ಸೋಮವಾರಪೇಟೆ,ಜೂ.೧೨: ಪ್ರವಾಸಿಗರ ನೆಚ್ಚಿನ ತಾಣವಾಗಿ ರೂಪುಗೊಂಡಿರುವ ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಬೇಳೂರು ಬಾಣೆ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿಯನ್ನೂ ಸೇರಿಸಿ ಖಾಸಗಿ ಕ್ಲಬ್ನವರು ಬೇಲಿ ಹಾಕಿರುವುದು ಸರ್ವೆ ಕಾರ್ಯದಿಂದ ಬಹಿರಂಗವಾಗಿದೆ.
ಸರ್ವೆ ಇಲಾಖೆಯ ವರದಿ ಹೊರ ಬೀಳುತ್ತಿದ್ದಂತೆ ಅಕ್ರಮವಾಗಿ ಹಾಕಿರುವ ಬೇಲಿಯನ್ನು ತೆರವುಗೊಳಿಸಬೇಕೆಂದು ಬೇಳೂರು ಬಾಣೆ ರಕ್ಷಣಾ ಹೋರಾಟ ಸಮಿತಿಯು ಒತ್ತಾಯಿಸಿದ್ದರೆ, ಪ್ರಕರಣ ಈಗಾಗಲೇ ಕೋರ್ಟ್ ಮೆಟ್ಟಿಲೇರಿದೆ ಎಂದು ಸ್ಥಳೀಯ ಕ್ಲಬ್ನವರು ಹೇಳಿದ್ದು, ಪೂರಕ ದಾಖಲೆಗಳನ್ನು ಸಲ್ಲಿಸಿಲ್ಲ ಎನ್ನಲಾಗಿದೆ.
ಸರ್ಕಾರಿ ಜಾಗವನ್ನೂ ಒಳಗೊಂಡAತೆ ಖಾಸಗಿ ಕ್ಲಬ್ನವರು ಬೇಲಿ ಅಳವಡಿಸಿ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬAಧಿಸಿದAತೆ ಸರ್ವೆ ನಡೆಸಿ ವರದಿ ನೀಡಲು ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ ಅವರು ಕಳೆದ ಮೇ ೧೮ರಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದ್ದರು.
ಕುಸುಬೂರು ಗ್ರಾಮದ ಸ.ನಂ. ೮೬/೨ ರ ೮.೪೪, ಏಕ್ರೆ ಸ.ನಂ. ೧೪೪/೬ ರ ೦.೩೦ ಏಕ್ರೆ, ೧೪೪/೭ ರ ೧.೨೯ ಏಕ್ರೆ, ಸ.ನಂ.೧೩೪/೫ ರ ೦.೨೩ ಏಕ್ರೆ, ಸ.ನಂ. ೧೪೪/೨ ರ ೧.೫೪ ಏಕ್ರೆ, ಸ.ನಂ.೧೪೪/೩ ರ ೧.೧೬ ಏಕ್ರೆ, ಸ.ನಂ. ೧೪೪/೧ ರ ೧೬೨ ಏಕ್ರೆ, ಸ. ನಂ.೧೪೩/೧ ರ ೧.೬, ಏಕ್ರೆ, ಸ.ನಂ. ೧೪೩/೧ ರ ೩.೧೨ ಏಕ್ರೆ, ಸ.ನಂ. ೧೩೪/೭ ರ ೦.೨೪ ಏಕ್ರೆ, ಸ.ನಂ. ೧೩೪/೮ ರ ೦.೨೨ ಏಕ್ರೆ, ಸ.ನಂ.೧೪೩/೪ ರ ೨.೦೦ ಏಕ್ರೆ, ಸ.ನಂ. ೧೪೪/೪ ರ ೮.೪೧ ಏಕ್ರೆ, ಸ.ನಂ. ೧೩೪/೬ ರ ೦.೭೫ ಏಕ್ರೆ ಒಟ್ಟು ೨೯.೩೨ ಏಕ್ರೆ ಜಾಗವು ‘ಬೇಳೂರು ಕ್ಲಬ್ ಆನರರಿ ಸೆಕ್ರೆಟರಿ’ ರವರ ಹೆಸರಿನಲ್ಲಿ ಪಹಣಿ ದಾಖಲಿರುವುದಾಗಿದೆ. ಇದು ಬೇಳೂರು ಕ್ಲಬ್ ಇವರ ಸ್ವಾಧೀನದಲ್ಲಿದ್ದು, ಸದರಿ ಜಮೀನು ಇವರ ಕಾರ್ಯ ನಿರ್ವಹಣೆಯಲ್ಲಿರುತ್ತದೆ.
ವಿವಿಧ ಸರ್ವೆ ನಂಬರುಗಳ ಒಟ್ಟು ೨೯.೩೨ ಏಕ್ರೆ ಹಾಗೂ ಈಗಾಗಲೇ ಜಿಲ್ಲಾಧಿಕಾರಿಯವರ ಆದೇಶ ಸಂ. ಜಾಗ/೦೮/೨೦೧೫-೧೬ ದಿ.೦೬-೦೪-೨೦೧೬ ರಂತೆ ಪ್ರವಾಸೋದ್ಯಮ ಇಲಾಖೆಗೆ ಕಾಯ್ದಿರಿಸಲಾದ ಪೈಸಾರಿ ಸರ್ವೆ ನಂ. ೧೪೩/೨ರ ೭.೧೨ ಏಕ್ರೆ ಜಮೀನು ಮತ್ತು ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಬೇಳೂರು ಮಠದ ಆಸ್ತಿಗಳು ಒಂದಕ್ಕೊAದು ಲಗತ್ತಾಗಿರುತ್ತದೆ. ಈ ಮಧ್ಯೆ ಪ್ರವಾಸೋದ್ಯಮ ಇಲಾಖೆಯ ಸರ್ವೆ ನಂ. ೧೪೩.೨ರ ೭.೧೨ ಏಕ್ರೆ ಜಮೀನಿನ ಹದ್ದುಬಸ್ತು/ಗಡಿ ಗುರುತಿಸಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಿಗೆ ಅವರ ಜಾಗವನ್ನು ಹಸ್ತಾಂತರಿಸಲಾಗಿರುತ್ತದೆ.
ಈ ನಡುವೆ ಬೇಳೂರು ಬಾಣೆ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿನ ಒತ್ತುವರಿ ಮಾಡಿರುವ ಬಗ್ಗೆ, ಕಡಂಗ ಹಾಗೂ ನಕಾಶೆ ಕಂಡ ದಾರಿ ಒತ್ತುವರಿ ಆಗಿರುವ ಬಗ್ಗೆ ಬೇಳೂರು ಬಾಣೆ ಹೋರಾಟ ಸಮಿತಿ ಪದಾಧಿಕಾರಿಗಳು ಆರೋಪಿಸಿದ್ದು, ವಸ್ತು ಸ್ಥಿತಿಯನ್ನು ಪರಿಶೀಲಿಸಬೇಕಿರುವುದರಿಂದ ದೂರುದಾರರು, ಬೇಳೂರು ಕ್ಲಬ್ ಪ್ರತಿನಿಧಿಗಳು ಹಾಗೂ ಪ್ರವಾಸೋಧ್ಯಮ ಇಲಾಖಾ ಸಮಕ್ಷಮ ಸರ್ವೆ ಕಾರ್ಯ ನಡೆಸಲು ದಿನಾಂಕ ನಿಗದಿಪಡಿಸಿಕೊಂಡು ಜಾಗದಲ್ಲಿ ಬೇಳೂರು ಕ್ಲಬ್ ವತಿಯಿಂದ ಸರ್ಕಾರಿ ಜಾಗ, ಕಡಂಗ, ನಕಾಶೆ ಕಂಡ ದಾರಿ ಏನಾದರೂ ಒತ್ತುವರಿಯಾಗಿದೆಯೇ ಎಂಬುದನ್ನು ಪೊಲೀಸ್ ರಕ್ಷಣೆಯೊಂದಿಗೆ ಸರ್ವೆಯಿಂದ ಪರಿಶೀಲಿಸಿ ನಿಖರವಾದ ವರದಿ ನೀಡಬೇಕೆಂದು ತಹಶೀಲ್ದಾರರು ಸೂಚನೆ ನೀಡಿದ್ದರು.
ಅದರಂತೆ ಹೋರಾಟ ಸಮಿತಿ, ಸ್ಥಳೀಯ ಕ್ಲಬ್, ಪ್ರವಾಸೋದ್ಯಮ ಇಲಾಖೆ, ಗ್ರಾಮಸ್ಥರ ಸಮ್ಮುಖದಲ್ಲಿ ಕಳೆದ ತಾ. ೨೭.೦೫.೨೦೨೬ರಂದು ಸರ್ವೆಯರ್ ನರಸಯ್ಯ ಅವರ ನೇತೃತ್ವದಲ್ಲಿ ಬೇಳೂರು ಬಾಣೆ ಜಾಗವನ್ನು ಸರ್ವೆ ಮಾಡಲಾಗಿದ್ದು, ವರದಿಯಲ್ಲಿ ಸರ್ಕಾರಿ ಜಾಗವನ್ನೂ ಒಳಗೊಂಡAತೆ ಕ್ಲಬ್ನವರು ಬೇಲಿ ಹಾಕಿರುವುದು ಬಹಿರಂಗವಾಗಿದೆ.
ತಹಶೀಲ್ದಾರರಿಗೆ ಸಲ್ಲಿಸಿರುವ ವರದಿಯಲ್ಲಿ ಬೇಳೂರು ಬಾಣೆ ಪ್ರದೇಶದ ಸ.ನಂ. ೮೬/೧ರ ಪೈಕಿ ೧.೫೦ ಏಕರೆ ಪೈಸಾರಿ ಜಾಗವಿದೆ. ೧೪೪/೫ರ ೦.೯೦ ಏಕರೆ ಕಡಂಗ ಜಾಗ(ಆರ್ಟಿಸಿಯಲ್ಲಿ ಪೈಸಾರಿ) ಬಂಡಿದಾರಿ ಮತ್ತು ಕಾಲು ದಾರಿಯಾಗಿದೆ. ಸ.ನಂ.೧೩೪/೨ರ ಪೈಕಿ ೩.೮೦ ಏಕರೆ ಜಾಗವಿದ್ದು, ಇದಕ್ಕೆ ಒತ್ತಿಕೊಂಡAತೆ ಕ್ಲಬ್ನ ಜಾಗವಿದ್ದು, ಸರ್ಕಾರಿ ಜಾಗವನ್ನೂ ಸೇರಿಸಿ ಕ್ಲಬ್ನವರು ಬೇಲಿ ಹಾಕಿದ್ದಾರೆ. ಈ ಜಾಗವು ಆರ್ಟಿಸಿಯಂತೆ ಊರುಡುವೆ ಜಾಗವಾಗಿದೆ. ೮೬/೧ಸಿ. ರಲ್ಲಿ ೩.೯೦ ಏಕರೆ ಜಾಗವಿದ್ದು, ಸದರಿ ಪ್ರದೇಶವು ಗ್ರಾಮ ನಕಾಶೆಯಲ್ಲಿ ದಾಖಲಾಗಿದೆ. ಆದರೆ ಆರ್ಟಿಸಿ ಹಾಗೂ ಆಕಾರಬಂದುವಿನಲ್ಲಿ ದಾಖಲಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ ಪ್ರವಾಸೋದ್ಯಮ ಇಲಾಖೆಗೆ ಒಳಪಡುವ ಜಾಗಕ್ಕೂ ಬೇಲಿ ಹಾಕಿರುವುದರಿಂದ ಪ್ರವಾಸಿಗರ ಪ್ರವೇಶಕ್ಕೆ ತಡೆಬಿದ್ದಿದೆ. ಆದರೂ ಇಲಾಖೆಯಿಂದ ಯಾವುದೇ ಕ್ರಮ ಕೈಗೊಂಡಿಲ್ಲ. ಮಾಹಿತಿ ಹಕ್ಕಿನಡಿ ಕೇಳಲಾದ ಪ್ರಶ್ನೆಗೆ ಬೇಲಿ ಹಾಕಲು ಅನುಮತಿ ನೀಡಿಲ್ಲ, ಪ್ರವಾಸಿಗರಿಗೆ ನಿರ್ಬಂಧ ವಿಧಿಸಿಲ್ಲ ಎಂದಷ್ಟೇ ಮಾಹಿತಿ ಒದಗಿಸಿದ್ದು, ಹಾಕಿರುವ ಬೇಲಿ ತೆರವುಗೊಳಿಸಲು ಸಂಬAಧಿಸಿದ ಕ್ಲಬ್ಗೆ ಯಾವುದೇ ಸೂಚನೆ ನೀಡಿಲ್ಲ. ಇದೂ ಸಹ ಹೋರಾಟ ಸಮಿತಿಯ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಸರ್ಕಾರಿ ಜಾಗವು ಒತ್ತುವರಿಯಾಗಿರುವುದು ಅಧಿಕೃತವಾಗಿ ಸರ್ವೆಯಿಂದ ತಿಳಿದುಬಂದಿದ್ದು, ಊರುಡುವೆ ಜಾಗವೂ ಇರುವುದರಿಂದ ಅರಣ್ಯ ಇಲಾಖೆಯ ಮೇಲೂ ಜವಾಬ್ದಾರಿ ಬಂದಿದೆ. ಕಂದಾಯ, ಅರಣ್ಯ, ಪ್ರವಾಸೋದ್ಯಮ ಇಲಾಖೆ ತಮ್ಮ ಜಾಗವನ್ನು ಉಳಿಸಿಕೊಳ್ಳಲು ಯಾವ ಕ್ರಮ ಕೈಗೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ. - ವಿಜಯ್ ಹಾನಗಲ್