ಗೋಣಿಕೊಪ್ಪ ವರದಿ, ಜೂ. ೦೮ ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ಬಿ. ಡಿವಿಜನ್ ಹಾಕಿ ಟೂರ್ನಿಯಲ್ಲಿ ೬ ತಂಡಗಳು ಗೆಲುವು ದಾಖಲಿಸಿದವು.

ಅಂಜಿಗೇರಿ ನಾಡ್ ತಂಡವು ೧೧-೦ ಗೋಲುಗಳಿಂದ ಪೊನ್ನಂಪೇಟೆ ಸ್ಪೋರ್ಟ್ಸ್ ಹಾಸ್ಟೆಲ್ ಬಿ ತಂಡವನ್ನು ಮಣಿಸಿತು. ಅಂಜಿಗೇರಿ ಪರ ಸಚಿನ್ ೨, ಲವ ೨, ಸುಪ್ರಿತ್, ಗೌತಂ, ಸಿದ್ದಾಂತ್, ಪೊನ್ನಣ್ಣ, ಅಯ್ಯಪ್ಪ, ಅಕ್ಷಿತ್, ಬೋಪಣ್ಣ ತಲಾ ಒಂದೊAದು ಗೋಲು ಬಾರಿಸಿದರು.

ಕುತ್ತಾö್ನಡ್ ಸ್ಟೆçöÊಕರ್ಸ್ ತಂಡವು ಟಾಟಾ ಕಾಫಿ ಲಿಮಿಟೆಡ್ ತಂಡದ ವಿರುದ್ದ ೨-೧ ಗೋಲುಗಳ ಜಯ ಸಾಧಿಸಿತು. ಕುತ್ತಾö್ನಡ್ ಪರ ಸುಚನ್, ದೇವಯ್ಯ, ಟಾಟಾ ಕಾಫಿ ಆಟಗಾರ ಅಭಿಷೇಕ್ ಗೋಲು ಬಾರಿಸಿದರು.

ಕಿರ್ಗೂರ್ ತಂಡವು ಡ್ರಿಬ್‌ಲ್ ಹೆಂಪ್ ವಿರುದ್ದ ೪-೦ ಗೋಲುಗಳ ಜಯ ಪಡೆದುಕೊಂಡಿತು. ಕಿರ್ಗೂರ್ ಪರ ಅಚ್ಚಯ್ಯ ಹಾಗೂ ಜಗತ್ ತಲಾ ೨ ಗೋಲು ಬಾರಿಸಿದರು.

ಅಮ್ಮತ್ತಿ ಎಎಸ್‌ಸಿ ತಂಡವು ಕುಶಾಲನಗರ ಟೈಕೂನ್ಸ್ ವಿರುದ್ದ ೨-೧ ಗೋಲುಗಳ ಗೆಲುವು ಪಡೆಯಿತು. ಅಮ್ಮತ್ತಿ ಆಟಗಾರ ನಾಣಯ್ಯ ೨, ಟೈಕೂನ್ ಆಟಗಾರ ಕಿಶನ್ ೧ ಗೋಲು ಹೊಡೆದರು.

ವೀರಾಜಪೇಟೆ ಕೊಡವ ಸಮಾಜ ತಂಡವು ೨-೧ ಗೋಲುಗಳಿಂದ ನಾಪೋಕ್ಲು ವೆಟರನ್ ತಂಡವನ್ನು ಮಣಿಸಿತು. ವೀರಾಜಪೇಟೆ ಪರ ರೋಹನ್, ಪ್ರಫುಲ್ ಬಿದ್ದಪ್ಪ, ನಾಪೋಕ್ಲು ಪರ ವಿಪನ್ ಸೋಮಯ್ಯ ಒಂದೊAದು ಗೋಲು ಹೊಡೆದರು.

ವೀರಾಜಪೇಟೆ ಟವರ್ಸ್ ತಂಡ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ತಂಡವನ್ನು ೫-೦ ಗೋಲುಗಳಿಂದ ಮಣಿಸಿತು. ಟವರ್ಸ್ ಪರ ಕೋಳೆರ ನಾಣಯ್ಯ ೨, ಮಾಚಯ್ಯ, ಚಮನ್, ತಮ್ಮಯ್ಯ ತಲಾ ಒಂದೊAದು ಗೋಲು ಹೊಡೆದರು.