ಚೆಟ್ಟಳ್ಳಿ, ಜೂ. ೧೪: ಕಾರು ಹಾಗೂ ಬುಲೆಟ್ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಾಯಗೊಂಡ ಘಟನೆ ಚೆಟ್ಟಳ್ಳಿಯ ಕಾಫಿ ಬೋರ್ಡ್ ಸಮೀಪ ನಿನ್ನೆ ಮಧ್ಯಾಹ್ನ ನಡೆದಿದೆ.

ಪೊನ್ನತ್‌ಮೊಟ್ಟೆಯಲ್ಲಿ ಜೆಸಿಬಿ ಕೆಲಸ ಮಾಡುತ್ತಿದ್ದ ಬಿಪಿನ್ ಸಿಂಗ್ (೨೪) ಎಂಬವರು ಬುಲೆಟ್ ಬೈಕ್ (ಕೆಎ-೧೨ ವಿ-೨೮೭೮) ಚಾಲನೆ ಮಾಡಿಕೊಂಡು ಮಧ್ಯಾಹ್ನ ಊಟಕ್ಕೆ ಚೆಟ್ಟಳ್ಳಿಗೆ ತೆರಳುತ್ತಿದ್ದರು. ಅವರೊಂದಿಗೆ ಮನೋಜ್ ಕುಮಾರ್ (೨೫) ಹಿಂಬದಿ ಸವಾರರಾಗಿದ್ದರು. ಮಧ್ಯಾಹ್ನ ಸುಮಾರು ೨.೩೦ ಗಂಟೆಗೆ ಕಾಫಿ ಬೋರ್ಡ್ ಸಮೀಪ ತಲುಪಿದ ವೇಳೆ ಎದುರಿನಿಂದ ಬಂದ ಕೂಡ್ಲೂರು ಚೆಟ್ಟಳ್ಳಿಯ ದಯಾನಂದ ಎಂಬವರು (ಕೆಎ-೧೨ ಎಂ.ಬಿ-೭೫೫೩) ಚಾಲಿಸುತಿದ್ದ ಕಾರು ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ.

ಅಪಘಾತದ ಪರಿಣಾಮ ಕಾರಿನ ಮುಂಭಾಗ ಹಾಗೂ ಬೈಕ್ ಜಖಂಗೊAಡಿದ್ದು ಮನೋಜ್ ಕುಮಾರ್ ಅವರಿಗೆ ಗಾಯಗಳಾಗಿದ್ದು, ಬೈಕ್ ಚಾಲಕ ಬಿಪಿನ್ ಸಿಂಗ್ ಅವರುಗಳಿಗೆ ಗಾಯವಾಗಿದೆ. ಗಾಯಾಳುಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಸಂಬAಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.