ಮಡಿಕೇರಿ, ಜೂ. ೧೨: ಮಾಂದಲಪಟ್ಟಿ ಗಿರಿಧಾಮಕ್ಕೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರ ನಿರ್ದೇಶನದ ಮೇರೆಗೆ ನಿರ್ಮಿಸಲಾದ ರೂ. ೬೦ ಲಕ್ಷ ವೆಚ್ಚದ ೪ ಕಿ.ಮೀ. ರಸ್ತೆಯನ್ನು ಹೊದ್ದೂರು ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎ. ಹಂಸ ಸ್ಥಳೀಯ ಮುಖಂಡರೊAದಿಗೆ ಉದ್ಘಾಟನೆ ಮಾಡಿದರು.
ಸ್ಥಳೀಯ ನಿವಾಸಿಗಳು, ಗ್ರಾಮಸ್ಥರು ಹಾಗೂ ಬಾಡಿಗೆ ಜೀಪ್ ಮಾಲೀಕರ ಕೋರಿಕೆ ಮೇರೆಗೆ ಶಾಸಕರು ಈ ರಸ್ತೆಯನ್ನು ನಿರ್ಮಾಣ ಮಾಡಿಸಿದ್ದು, ನಿಯಮ ಬಾಹಿರ ಚಟುವಟಿಕೆಗಳು ಪ್ರವಾಸಿ ತಾಣದಲ್ಲಿ ನಡೆಯದಂತೆ ಎಚ್ಚರವಹಿಸಬೇಕು ಎಂದು ಹಂಸ ಹೇಳಿದರು. ಕಾಲೂರು ಗ್ರಾಮಕ್ಕೆ ಬಸ್ ಬರುವ ರಸ್ತೆ ಹದಗೆಟ್ಟಿದ್ದು ತಕ್ಷಣಕ್ಕೆ ತಾತ್ಕಾಲಿಕ ದುರಸ್ತಿ ಕಾರ್ಯಕ್ಕೆ ಡಾ. ಮಂತರ್ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಬಾಡಿಗೆ ಜೀಪ್ ಚಾಲನೆ ಮಾಡಿ ಬದುಕು ಕಟ್ಟಿಕೊಂಡಿರುವ ನೂರಾರು ಕುಟುಂಬಗಳ ಹಿತದೃಷ್ಟಿಯಿಂದ ಮತ್ತು ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ಡಾ. ಮಂತರ್ ಗೌಡ ಕೊಡಗು ಫಾರೆಸ್ಟ್ ಫೌಂಡೇಶನ್ ನಿಧಿಯಿಂದ ರೂ. ೫೦ ಲಕ್ಷ, ರಾಜ್ಯ ಸರ್ಕಾರದ ವನ್ಯಜೀವಿ ವಿಭಾಗದ ಅನುದಾನದಲ್ಲಿ ರೂ. ೧೦ ಲಕ್ಷ ಸೇರಿದಂತೆ ಒಟ್ಟು ರೂ. ೬೦ ಲಕ್ಷ ಒದಗಿಸಿದ ಮೇರೆಗೆ ಇಲಾಖೆ ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ೪ ತಿಂಗಳುಗಳ ಕಾಲ ಕಾಮಗಾರಿ ನಡೆಸಿ ಈಗ ಲೋಕಾರ್ಪಣೆ ಮಾಡಲಾಗಿದೆ ಎಂದರು. ಹದಿನೈದು ದಿನಗಳಲ್ಲಿ ಶಾಸಕರು ಕಾಲೂರು ಗ್ರಾಮಕ್ಕೆ ಬಂದು ಗ್ರಾಮಸ್ಥರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಮಡಿಕೇರಿ ವಿಭಾಗದ ವಲಯ ಅರಣ್ಯ ಅಧಿಕಾರಿ ಹೆಚ್.ಎಸ್. ಶಿವಕುಮಾರ್, ಉಪ ವಲಯ ಅರಣ್ಯಾಧಿಕಾರಿ ಭರತ್ ಎಂ.ಕೆ. ಮುಖಂಡರಾದ ಕೊಂಬಾರನ ಗಣಪತಿ, ಜಾನ್ಸನ್ ಪಿಂಟೋ, ವಕೀಲ ರೋಷನ್ ಗಣಪತಿ, ಕವನ್ ಕೊತ್ತೋಳಿ, ಅರ್ಜುನ್, ಶರಣ್, ಸ್ಥಳೀಯ ಮುಖಂಡರಾದ ಸಿದ್ದಂಡ ಪವನ್, ಚಂಡಿರ ರಾಜ, ಚೆನ್ನಪಂಡ ನರೆನ್ ಸೋಮಯ್ಯ, ನಂದಿರ ಹರಿ, ಚೆನ್ನಪಂಡ ಗಿರೀಶ್, ಚೆನ್ನಪಂಡ ನಂದ, ಚೆನ್ನಪಂಡ ಗೋವಿಂದ, ತಂಬುಕುತ್ತಿರ ರಮೇಶ್, ವಿಜು, ಕುಂಞಣ್ಣಿ, ಅರಣ್ಯ ಇಲಾಖೆ ಸಿಬ್ಬಂದಿಗಳಾದ ಚೇತನ್, ಹನುಮಂತ ರಾಯಪ್ಪ ಸೇರಿದಂತೆ ಗ್ರಾಮಸ್ಥರು, ಪ್ರವಾಸಿಗರು ಹಾಜರಿದ್ದರು.