ನಾಪೋಕ್ಲು ಶೌರ್ಯ ತಂಡ

ನಾಪೋಕ್ಲು: ಇಲ್ಲಿನ ಶೌರ್ಯ ವಿಪತ್ತು ನಿರ್ವಹಣಾ ತಂಡ ಶ್ರಮದಾನ ನಡೆಸಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿತು.

ಚೆರಿಯಪರಂಬು ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶೌಂi

ÀÄð ವಿಪತ್ತು ನಿರ್ವಹಣಾ ತಂಡದ ಸದಸ್ಯರು ಶ್ರಮದಾನ ನಡೆಸಿ, ಹಣ್ಣಿನ ಗಿಡಗಳನ್ನು ನೆಟ್ಟು ಪರಿಸರ ದಿನವನ್ನು ಆಚರಿಸಿದರು.

ಈ ಸಂದರ್ಭ ತಂಡದ ಸ್ವಯಂಸೇವಕರಾದ ಉಮಾಲಕ್ಷಿö್ಮ, ರಮ್ಯ, ಶಂಕರ, ದಿಲಿಶ್, ಮಾಯಿಲಪ್ಪ, ಶರವಣ, ಆನಂದ, ಶಾಲಾ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು.

ಬ್ರೆöÊಟ್ ಪಬ್ಲಿಕ್ ಶಾಲೆ

ವೀರಾಜಪೇಟೆ: ಇಲ್ಲಿನ ಬ್ರೆöÊಟ್ ಪಬ್ಲಿಕ್ ಶಾಲೆಯಲ್ಲಿ ಪರಿಸರ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಕುರಿತು ಮಾದರಿಗಳ ಸ್ಪರ್ಧೆ, ಭಾಷಣ ಸ್ಪರ್ಧೆ, ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಟ್ರಸ್ಟ್ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರೆಹೆಮಾನ್ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿ, ಬಹಳ ಕ್ಷÄಲ್ಲಕವೆಂದು ನಾವು ಪರಿಗಣಿಸುವ ಎಲ್ಲಾ ಜೀವಿಗಳೂ ಭೂಮಿಗೆ ಅಮೂಲ್ಯವಾಗಿದೆ. ಭೂಮಿಯು ಎಲ್ಲಾ ಜೀವಿಗಳನ್ನೂ ಒಂದೇ ರೀತಿ ನೋಡುತ್ತದೆ. ಆದುದರಿಂದ ಭೂಮಿಗೆ ಮರಳಿ ನೀಡುವುದು ಮಾನವನ ಕರ್ತವ್ಯವಾಗಿದೆ. ಪರಿಸರವನ್ನು ಸಂರಕ್ಷಿಸಲು ನಡೆಸುವ ಎಲ್ಲಾ ಪ್ರಯತ್ನಗಳಿಗೂ ಸಮಾನವಾದ ಮಹತ್ವವಿದೆ ಎಂದರು. ಪರಿಸರ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಬೋಧಿಸಿದರು.

ಮುಖ್ಯ ಶಿಕ್ಷಕ ಹೇಮಂತ್‌ಕುಮಾರ್ ಸಹ ಶಿಕ್ಷಕರುಗಳಾದ ಹರ್ಷವರ್ಧನ್, ದೀಪಕ್, ಶಿಕ್ಷಕರುಗಳಾದ ಆಶಾ ಸತೀಶ್, ಶಾಹಿದ, ನೌಫಿಯ, ಸುಮಯ್ಯ, ಸಿಬ್ಬಂದಿ ಸುಂದರಿ, ಶಾನಿದ್ ಹಾಜರಿದ್ದರು.

ಬಾರಿಕಾಡು

ಮಡಿಕೇರಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಾರಿಕಾಡುವಿನಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಬಡಾವಣೆಯ ಬಾರಿಕಾಡು ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನ ಆಚರಣೆ ಮಾಡಲಾಯಿತು. ಈ ಸಂರ್ಭ ಶಾಸಕ ಎ.ಎಸ್. ಪೊನ್ನಣ್ಣ ಹಾಜರಿದ್ದರು.

ಅಲ್ ಮದ್ರಸತುಲ್ ಇಸ್ಲಾಮಿಯಾ

ವೀರಾಜಪೇಟೆ: ಬ್ರೆöÊಟ್ ಕ್ಯಾಂಪಸ್‌ನಲ್ಲಿರುವ ಅಲ್ ಮದ್ರಸತುಲ್ ಇಸ್ಲಾಮಿಯಾದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಕ್ಯಾಂಪಸ್ ಮೈದಾನದಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು.

ವಿದ್ಯಾರ್ಥಿಗಳಿಗೆ ದಿನದ ಮಹತ್ವದ ಕುರಿತು ಪ್ರಾಂಶುಪಾಲೆ ಪಿ.ಎ.ಝೈನಬಾ ರೆಹೆಮಾನ್ ವಿವರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ಅಹಮದ್ ಬಷೀರ್, ಇ.ವಿ.ಶಂಶೀರ, ಎನ್.ಎನ್.ಫಾತಿಮ, ಎಂ.ಎA. ನೌಷಿಬ, ರೆಹೆಮತ್ ಟಿ.ಪಿ, ನಜ್ಮ ಎಂ.ಟಿ.ಪಿ ಹಾಜರಿದ್ದರು.

ಡೋಮಿನೋಸ್ ಯುವಜನ ಸಂಘ

ಮಡಿಕೇರಿ: ಡೋಮಿನೋಸ್ ಕಲಾ ಮತ್ತು ಕ್ರೀಡಾ ಯುವಜನ ಸಂಘದ ಆಶ್ರಯದಲ್ಲಿ ನೆಲ್ಲಿಹುದಿಕೇರಿಯ ಡೋಮಿನೋಸ್ ಉದ್ಯಾನವನದಲ್ಲಿ ಶ್ರಮದಾನ ನಡೆಸಿ ವಿವಿಧ ಬಗೆಯ ಹಣ್ಣು ಹಾಗೂ ಹೂವಿನ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಡೊಮಿನೊಸ್ ಕಲಾ ಕ್ರೀಡಾ ಯುವಜನ ಸಂಘದ ಸಹ ಕಾರ್ಯದರ್ಶಿ ಶೌಕತ್, ನಿರ್ದೇಶಕರಾದ ಮುಸ್ತಫ, ಸದಸ್ಯರುಗಳಾದ ಶರವಣ, ಅನಸ್, ಸನಿಲ್, ಆಶಿಮ್, ಸಾಧಿಕ್, ರಹೀಸ್, ಪೈಜಸ್, ಅಪ್ಸಲ್, ಪಾಲ್ಗೊಂಡಿದ್ದರು.

ನಿಡ್ತ ಪ್ರೌಢಶಾಲೆ

ಶನಿವಾರಸಂತೆ: ಸಮೀಪದ ನಿಡ್ತ ಸರ್ಕಾರಿ ಪ್ರೌಢಶಾಲೆಯಲ್ಲಿ ನಿಸರ್ಗ ಇಕೋ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು "ಪ್ರಕೃತಿಯಿಂದ ಪ್ರೇರಿತ ಹವಾಮಾನಕ್ಕಾಗಿ, ಭವಿಷ್ಯಕ್ಕಾಗಿ" ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಯಿತು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪರಿಸರ ಕಾಳಜಿಯ ಫಲಕಗಳನ್ನು ಹಿಡಿದು ಗ್ರಾಮದಲ್ಲಿ ಘೋಷಣೆ ಕೂಗುತ್ತಾ ಜಾಥಾ ನಡೆಸಿದರು. ನಂತರ ಶಾಲಾ ಆವರಣದಲ್ಲಿ ಬಟರ್ ಫ್ರೂಟ್, ಸಪೋಟ, ಮಾವು, ಸೀಬೆ ಇತರ ಹಣ್ಣುಗಳ ಗಿಡಗಳನ್ನು ನೆಡುವ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲಾಯಿತು.

ವಿಜ್ಞಾನ ಶಿಕ್ಷಕ ಡಿ.ಎಸ್. ಮಧುಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕಿ ಎಂ.ಸಿ. ನಳಿನಿ ಮಾತನಾಡಿ, ವಿದ್ಯಾರ್ಥಿಗಳು ಪ್ರತಿನಿತ್ಯ ಪರಿಸರದ ಬಗ್ಗೆ ಕಾಳಜಿ ತೋರಬೇಕು. ಮನೆಯಂಗಳದಲ್ಲಿ ಪ್ರತಿ ವಿದ್ಯಾರ್ಥಿಯು ಒಂದೊAದು ಗಿಡ ನೆಟ್ಟು ಪೋಷಿಸಬೇಕು ಎಂದು ಕರೆ ನೀಡಿದರು. ಶಿಕ್ಷಕರಾದ ಮಾರುತಿ ಆರೇರ, ಎಂ.ವಿ. ರೂಪಾ, ಪ್ರಿಯಾಂಕಾ ಚಿಪಳೂನಕರ, ಸಂಗೀತಾ, ಸಿಬ್ಬಂದಿ ಹಾಜರಿದ್ದರು.

ಅನ್ವಾರುಲ್ ಹುದಾ ಪಬ್ಲಿಕ್ ಶಾಲೆ

ಕಡಂಗ: ವೀರಾಜಪೇಟೆಯ ಅನ್ವಾರುಲ್ ಹುದಾ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲ ಹಸೈನಾರ್ ಎನ್. ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪರಿಸರ ಸಂರಕ್ಷಣೆ ಹಾಗೂ ಹಸಿರು ಪರಿಸರದ ಮಹತ್ವದ ಕುರಿತು ಅನ್ವಾರುಲ್ ಹುದಾ ಶಿಕ್ಷಣ ಸಂಸ್ಥೆಗಳ ಸದಸ್ಯ ಯಾಕೂಬ್ ರಿಜ್ವಿ ಮಾತನಾಡಿದರು.

ವಿದ್ಯಾರ್ಥಿಗಳಿಗಾಗಿ ವಿವಿಧ ಪರಿಸರ ಸಂಬAಧಿತ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಲ್ಲದೆ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆಯ ಸಂದೇಶ ಸಾರಿದರು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತಾಧಿಕಾರಿ ಇಲ್ಯಾಸ್ ಅನ್ವಾರಿ ಉಪಸ್ಥಿತರಿದ್ದರು. ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾವೇರಿ ಪ.ಪೂ. ಕಾಲೇಜು

ಪೊನ್ನಂಪೇಟೆ: ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವತಿಯಿಂದ ವಿಶ್ವ ಪರಿಸರ ದಿನ ಆಚರಿಸಲಾಯಿತು. ಈ ಸಂದರ್ಭ ಕಾಲೇಜು ಆವರಣದಲ್ಲಿ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಗಿಡಗಳನ್ನು ನೆಟ್ಟು, ಪರಿಸರ ಸ್ವಚ್ಛತಾ ಕಾರ್ಯ ಕೈಗೊಂಡರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ವಿದ್ಯಾರ್ಥಿಗಳು ಗಿಡ ನೆಟ್ಟು ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕಲ್ಪಿಸಬೇಕು ಎಂದರು.

ಈ ಸಂದರ್ಭ ಹಿರಿಯ ಉಪನ್ಯಾಸಕ ಪಿ.ಸಿ. ಬ್ರೆöÊಟ್ ಕುಮಾರ್, ಎನ್‌ಎಸ್‌ಎಸ್ ಅಧಿಕಾರಿಗಳಾದ ಚೇತನ್ ಚಿಣ್ಣಪ್ಪ, ವಿಪ್ರ ನೀಲಮ್ಮ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಚೆಯ್ಯಂಡಾಣೆ ಪ್ರಾಥಮಿಕ ಶಾಲೆ

ಚೆಯ್ಯಂಡಾಣೆ: ಸ್ಥಳೀಯ ಸರಕಾರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವುದರ ಮೂಲಕ ಆಚರಿಸಲಾಯಿತು. ಮುಖ್ಯ ಶಿಕ್ಷಕಿ ವಿಮಲಾ ಪರಿಸರ ಸಂರಕ್ಷಣೆಯ ಕುರಿತು ಮಾತನಾಡಿದರು. ಈ ಸಂದರ್ಭ ಅತಿಥಿ ಶಿಕ್ಷಕಿ ಜಿಜ್ಞ, ಪೋಷಕರಾದ ಸುಜಾತ, ವಿದ್ಯಾರ್ಥಿಗಳು, ಮತ್ತಿತರರು ಉಪಸ್ಥಿತರಿದ್ದರು.

ಪೊನ್ನಂಪೇಟೆ ಜೂನಿಯರ್ ಕಾಲೇಜು

*ಗೋಣಿಕೊಪ್ಪ: ಆಧುನಿಕತೆಯ ಭರದಲ್ಲಿ ಸಾಗುತ್ತಿರುವ ಇಂದಿನ ಪ್ರಪಂಚದಲ್ಲಿ ಪರಿಸರದ ಸಂರಕ್ಷಣೆಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪೊನ್ನಂಪೇಟೆ ಜೂನಿಯರ್ ಕಾಲೇಜಿನಲ್ಲಿ ಗಿಡ ನೆಟ್ಟು ಪರಿಸರ ಜಾಗೃತಿ ಮೂಡಿಸಿ ಮಾತನಾಡಿದರು.

ಮನುಷ್ಯ ಮತ್ತು ಈ ಭೂಮಿಯ ಸಕಲ ಜೀವರಾಶಿಗೆ ಉತ್ತಮವಾದ ವಾತಾವರಣದಲ್ಲಿ ಜೀವಿಸಲು ಪರಿಸರದ ಸಂರಕ್ಷಣೆ ಅತ್ಯಂತ ಪ್ರಾಮುಖ್ಯತೆ ಹೊಂದಿದೆ. ಆದ್ದರಿಂದ, ಭವಿಷ್ಯದ ನಮ್ಮ ನಾಡು ಹಾಗೂ ಪ್ರಪಂಚದ ಉಳಿವಿಗಾಗಿ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯತ್ತ ಗಮನಹರಿಸಬೇಕೆಂದು ಕರೆ ನೀಡಿದರು.

ಉಸಿರಾಡಲು ಶುದ್ಧವಾದ ಗಾಳಿ ಮಾತ್ರವಲ್ಲದೆ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಶುಚಿತ್ವ ಕಾಪಾಡಲು ಪ್ರತಿಯೊಬ್ಬರು ಜವಾಬ್ದಾರಿ ವಹಿಸಿಕೊಳ್ಳಬೇಕು. ಶುಚಿತ್ವ ಇರುವ ಸಮಾಜ ಸ್ವಸ್ಥ ಸಮಾಜವಾಗಿರುತ್ತದೆ ಎಂದು ಹೇಳಿದರು.

ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಸಂಜನಾ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಆಲೀರ ರಶೀದ್, ಹಿರಿಯ ಮೂಕಳೇರ ಕುಶಾಲಪ್ಪ, ಎರ್ಮು ಹಾಜಿ, ರಾಜು, ಪಕ್ಷದ ಮುಖಂಡರು ಸಾಜಿ ಅಚ್ಚುತನ್, ತಿತೀರ ಮಂದಣ್ಣ, ಹ್ಯಾರೀಸ್, ಸಾದಲಿ, ಅರಣ್ಯ ಅಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.