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅಭ್ಯರ್ಥಿಯ ವಯೋಮಿತಿಯ ದೃಢೀಕರಣಕ್ಕಾಗಿ ಶಾಲೆ, ಕಾಲೇಜಿನಿಂದ ಪಡೆದು ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಶಾಲೆಯಿಂದ ಬಂದ ಅಭ್ಯರ್ಥಿಯಲ್ಲದಿದ್ದಲ್ಲಿ ಅವರ ವಯಸ್ಸಿನ ಬಗ್ಗೆ ಪಂಚಾಯಿತಿ, ನಗರಸಭೆ, ಪುರಸಭೆ, ಪಾಲಿಕೆ ಕಚೇರಿಯಿಂದ ದೃಢೀಕರಣ ಪತ್ರ ಪಡೆದು ಸಲ್ಲಿಸಬೇಕು.

ಯುವಪ್ರತಿಭೆ: (ಏಕವ್ಯಕ್ತಿ ಸ್ಪರ್ಧೆ): ಯುವ ಪ್ರತಿಭೆಯ ವಿಭಾಗದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕನಿಷ್ಟ ೧೮ ವರ್ಷ ತುಂಬಿ ಹಾಗೂ ೩೦ ವರ್ಷಕ್ಕಿಂತ ಕಡಿಮೆಯಿರಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸುವ ಪ್ರತಿಯೊಬ್ಬ ಅಭ್ಯರ್ಥಿಯು ವಯೋಮಿತಿಯ ದೃಢೀಕರಣಕ್ಕಾಗಿ ಕಾಲೇಜಿನಿಂದ ಪಡೆದ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಶಾಲೆಯಿಂದ ಬಂದ ಅಭ್ಯರ್ಥಿಯಲ್ಲದಿದ್ದಲ್ಲಿ ಅವರ ವಯಸ್ಸಿನ ಬಗ್ಗೆ ಪಂಚಾಯಿತಿ, ನಗರಸಭೆ, ಪುರಸಭೆ, ಪಾಲಿಕೆ ಕಚೇರಿಯಿಂದ ದೃಢೀಕರಣ ಪತ್ರ ಪಡೆದು ಸಲ್ಲಿಸಬೇಕು.

ಸಮೂಹ ಸ್ಪರ್ಧೆ: (ತಂಡಗಳ ಸ್ಪರ್ಧೆ) ಸಮೂಹ ಪ್ರಕಾರಗಳಲ್ಲಿ ಭಾಗವಹಿಸುವ ತಂಡದ ಸದಸ್ಯರ ಸಂಖ್ಯೆ ಕನಿಷ್ಟ ೧೦ ಗರಿಷ್ಠ ೧೫ ಜನರನ್ನು ಮೀರಬಾರದು.

ಏಕವ್ಯಕ್ತಿಗಳ ಸ್ಪರ್ಧೆಗೆ ಬಾಲ ಪ್ರತಿಭೆ/ ಕಿಶೋರ ಪ್ರತಿಭೆ ವಿಭಾಗದ ಸ್ಪರ್ಧೆಗೆ ಕಲಾಪ್ರಕಾರಗಳು ಹಾಗೂ ನಿಗದಿಪಡಿಸಿದ ಸಮಯ: ಶಾಸ್ತಿçÃಯ ನೃತ್ಯ (೧೦ ನಿಮಿಷ), ಸುಗಮ ಸಂಗೀತ (೭ ನಿಮಿಷ), ಚಿತ್ರಕಲೆ (೧೨೦ ನಿಮಿಷ), ಜಾನಪದ ಗೀತೆ (೭ ನಿಮಿಷ), ಹಿಂದೂಸ್ತಾನಿ/ ಕರ್ನಾಟಕ ವಾದ್ಯ ಸಂಗೀತ (೭ ನಿಮಿಷ), ಹಿಂದೂಸ್ತಾನಿ/ ಕರ್ನಾಟಕ ಶಾಸ್ತಿçÃಯ ಸಂಗೀತ(೭ ನಿಮಿಷ).

ಏಕವ್ಯಕ್ತಿ ಸ್ಪರ್ಧೆಗಳು: ಯುವ ಪ್ರತಿಭೆ ವಿಭಾಗದ ಸ್ಪರ್ಧೆಗೆ ಕಲಾಪ್ರಕಾರಗಳು ಮತ್ತು ನಿಗದಿಪಡಿಸಿದ ಸಮಯ: ನನ್ನ ಮೆಚ್ಚಿನ ಸಾಹಿತಿ (ಆಶುಭಾಷಣ) (೭ ನಿಮಿಷ), ಶಾಸ್ತಿçÃಯ ನೃತ್ಯ (೧೦ ನಿಮಿಷ), ಸುಗಮ ಸಂಗೀತ (೭ ನಿಮಿಷ), ಹಿಂದೂಸ್ತಾನಿ, ಕರ್ನಾಟಕ ಶಾಸ್ತಿçÃಯ ಸಂಗೀತ (೭ ನಿಮಿಷ), ಚಿತ್ರಕಲೆ (೧೨೦ ನಿಮಿಷ), ಹಿಂದೂಸ್ತಾನಿ, ಕರ್ನಾಟಕ ವಾದ್ಯ ಸಂಗೀತ (೭ ನಿಮಿಷ), ಸಮೂಹ ಸ್ಪರ್ಧೆಗಳು: ನಾಟಕ ೪೫ ನಿಮಿಷ. ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಸ್ಪರ್ಧಿಗಳಿಗೆ ಅವರು ಭಾಗವಹಿಸುವ ದಿನದಂದು ಲಘು ಉಪಹಾರ ಇರಲಿದೆ. ಜಿಲ್ಲಾ ಮಟ್ಟದಲ್ಲಿ ಪ್ರತಿ ಕಲಾ ಪ್ರಕಾರದಲ್ಲಿ ಆಯ್ಕೆಯಾದ ಬಾಲ ಪ್ರತಿಭೆ, ಕಿಶೋರ ಪ್ರತಿಭೆ, ಯುವ ಪ್ರತಿಭೆ ಹಾಗೂ ನಾಟಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಒಬ್ಬರನ್ನು ಸಂಬAಧಿತ ವಲಯ ಮಟ್ಟಕ್ಕೆ ಕಳುಹಿಸಿಕೊಡಲಾಗುವುದು.

ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಭಾಗವಹಿಸುವ ಅಭ್ಯರ್ಥಿಗಳು ಯಾವುದಾದರೂ ಒಂದರಲ್ಲಿ ಭಾಗವಹಿಸಲು ಅವಕಾಶವಿದೆ. ಸ್ವಂತ ಖರ್ಚಿನಲ್ಲಿ ಭಾಗವಹಿಸಬೇಕು. ಚಿತ್ರಕಲಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಸ್ಪರ್ಧಿಗಳು ಚಿತ್ರಕಲೆ ಸ್ಪರ್ಧೆಗಳಿಗೆ ಬೇಕಾಗುವ ಕಾಗದ, ಬಣ್ಣ, ಇತ್ಯಾದಿ ಸಾಮಾಗ್ರಿಗಳನ್ನು ತಾವೇ ತರಬೇಕು.

ಈ ಸ್ಪರ್ಧೆಗಳಲ್ಲಿ ಭಾಗಹಿಸುವ ಅಭ್ಯರ್ಥಿಗಳು ತಮ್ಮ ಹೆಸರನ್ನು ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಭವನ, ಮಡಿಕೇರಿ, ಕೊಡಗು ಜಿಲ್ಲೆ ಇಲ್ಲಿ ಜೂನ್ ೩೦ ರೊಳಗೆ ಕಚೇರಿ ವೇಳೆಯಲ್ಲಿ ನೋಂದಾಯಿಸಿಕೊಳ್ಳುವAತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ತಿಳಿಸಿದ್ದಾರೆ.