ಮಡಿಕೇರಿ, ಜೂ. ೮: ಕೊಡವ ಭಾಷಿಕ ಸಮುದಾಯಗಳ ೨೧ ಜನಾಂಗದಲ್ಲೊAದಾದ ಕೋಲೆಯ ಸಮಾಜದ ವಾರ್ಷಿಕ ಮಹಾಸಭೆ ವೀರಾಜಪೇಟೆ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜರುಗಿತ್ತು. ಸಮಾಜದ ಹಿರಿಯರು ಹಾಗೂ ವೈದ್ಯರಾದ ಕೋಲೆಯಂಡ ಮೋಹನ್ ಅಪ್ಪಾಜಿ ಭಾಗವಹಿಸಿ ಮಾತನಾಡುತ್ತಾ, ಜನಾಂಗದ ಏಳಿಗೆಯಲ್ಲಿ ಸಮಾಜ ಸ್ಥಾಪನೆ ಅವಶ್ಯಕ. ಸಮಾಜದ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವಂತಾಗಬೇಕೆAದರು. ಸಭೆಯಲ್ಲಿ ಅಂಬಾAಡಿರ ಗಣೇಶ್, ಗಣಪತಿ, ಕೈಪಂಗಡ ರಾಜ ಅವರು ಭಾಗವಹಿಸಿದ್ದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಸಮಾಜದ ಅಧ್ಯಕ್ಷ ಕೋಲೆಯಂಡ ಗಿರೀಶ್ ಮಾತನಾಡುತ್ತಾ, ಕೊಡವ ಭಾಷಿಕ ಸಮುದಾಯಗಳ ಕೂಟದ ಮೂಲಕ ಕೈಗೊಳ್ಳುವ ಸಮಾಜಮುಖಿ ಕಾರ್ಯಗಳಿಗೆ, ಕ್ರೀಡಾಕೂಟಗಳಿಗೆ ಸಮಾಜ ಕೈ ಜೋಡಿಸಲಿದೆ ಎಂದು ಹೇಳಿದರು.
ಸಭೆಯಲ್ಲಿ ಜನಾಂಗಕ್ಕಾಗಿ ದುಡಿದ ಹಿರಿಯ ಜೀವಗಳಾದ ಕೋಲೆಯಂಡ ಗಪ್ಪು ಸೋಮಯ್ಯ ಹಾಗೂ ಕೈಪೆಂಗಡ ಪಾಲಿ ಪೂವಮ್ಮ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ರೇಖಾ ಹಾಗೂ ಅಂಕಿತರವರು ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಅಂಬಾAಡಿರ ರಾಜು ರಾಮಯ್ಯ ಸ್ವಾಗತಿಸಿದರು. ಉಪಾಧ್ಯಕ್ಷ ಅಂಬಾಡಿರ ಕಾರ್ಯಪ್ಪ ವಂದಿಸಿದರು.