ಕೋವರ್ಕೊಲ್ಲಿ ಇಂದ್ರೇಶ್
ಬೆಂಗಳೂರು, ಜೂ. ೧೧: ಎರಡು ತಿಂಗಳ ಹಿಂದೆ ಅಮೇರಿಕಾ ಪ್ರವಾಸಿ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಲಾದ ಕೊಡಗು ಜಿಲ್ಲೆಯ ಹೋಂಸ್ಟೇಯೊAದರ ಮಾಲೀಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಹೋಂಸ್ಟೇಗಳನ್ನು ನಿಯಂತ್ರಿಸುವAತೆ ಬುಧವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಅರ್ಜಿ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, “ಹೋಂಸ್ಟೇಗಳನ್ನು ನಿಯಂತ್ರಿಸಬೇಕಾಗಿದೆ; ಅವು ಅಣಬೆಗಳಂತೆ ಬೆಳೆದಿವೆ, ಅವು ಎಲ್ಲಿವೆ ಮತ್ತು ಅಲ್ಲಿ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ. ಪ್ರತಿಯೊಬ್ಬರ ಸುರಕ್ಷತೆಯೂ ಅಪಾಯದಲ್ಲಿದೆ” ಎಂದು ಹೇಳಿದರು.
ಕಳೆದ ಏಪ್ರಿಲ್ ೨೨ ರಂದು ತನ್ನ ಕೆಲಸಗಾರನೊಂದಿಗೆ ಬಂಧಿಸಲ್ಪಟ್ಟ ರೆಸಾರ್ಟ್ ಮಾಲೀಕರು ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ಮತ್ತು ಅವರ ಬಂಧನವನ್ನು ಕಾನೂನುಬಾಹಿರವೆಂದು ಘೋಷಿಸಲು ಮತ್ತು ತಮ್ಮನ್ನು ಅಕ್ರಮವಾಗಿ ಬಂಧಿಸಿದ್ದಕ್ಕಾಗಿ ಅವರಿಗೆ ೧೫ ಲಕ್ಷ ಪರಿಹಾರವನ್ನು ನೀಡುವಂತೆ ಕೋರಿದ್ದರು.
ಏಪ್ರಿಲ್ ೧೨ ರಂದು ಹೋಂಸ್ಟೇ ಕೆಲಸಗಾರ ೩೩ ವರ್ಷದ ಅಮೇರಿಕಾ ಪ್ರವಾಸಿಗಳ ಮೇಲೆ ಮದ್ಯ ಸೇವಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು. ಮಹಿಳೆ ಹೋಂಸ್ಟೇ ಬಿಟ್ಟು ಮೈಸೂರಿಗೆ ತೆರಳುವಾಗ ಅಮೇರಿಕಾ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಈ ವಿಷಯ ಪೊಲೀಸರ ಗಮನಕ್ಕೆ ಬಂದಿತು.
ಅಮೇರಿಕಾದ ಅತಿಥಿಯ ದೂರಿನ ಆಧಾರದ ಮೇಲೆ, ವಿದೇಶಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ರೆಸಾರ್ಟ್ ಕೆಲಸಗಾರ ಹಾಗೂ ರೆಸಾರ್ಟ್ ಮಾಲೀಕರನ್ನು ಏಪ್ರಿಲ್ ೧೯ ರಂದು ಬಂಧಿಸಿದ್ದರು. ನಂತರ ಜಿಲ್ಲಾ ನ್ಯಾಯಾಲಯವು ಮೇ ೨ ರಂದು ಹೋಂಸ್ಟೇ ಮಾಲೀಕರಿಗೆ ಜಾಮೀನು ನೀಡಿತ್ತು. ಆದರೆ ಜೂನ್ ೪ ರಂದು ಕೆಲಸಗಾರನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್)ನ ಸೆಕ್ಷನ್ ೬೪(೧) ಅತ್ಯಾಚಾರ, ೩೫೧ (೨) ಕ್ರಿಮಿನಲ್ ಬೆದರಿಕೆ, ೨೩೮, ಮತ್ತು ೨೩೯ ರ ಅಡಿಯಲ್ಲಿ ಅಪರಾಧವನ್ನು ಮಾಡಲು ಯೋಜನೆ ರೂಪಿಸಿದ್ದಕ್ಕಾಗಿ ಮತ್ತು ಸುಳ್ಳು ಮಾಹಿತಿಯನ್ನು ನೀಡಿದ ಆರೋಪ ಹೊರಿಸಲಾಗಿತ್ತು.
ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಅಂಗದ್ ಕಾಮತ್, ಮಹಿಳೆ ತನ್ನ ದೂರಿನಲ್ಲಿ ಆರೋಪಿಯ ವಿವರಣೆಯನ್ನು "ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಬಗ್ಗೆ" ನೀಡಿದ್ದಾರೆ ಎಂದು ವಾದಿಸಿದರು. "ಆಪಾದಿತ ಘಟನೆಯ ಸಮಯದಲ್ಲಿ, ಮಾಲೀಕರು ಸ್ಥಳದಲ್ಲಿಯೇ ಇರಲಿಲ್ಲ ಎಂಬುದು ಸಿಸಿಟಿವಿ ದೃಶ್ಯಾವಳಿಗಳ ಸಾಕ್ಷಿಯಿಂದ ಸ್ಪಷ್ಟವಾಗುತ್ತದೆ ಎಂದು ವಾದಿಸಿದರು.
"ಅತ್ಯಾಚಾರದ ಆರೋಪ ತಮ್ಮ ವಿರುದ್ಧ ಇಲ್ಲದಿರುವುದರಿಂದ ಹೊರಿಸಲಾಗಿರುವ ಇತರ ಎಲ್ಲಾ ಅಪರಾಧಗಳು ಜಾಮೀನು ನೀಡಬಹುದಾದ ಅಪರಾಧ ಗಳಾಗಿವೆ. ಎಫ್ಐಆರ್ನಲ್ಲಿ ಕೇವಲ ಒಂದು ಆರೋಪ ಇರುವುದರಿಂದ ಪೊಲೀಸರು ತಮ್ಮನ್ನು ಬಂಧಿಸಿದ್ದರಿAದ ತಾವು ತೀವ್ರ ಅವಮಾನ ಅನುಭವಿಸಿದ್ದು ತಮ್ಮ ಘನತೆ, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಗೌರವಕ್ಕೆ ಕುಂದು ಉಂಟಾಗಿದೆ. ಅಕ್ರಮವಾಗಿ ಬಂಧಿಸಲಾಗಿದ್ದು ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗಿದೆ. ಹೀಗಾಗಿ ೧೫ ಲಕ್ಷ ರೂಪಾಯಿಗಳ ಪರಿಹಾರ ಕೋರಿದ್ದೇನೆ ಎಂದು ರೆಸಾರ್ಟ್ ಮಾಲೀಕರ ಪರ ವಕೀಲರು ವಾದಿಸಿದ್ದರು.
ಘಟನೆಯ ನಂತರ ಹೋಂಸ್ಟೇಯ ಬುಕ್ಕಿಂಗ್ ವೆಬ್ಸೈಟ್, ಹೋಂಸ್ಟೇಯನ್ನು ತನ್ನ ಪಟ್ಟಿಯಿಂದ ತೆಗೆದುಹಾಕುವುದಾಗಿ ಮಾಲೀಕರಿಗೆ ತಿಳಿಸಿ ತೆಗೆದು ಹಾಕಿರುವುದರಿಂದ ಯಾವುದೇ ಬುಕ್ಕಿಂಗ್ ಇರದೇ ಹೋಂಸ್ಟೇ ಮಾಲೀಕರು ನಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಕಾಮತ್ ಹೇಳಿದರು. "ಇದೇ ಪ್ರವೃತ್ತಿ ಮುಂದುವರಿದರೆ, ಭಾರತದಲ್ಲಿ ಯಾರೂ ವ್ಯವಹಾರ ಮಾಡಲು ಸಾಧ್ಯವಾಗುವುದಿಲ್ಲ" ಎಂದು ಅವರು ಹೇಳಿದರು. ಆದರೆ ಹೆಚ್ಚುವರಿ ರಾಜ್ಯ ಸಾರ್ವಜನಿಕ ಅಭಿಯೋಜಕ ಬಿ.ಎನ್. ಜಗದೀಶ ಅವರು ಈ ವಾದವನ್ನು ವಿರೋಧಿಸಿದರು. "ಅತ್ಯಾಚಾರ ಮಾಡುವ ಸಾಮಾನ್ಯ ಉದ್ದೇಶವಿದೆ ಎಂದು ನಾವು ಹೇಳುತ್ತಿಲ್ಲ, ಸಾಕ್ಷö್ಯಗಳನ್ನು ನಾಶಮಾಡುವ ಸಾಮಾನ್ಯ ಉದ್ದೇಶವಿದೆ ಎಂದು ನಾವು ಹೇಳುತ್ತಿದ್ದೇವೆ, ಸಾಕ್ಷಿಗಳನ್ನು ಬೆದರಿಸುವ ಸಾಮಾನ್ಯ ಉದ್ದೇಶವಿದೆ ಎಂದು ನಾವು ಹೇಳುತ್ತಿದ್ದೇವೆ" ಎಂದು ಹೇಳಿದರು.
ಸಂತ್ರಸ್ತೆಯ ಚಾಟ್ ಸಂದೇಶಗಳನ್ನು ಉಲ್ಲೇಖಿಸಿದ ಜಗದೀಶ, ದೂರುದಾರರು ಲೈಂಗಿಕ ದೌರ್ಜನ್ಯದ ಬಗ್ಗೆ ತಮ್ಮ ಪೋಷಕರಿಗೆ ತಿಳಿಸಿದ್ದರು ಎಂದು ಹೇಳಿದರು. "ಅಪರಾಧ ನಡೆದ ನಂತರ ಆರೋಪಿ ಬಳಸಿದ ಟಿಶ್ಯೂಗಳನ್ನು ಸಹ ಸಂತ್ರಸ್ತೆ ಸಂಗ್ರಹಿಸಿದ್ದರು. ಘಟನೆಯ ನಂತರ ಸಂತ್ರಸ್ಥೆ ಸಂತೋಷದಿAದಲೇ ಹೋಂಸ್ಟೇ ತೆರವುಗೊಳಿಸಿ ಹೋದರು ಎಂಬುದು ಸರಿಯಲ್ಲ. ಘಟನೆ ನಂತರ ಸಂತ್ರಸ್ತೆ ಟೆಂಟ್ನಿAದ ಮನೆಗೆ ಸ್ಥಳಾಂತರ ಬಯಸಿದರು ಎಂಬ ಅಂಶವು ಇಬ್ಬರು ವಿಭಿನ್ನ ವ್ಯಕ್ತಿಗಳಿಂದ ಎರಡು ಬಾರಿ ಹಲ್ಲೆಗೊಳಗಾದ ಕಾರಣ ಅವರು ಲಾಕ್ ಆಗಿ ಒಳಗೆ ಇರಲು ಬಯಸಿದ್ದರು ಎಂದು ಹೇಳುತ್ತದೆ" ಎಂದು ಹೇಳಿದರು. ಇದಲ್ಲದೆ, ಜಗದೀಶ ನ್ಯಾಯಾಲಯಕ್ಕೆ, "ಅವರ ಬಂಧನದ ಆಧಾರದ ಮೇಲೆ, ಅವರು (ರೆಸಾರ್ಟ್ ಮಾಲೀಕರು) ಅತ್ಯಾಚಾರ ಎಸಗಿದ್ದಾರೆ ಎಂದು ನಾವು ಹೇಳಿಲ್ಲ. ಅವರು ಹೋಂಸ್ಟೇ ನಡೆಸುತ್ತಿರುವ ವ್ಯಕ್ತಿ ಎಂದು ಮಾತ್ರ ನಾವು ಹೇಳಿದ್ದೇವೆ, ಆದ್ದರಿಂದ ಸಾಕ್ಷö್ಯಗಳನ್ನು ನಾಶಪಡಿಸುವ ಮತ್ತು ಸಾಕ್ಷಿಯನ್ನು ಬೆದರಿಸುವ ಸಾಧ್ಯತೆಗಳಿವೆ" ಎಂದು ವಾದಿಸಿದರು. ಅರ್ಜಿದಾರರು ತಮ್ಮನ್ನು ಬಂಧಿಸಲು ಕಾರಣವನ್ನು ಕೋರಿದರು.
ಆದೇಶವನ್ನು ಕಾಯ್ದಿರಿಸುವಾಗ ಪೀಠವು, "ಈ ಅಪರಾಧವು ಗಂಭೀರವಾಗಿದೆ, ನಿಮ್ಮ ಪಾತ್ರ ಏನೆಂದು ನಾವು ನೋಡುತ್ತೇವೆ ಮತ್ತು ಮುಂದೆ ಆದೇಶಗಳನ್ನು ನೀಡುತ್ತೇವೆ" ಎಂದು ಹೇಳಿ ಮೊಕದ್ದಮೆಯ ವಿಚಾರಣೆಯನ್ನು ಮುಂದೂಡಿತು.