ಅನಿಲ್ ಎಚ್.ಟಿ.
ಮಡಿಕೇರಿಯ ಮಹಾಮಳೆ, ಚಳಿ, ಗಾಳಿಯ ವಾತಾವರಣದಲ್ಲಿ ನಿತ್ಯ ವಾಕಿಂಗ್ ಮಾಡುವುದೇ ಕಷ್ಟ ಎಂಬAಥ ಸನ್ನಿವೇಶದಲ್ಲಿ ೨೫ ವರ್ಷಗಳ ಹಿಂದೆ ಮಳೆನಾಡು ಮಡಿಕೇರಿಯಲ್ಲಿ ಯೋಗ ತರಗತಿಯನ್ನು ಆರಂಭಿಸಿದ್ದಲ್ಲದೆ ನೂರಾರು ಯೋಗಪಟುಗಳನ್ನು ತಯಾರು ಮಾಡಿದ ಯೋಗ ಭಾರತಿ ಈಗ ರಜತ ಮಹೋತ್ಸವದ ಸಂಭ್ರಮದಲ್ಲಿದೆ.
ಕೊಡಗಿನ ಮೊಟ್ಟಮೊದಲ ಯೋಗ ಶಿಕ್ಷಣ ಸಂಸ್ಥೆಯಾಗಿರುವ ಯೋಗ ಭಾರತಿ, ಪುರುಷರು, ಮಹಿಳೆಯರು, ಮಕ್ಕಳಲ್ಲಿ ಯೋಗಭ್ಯಾಸದ ಮಹತ್ವವನ್ನು ಈ ಅವಧಿಯಲ್ಲಿ ಪರಿಣಾಮಕಾರಿಯಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ೨೫ ವರ್ಷಗಳ ಹಿಂದೆ ಯೋಗ ಭಾರತಿಯ ಸ್ಥಾಪನೆಗೆ ಕಾರಣರಾದ ಯೋಗ ಗುರು ಮಹೇಶ್ ಕುಮಾರ್ (ಮಹೇಶಣ್ಣ) ಅಂದಿನಿAದ ಇಂದಿನವರೆಗೂ ಯೋಗ ಭಾರತಿಯ ಯೋಗ ಗುರುವಾಗಿಯೇ ಮುಂದುವರೆದಿರುವುದು ಕೂಡ ಶ್ಲಾಘನೀಯ ವಿಚಾರ.
ಮಡಿಕೇರಿಯಲ್ಲಿ ಯೋಗದ ಬಗ್ಗೆ ತಿಳುವಳಿಕೆ ಇಲ್ಲದ ದಿನಗಳಲ್ಲಿ, ಇತರ ಊರುಗಳಲ್ಲಿ ಯೋಗಭ್ಯಾಸಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಿದ್ದ ವಿಚಾರ ತಿಳಿದ ಮಹೇಶ್ ಕುಮಾರ್, ೨೦೦೧ ರಲ್ಲಿ ಪುತ್ತೂರಿಂದ ಕರುಣಾಕರ್ ಎಂಬ ಯೋಗಪಟುವನ್ನು ಆಹ್ವಾನಿಸಿ ಮಡಿಕೇರಿಯಲ್ಲಿ ಯೋಗ ತರಗತಿ ಪ್ರಾರಂಭಿಸಿದರು. ಆ ಸಂದರ್ಭ ಹತ್ತು ದಿನಗಳ ಯೋಗ ಶಿಕ್ಷಣ ತರಗತಿಗೆ ೧೨ ಮಂದಿ ಆಸಕ್ತರು ಬಂದಿದ್ದರು. ೧೦ ದಿನಗಳ ಪರಿಣಾಮಕಾರಿ ಯೋಗ ಶಿಕ್ಷಣ ಕಲಿತ ನಂತರ ಈ ಯೋಗಾಸಕ್ತರು ಮತ್ತಷ್ಟು ಮಂದಿಗೆ ವಿಚಾರ ತಿಳಿಸಿದ ಹಿನ್ನೆಲೆಯಲ್ಲಿ ಯೋಗ ಕಲಿಯುತ್ತೇವೆ, ಯೋಗ ಕಲಿಸಿ ಎಂಬ ಬೇಡಿಕೆಯೊಂದಿಗೆ ಮಹೇಶ್ ಕುಮಾರ್ ಅವರಲ್ಲಿ ಕೋರಿಕೊಂಡರು. ಈ ಹಿನ್ನೆಲೆಯಲ್ಲಿಯೇ ಮಡಿಕೇರಿಯಲ್ಲಿ ಪ್ರಾರಂಭವಾದ ಯೋಗ ಭಾರತಿ ಅಂದಿನಿAದ ಇಂದಿನವರೆಗೂ ನಿರಂತರ ಯೋಗಭ್ಯಾಸದಲ್ಲಿ ಸಕ್ರಿಯವಾಗಿ ಮುಂದುವರೆಯುತ್ತಾ ಬಂದಿದೆ.
೨೦೦೧ ರಲ್ಲಿ ಭಾರತೀಯ ವಿದ್ಯಾಭವನದಲ್ಲಿ ಉತ್ಸಾಹಿ ಯೋಗಭ್ಯಾಸಿಗಳೊಂದಿಗೆ ಯೋಗ ಭಾರತಿ ಆರಂಭವಾದ ಯೋಗ ಭಾರತಿ. ನಿತ್ಯ ಯೋಗಭ್ಯಾಸದ ೨೫ ವರ್ಷಗಳನ್ನು ಪೂರೈಸಿ ರಜತ ಮಹೋತ್ಸವವನ್ನು ಇದೇ ಬುಧವಾರ ಸಂಭ್ರಮದಿAದ ಆಚರಿಸುತ್ತಿದೆ.
ಯೋಗ ಭಾರತಿ ಆಯೋಜಿಸುತ್ತಿರುವ ಯೋಗಭ್ಯಾಸದ ಪ್ರಯೋಜನವನ್ನು ಪ್ರತಿನಿತ್ಯ ಬೆಳಿಗ್ಗೆ ೫.೩೦ಕ್ಕೆ ಪ್ರಾಣಾಯಾಮದ ಮೂಲಕ ಮಡಿಕೇರಿಯ ನೂರಾರು ಮಂದಿ ಪಡೆದುಕೊಂಡಿದ್ದಾರೆ. ಸ್ತಿçÃಯರಿಗಾಗಿ ಯೋಗ ಸಂಧ್ಯಾ ಹೆಸರಿನಲ್ಲಿ ೧೦ ವರ್ಷಗಳಿಂದ ಯೋಗ ತರಗತಿ ನಡೆಸಿಕೊಂಡು ಬರುತ್ತಿದೆ.
ರಥಸಪ್ತಮಿಯಂದು ಮಡಿಕೇರಿಯ ಯೋಗಭ್ಯಾಸಿಗಳೊಂದಿಗೆ ೧೦೮ ಸೂರ್ಯ ನಮಸ್ಕಾರ ಮತ್ತು ಕಳೆದ ೧೦ ವರ್ಷಗಳಿಂದ ಪ್ರತೀ ತಿಂಗಳು ೨ನೇ ಶನಿವಾರ ರಾಜಾಸೀಟ್ ಉದ್ಯಾನವನದಲ್ಲಿ ೧೦೮ ಸೂರ್ಯ ನಮಸ್ಕಾರ ಅಬ್ಯಾಸ ನಡೆಸಿಕೊಂಡು ಬರುತ್ತಿರುವ ಯೋಗಭಾರತಿ ಯೋಗಾಭ್ಯಾಸಿಗಳಿಗೆ ಯೋಗ ನಡಿಗೆ, ಪ್ರಕೃತಿ ವೀಕ್ಷಣೆ, ಚಾರಣ, ಪ್ರವಾಸ ಕಾರ್ಯಕ್ರಮಗಳೊಂದಿಗೆ ಸದಾ ಉಲ್ಲಸಿತ ಉತ್ಸಾಹದ ವಾತಾವರಣವನ್ನು ನಿರ್ಮಿಸಿದ ಹಿರಿಮೆ ಹೊಂದಿದೆ.
ಯೋಗ ಭಾರತಿ ಮಡಿಕೇರಿ ಹಾಗೂ ಸುತ್ತಮುತ್ತಲಿನ ಶಾಲೆ, ಕಾಲೇಜು ಮತ್ತು ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೂ ಯೋಗಾಭ್ಯಾಸದೊಂದಿಗೆ ಯೋಗದ ಅರಿವನ್ನು ಮೂಡಿಸುವ ಪ್ರಯತ್ನ ಕೈಗೊಂಡಿದೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿಯೂ ಆನ್‌ಲೈನ್ ಮೂಲಕ ತನ್ನ ಶಿಕ್ಷಣಾರ್ಥಿಗಳಿಗೆ ಮಹೇಶ್ ಯೋಗ ಕಲಿಸುವ ಮೂಲಕ ಆರೋಗ್ಯ ಸಂರಕ್ಷಣೆಯ ಕಾಳಜಿ ತೋರಿದ್ದರು.
ಕಳೆದ ೨೫ ವರ್ಷಗಳಲ್ಲಿ ೮೦೦ ಕ್ಕೂ ಅಧಿಕ ಮಂದಿ ಯೋಗ ಭಾರತಿಯಲ್ಲಿ ಯೋಗ ಕಲಿತ್ತಿದ್ದಾರೆ. ಆರಂಭದಲ್ಲಿ ಕೇವಲ ೧ ರೂಪಾಯಿ ದಿನದ ಶುಲ್ಕವಾಗಿ ಪಡೆಯುತ್ತಿದ್ದೆವು. ಆನಂತರ ಭಾರತೀಯ ವಿದ್ಯಾಭವನದ ಕಟ್ಟಡ ಬಾಡಿಗೆ ನೀಡಬೇಕೆಂಬ ಹಿನ್ನೆಲೆಯಲ್ಲಿ ಶುಲ್ಕವನ್ನು ಕೊಂಚ ಹೆಚ್ಚಿಸಲಾಗಿದೆಯೇ ವಿನಾಃ ಯಾವುದೇ ರೀತಿಯಲ್ಲಿಯೂ ಯೋಗವನ್ನು ವಾಣಿಜ್ಯೀಕರಣದ ಅಭ್ಯಾಸವಾಗಿ ಪರಿಗಣಿಸಿಲ್ಲ. ಹೀಗಾಗಿಯೇ ಯೋಗ ಭಾರತಿ ಇಂದಿಗೂ ತನ್ನ ಶಿಕ್ಷಣದ ಹಿರಿಮೆಯನ್ನು ಸಮಾಜದಲ್ಲಿ ಕಾಪಾಡಿಕೊಂಡಿದೆ ಎಂದು ಮಹೇಶ್ ಕುಮಾರ್ ಹೆಮ್ಮೆಯಿಂದ ನುಡಿದರು. ೨೫ ವರ್ಷಗಳಿಂದ ಯೋಗ ಭಾರತಿಯಲ್ಲಿ ೫ ಮಂದಿ ಹಿರಿಯರು ನಿರಂತರ ಯೋಗಭ್ಯಾಸ ಮಾಡುತ್ತಾ ಬಂದಿರುವುದೂ ಯೋಗಭಾರತಿಯ ಹೆಮ್ಮೆಗೆ ಕಾರಣವಾಗಿದೆ.
ಮೋದಿಯವರು ಪ್ರಧಾನಿಯಾದ ಬಳಿಕ ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿಯೂ ಯೋಗಕ್ಕೆ ಮನ್ನಣೆ ದೊರಕಿತು. ಹೀಗಾಗಿ ಯೋಗ ಕಲಿಯುವವರ ಸಂಖ್ಯೆಯೂ ಹೆಚ್ಚಾಯಿತು. ಆರೋಗ್ಯದ ಮೇಲೆ ಯೋಗದಿಂದ ಆಗುವ ಪ್ರಯೋಜನದ ಬಗ್ಗೆಯೂ ಜಾಗೃತಿ ಉಂಟಾಯಿತು. ಯೋಗನಾ ಎಂದು ತಾತ್ಸಾರ ಮಾಡುತ್ತಿದ್ದವರು ನನಗೂ ಯೋಗ ಕಲಿಸಿ ಎಂದು ಕೋರುವಂತಾಯಿತು ಎಂದು ಮಹೇಶ್ ಕುಮಾರ್ ಸ್ಮರಿಸುತ್ತಾರೆ.
ಯೋಗ ಮಾಡಿದವನಿಗೆ ರೋಗವಿಲ್ಲ ಎಂಬ ನಾಣ್ಣುಡಿಯಂತೆ, ದಿನನಿತ್ಯ ಯೋಗಭ್ಯಾಸ ಮಾಡುತ್ತಾ ಯೋಗ ಭಾರತಿಯ ಹಿರಿಮೆಯ ಯೋಗಕ್ಕೆ ಕಾರಣರಾಗಿರುವ ಅನೇಕರು ಯೋಗದಿಂದ ತಮಗೆ ಆಗಿರುವ ಪ್ರಯೋಜನವನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಳ್ಳುತ್ತಾರೆ. ಸಮಯಪಾಲನೆಗೆ ಕಾರಣವಾಗಿರುವ ಯೋಗಭ್ಯಾಸ, ದಿನವಿಡೀ ತನ್ನಲ್ಲಿ ಉಲ್ಲಾಸವನ್ನು ಕಾಪಾಡಿಕೊಳ್ಳಲೂ ನೆರವಾಗಿದೆ. ಯೋಗ ಮಾಡಿದ ಬಳಿಕ ಇಡೀ ದಿನ ಸುಸ್ತಾಗದೇ ಉತ್ಸಾಹದಿಂದ ಇರುವಂತಾಗಿದೆ. ಯೋಗದಿಂದ ಆರೋಗ್ಯದ ಮೇಲಾಗುವ ಪ್ರಯೋಜನ ನೂರಾರು ಎಂದು ೨೦ ವರ್ಷಗಳಿಂದ ಯೋಗ ಭಾರತಿಯ ಮೂಲಕ ಯೋಗಭ್ಯಾಸ ಮಾಡುತ್ತಿರುವ ವಕೀಲ ಜಿ.ಆರ್. ರವಿಶಂಕರ್ ಹೇಳುತ್ತಾರೆ.
ಮಡಿಕೇರಿಯಲ್ಲಿ ಮಳೆಯಿರಲಿ, ಚಳಿಯಿರಲಿ ಗಾಳಿಯೇ ಇರಲಿ, ಬಿಸಿಲೇ ಬರಲಿ.. ಯೋಗ ಭಾರತಿ ಮಾತ್ರ ಯೋಗಭ್ಯಾಸಿಗಳ ನೆಚ್ಚಿನ ತಾಣವಾಗಿ ಯೋಗ ಶಿಕ್ಷಣದ ಮೂಲಕ ಆರೋಗ್ಯ ಸಂರಕ್ಷಣೆಗೂ ಮಹತ್ವದ ಕಾಣಿಕೆ ನೀಡುತ್ತಾ ಬಂದಿದೆ... ೨೫ ವರ್ಷಗಳಿಂದ..!!