ಮಡಿಕೇರಿ, ಜೂ. ೧೩: ಜಿಲ್ಲಾ ಕೇಂದ್ರ ಮಡಿಕೇರಿಯ ಕೆಲವೊಂದು ರಸ್ತೆಗಳಲ್ಲಿ ಸಂಚಾರಕ್ಕಿAತ ಸರ್ಕಸ್ ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಗುಂಡಿ, ಕೆಸರುಮಯ ರಸ್ತೆಗಳಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಯಾವ ಮಾರ್ಗದಲ್ಲಿ ತೆರಳಬೇಕೆಂಬ ಚಿಂತೆಬಿಟ್ಟು, ಯಾವ ಗುಂಡಿ ತಪ್ಪಿಸಬೇಕೆಂಬ ಸವಾಲು ಎದುರಾಗಿದೆ..!
ಹೌದು... ಮಡಿಕೇರಿ ನಗರದ ರಸ್ತೆಗಳು ಆಡಳಿತವನ್ನು ಅಣಕಿಸುವಂತಿವೆ. ಅದರಲ್ಲೂ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ಮಾಂದಲಪಟ್ಟಿ ಹಾಗೂ ಅಬ್ಬಿಫಾಲ್ಸ್ಗೆ ತೆರಳುವ ರಸ್ತೆ ದುಸ್ಥಿತಿಯಂತೂ ಹೇಳ ತೀರಾಗಿದೆ. ಮಳೆಯೂ ಆರಂಭವಾಗಿರುವ ಕಾರಣ ಗುಂಡಿಬಿದ್ದ ರಸ್ತೆಗಳು ಕೆರೆಯಾಗಿ ಮಾರ್ಪಾಡಾಗಿ ‘ಗುಂಡಿ ಗಂಡಾAತರ’ವೇ ಸೃಷ್ಟಿಯಾಗಿದೆ.
ಮಾಂದಲಪಟ್ಟಿ-ಅಬ್ಬಿಫಾಲ್ಸ್ ತನ್ನ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಇಲ್ಲಿನ ವಾತಾವರಣಕ್ಕೆ ಪ್ರವಾಸಿಗರು ಮನಸೋಲುತ್ತಾರೆ. ಆದ್ದರಿಂದ ಪ್ರತಿವರ್ಷ ಅದರಲ್ಲೂ ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಈ ಪ್ರಕೃತಿ ವೈಭವವನ್ನು ಕಣ್ತುಂಬಿಕೊಳ್ಳಲೆAದೇ ಆಗಮಿಸುತ್ತಾರೆ. ಇಲ್ಲಿನ ಪರಿಸರ ಸೌಂದರ್ಯ ಆಸ್ವಾದಿಸಲು ಬರುವ ಪ್ರವಾಸಿಗರು ಇವೆರೆಡು ಸುಂದರ ತಾಣದ ದರ್ಶನ ಮಾಡುವ ಮುನ್ನ ‘ಆಫ್ ರೋಡ್’ ಟ್ರಾö್ಯಕ್‌ನ ಅನುಭವ ಪಡೆಯುತ್ತಿದ್ದಾರೆ. ಅದಕ್ಕೆ ಈ ರಸ್ತೆ ಕಾರಣವಾಗಿದೆ. ಮಡಿಕೇರಿ ನಗರದಿಂದ ಅಬ್ಬಿಫಾಲ್ಸ್-ಮಾಂದಲಪಟ್ಟಿಗೆ ಪ್ರವೇಶಿಸುವ ರಸ್ತೆಯ ಅಂದಾಜು ೩೦೦ ಮೀಟರ್ ದೂರ ಸಂಚರಿಸುವುದು ತ್ರಾಸದಾಯಕ ಎಂಬAತಾಗಿದೆ. ರಸ್ತೆಗಳೆಲ್ಲ ಕಿತ್ತು ಗುಂಡಿಗಳಾಗಿ ರಸ್ತೆ ಯಾವುದು ಎಂಬುದು ಅಂದಾಜಿಸುವುದೇ ಚಾಲಕರಿಗೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆನೀರು ಸರಾಗವಾಗಿ ಹರಿಯಲು ಸಾಧ್ಯವಾದ ಕಾರಣದಿಂದ ರಸ್ತೆಯ ಮೇಲೆ ನಿಲ್ಲುತ್ತಿದೆ.
ಚಾಲಕರಂತೂ ಈ ರಸ್ತೆಯ ದುಸ್ಥಿತಿಯಿಂದ ಮನನೊಂದಿದ್ದಾರೆ. ಎಲ್ಲಿ ವಾಹನದ ಭಾಗ ದುರಸ್ತಿಗೀಡಾಗುತ್ತೊ? ಕಾರಿನ ಚಕ್ರ ಹಾನಿಯಾಗುತ್ತೊ? ಎನ್ನುವ ಭೀತಿಯಲ್ಲಿಯೇ ವಾಹನ ಚಲಾಯಿಸುತ್ತಾರೆ. ಇದರ ನಡುವೆ ಆಲ್ಟೋ ಕಾರೊಂದು ಶನಿವಾರ ಗುಂಡಿಗಳ ನಡುವೆ ಸಿಲುಕಿ ಅದರ ಚಕ್ರದ ಭಾಗವೇ ತುಂಡಾಗಿ ಕಳಚಿದ ಘಟನೆ ನಡೆದಿದ್ದು, ಇದು ರಸ್ತೆ ದುಸ್ಥಿತಿಗೆ ಸಾಕ್ಷಿಯಾಗಿದೆ. ಅಲ್ಲದೆ ಈ ಮಾರ್ಗವನ್ನು ನೂರಾರು ನಿವಾಸಿಗಳು ಅವಲಂಬಿಸಿದ್ದು, ದಿನನಿತ್ಯ ಜೀವ ಕೈಯಲ್ಲಿಡಿದು ಓಡಾಡುತ್ತಿದ್ದಾರೆ. ಜೊತೆಗೆ ಈ ಮಾರ್ಗದಲ್ಲಿ ಮೆಡಿಕಲ್ ಕಾಲೇಜು, ಆರ್‌ಟಿಓ ಕಚೇರಿ ಕೂಡ ಇದ್ದು, ಕಾಲೇಜು ವಾಹನವೂ ಸಂಚರಿಸುತ್ತದೆ. ಏನಾದರೂ ಅಪಾಯ ಸಂಭವಿಸಿದರೆ ಯಾರು ಹೊಣೆ? ಎಂಬ ಪ್ರಶ್ನೆಯನ್ನು ಜನರು ಮಾಡುತ್ತಿದ್ದಾರೆ.
ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಸ್ಥಳೀಯ ಆಡಳಿತ ಮಾತ್ರ ಮೂಕಪ್ರೇಕ್ಷಕ ಎಂಬAತೆ ನಡೆದುಕೊಳ್ಳುತ್ತಿದೆ. ಮಳೆಗಾಲ ಮುನ್ನವೇ ಈ ಕುರಿತು ದೂರುಗಳು ಸಲ್ಲಿಕೆಯಾಗಿವೆ. ಅಲ್ಲದೆ ರೂ. ೧೮ ಲಕ್ಷ ವೆಚ್ಚದಲ್ಲಿ ರಸ್ತೆ ದುರಸ್ತಿಗೆ ಭೂಮಿಪೂಜೆಯೂ ನಡೆದಿತ್ತು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಆದರೂ ಇದುವರೆಗೂ ಕನಿಷ್ಟ ಗುಂಡಿಮುಚ್ಚುವ ಕೆಲಸಕ್ಕೂ ಕೈ ಹಾಕದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಇದೀಗ ಮಳೆ ತೀವ್ರತೆ ಪಡೆದುಕೊಂಡಿದ್ದು, ಮಳೆಗಾಲ ಮುಗಿಯುವ ತನಕ ಕಾಮಗಾರಿ ಅಸಾಧ್ಯವಾಗಿದೆ. ಇದರೊಂದಿಗೆ ನಿನ್ನೆಯಷ್ಟೆ ಮಾಂದಲಪಟ್ಟಿಗೆ ಜೀಪ್ ಸಂಚಾರ ಮುಕ್ತಗೊಂಡಿದ್ದು, ವಾಹನ ದಟ್ಟಣೆ ಮತ್ತಷ್ಟು ಹೆಚ್ಚಾಗಿದೆ. ಮುಂದೆ ಈ ರಸ್ತೆ ಮತ್ತಷ್ಟು ಹಾಳಾಗಿ ಸಂಚಾರ ಸಂಚಕಾರವಾಗಿ ಪರಿಣಮಿಸುವ ಭೀತಿ ಎದುರಾಗಿದೆ.