ಸೋಮವಾರಪೇಟೆ, ಜೂ. ೧೧: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ೨ ಲೀಟರ್‌ಗಿಂತ ಕಡಿಮೆ ಪ್ರಮಾಣದ ಬಾಟಲ್‌ಗಳ ಮಾರಾಟ-ಖರೀದಿ-ಶೇಖರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಪಟ್ಟಣ ಪಂಚಾಯಿತಿ ಆದೇಶ ಹೊರಡಿಸಿದ್ದು, ಉಲ್ಲಂಘನೆಯಾದರೆ ದಂಡದೊAದಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ.
ಸಾರ್ವಜನಿಕರ ಹಾಗೂ ಪರಿಸರದ ಹಿತದೃಷ್ಟಿಯಿಂದ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ೨ ಲೀಟರ್‌ಗಿಂತ ಕಡಿಮೆ ಪ್ರಮಾಣದ ಎಲ್ಲಾ ತರಹದ ಕುಡಿಯುವ ನೀರಿನ ಬಾಟಲಿಗಳ ಮಾರಾಟ, ಖರೀದಿ ಹಾಗೂ ಶೇಖರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಪ.ಪಂ. ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರು ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಸರ್ಕಾರದಿಂದ ನಿಷೇಧಿಸಿರುವ ಏಕ ಬಳಕೆ ಪ್ಲಾಸ್ಟಿಕ್ (ಕವರ್, ಇಯರ್ ಬಡ್ಸ್, ಸ್ಟಾç ಪೈಪ್, ಕ್ಯಾಂಡಿ ಮತ್ತು ಐಸ್ ಕ್ರೀಮ್ ಕಡ್ಡಿಗಳು, ಅಲಂಕಾರ ವಸ್ತುಗಳು, ಪ್ಯಾಕಿಂಗ್ ಸಾಮಾಗ್ರಿಗಳು, ಆಮಂತ್ರಣ ಪತ್ರಿಕೆಗಳು ಇತ್ಯಾದಿ) ಸಹ ನಿಷೇಧಿಸಿರುವುದರಿಂದ ಸಾರ್ವಜನಿಕರು, ಉದ್ದಿಮೆದಾರರು ಹಾಗೂ ಪ್ರವಾಸಿಗರು ಬಳಸದಂತೆ ಕೋರಲಾಗಿದೆ.
ಆದ್ದರಿಂದ ಉದ್ದಿಮೆದಾರರು ತಕ್ಷಣದಿಂದ ಜಾರಿಗೆ ಬರುವಂತೆ ೨ ಲೀಟರ್‌ಗಿಂತ ಕಡಿಮೆ ಪ್ರಮಾಣದ ಎಲ್ಲಾ ತರಹದ ಕುಡಿಯುವ ನೀರಿನ ಬಾಟಲಿಗಳನ್ನು ಮಾರಾಟ ಹಾಗೂ ಸಂಗ್ರಹಿಸದAತೆ ಹಾಗೆಯೇ ಸರ್ಕಾರದಿಂದ ನಿಷೇಧಿಸಿರುವ ಏಕ ಬಳಕೆ ಪ್ಲಾಸ್ಟಿಕ್ ಮಾರಾಟ ಮಾಡುವುದು, ಸಂಗ್ರಹಿಸುವುದನ್ನು ಕೂಡಲೇ ಸ್ಥಗಿತಗೊಳಿಸಬೇಕು. ತಪ್ಪಿದ್ದಲ್ಲಿ ದಂಡ ವಿಧಿಸಲಾಗುವುದು ಹಾಗೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಅವರು ತಿಳಿಸಿದ್ದಾರೆ.