ಮಡಿಕೇರಿ, ಜೂ. ೧೨: ಸ್ವಚ್ಛತೆಗೆ ಆದ್ಯತೆ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಾಪೋಕ್ಲು ವ್ಯಾಪ್ತಿಯಲ್ಲಿ ಶಾಸಕ ಎ.ಎಸ್ ಪೊನ್ನಣ್ಣ ಹಾಗೂ ಅoಜಚಿgu.ಛಿom ಸಹಭಾಗಿತ್ವದಲ್ಲಿ ಪ್ರಾರಂಭಗೊAಡ ಕಸದ ಬುಟ್ಟಿ ವಿತರಣೆ ಅಭಿಯಾನ ಯಶಗೊಂಡಿದ್ದು ಇದೀಗ ಆ ವ್ಯಾಪ್ತಿಯಲ್ಲಿ ೧೦೦ ಕಸದ ಬುಟ್ಟಿಗಳನ್ನು ಆಯ್ದ ಸ್ಥಳಗಳಲ್ಲಿ ಉಚಿತವಾಗಿ ಅಳವಡಿಸಿ ಪಟ್ಟಣದಾದ್ಯಂತ ಹರಡುತ್ತಿದ್ದ ಕಸ-ತ್ಯಾಜ್ಯದ ಸುಲಭ ನಿರ್ವಹಣೆ ಸಾಧ್ಯವಾಗಿದೆ. ಈ ಹಿಂದೆ ಸುಮಾರು ೫೦ ಕಸದ ಬುಟ್ಟಿಗಳನ್ನು ವಿದ್ಯಾಸಂಸ್ಥೆಗಳು, ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳ ಹೊರಾವರಣ ಸೇರಿದಂತೆ ಸಂಘ-ಸAಸ್ಥೆಗಳ ಆವರಣದಲ್ಲಿ ಇರಿಸಿ ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಬುಟ್ಟಿಗಳಿಗೆ ಹಾಕುವಂತೆ ಆಯಾ ಸ್ಥಳದಲ್ಲಿನ ಸಾರ್ವಜನಿಕರಿಗೆ ಮನವಿ ಮಾಡಲಾಗಿತ್ತು.
ಇದೀಗ ನಾಪೋಕ್ಲು ಪಟ್ಟಣ ವ್ಯಾಪ್ತಿಯಲ್ಲಿ ಅಂಗಡಿ ಮಳಿಗೆಗಳು, ಸರಕಾರಿ ಕಚೇರಿಗಳು ಸೇರಿದಂತೆ ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಬುಟ್ಟಿಗಳನ್ನು ಇರಿಸಲಾಗಿದೆ.
ಕಳೆದ ತಿಂಗಳು ಸುಮಾರು ೫೦ ಬುಟ್ಟಿಗಳನ್ನು ವಿದ್ಯಾಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು ಹಾಗೂ ಸಂಘ-ಸAಸ್ಥೆಗಳಿಗೆ ವಿತರಿಸಲಾಗಿತ್ತು. ಇದಕ್ಕೆ ಸಾರ್ವಜನಿಕರು ಉತ್ತಮವಾಗಿ ಪ್ರತಿಕ್ರಿಯಿಸಿದ್ದು, ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಇದೀಗ ನಾಪೋಕ್ಲು ವ್ಯಾಪ್ತಿಯಲ್ಲಿ ಒಟ್ಟು ೧೦೦ ಕಸದ ಬುಟ್ಟಿಗಳನ್ನು ಇರಿಸಲಾಗಿದೆ. ಸಣ್ಣ ಅಂಗಡಿ-ಮಳಿಗೆಗಳು, ವಾಣಿಜ್ಯ ಕಟ್ಟಡಗಳ ಎದುರು ಹಾಗೂ ಹೆಚ್ಚು ಜನರ ಸಮಾಗಮವಾಗುವ ಸಾರ್ವಜನಿಕ ಸ್ಥಳಗಳಲ್ಲಿಯೂ ಬುಟ್ಟಿಗಳನ್ನು ಇರಿಸಲಾಗಿದೆ. ಈ ಬುಟ್ಟಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಪ್ರತಿನಿತ್ಯ ನಾಪೋಕ್ಲು ಗ್ರಾಮ ಪಂಚಾಯಿತಿ ವತಿಯಿಂದ ಸಂಗ್ರಹಿಸಿ ವಿಲೇವಾರಿ ಮಾಡುವ ಕಾರ್ಯವೂ ಇದೀಗ ಪ್ರಾರಂಭಗೊAಡಿದೆ.