ಚೆಟ್ಟಳ್ಳಿ, ಜೂ. ೬: ಹುಲಿಯೊಂದು ಹಸು ಹಾಗೂ ಕರುವನ್ನು ಕೊಂದು ತಿಂದುಹಾಕಿದ ಘಟನೆ ಚೆಟ್ಟಳ್ಳಿಯ ಶ್ರೀಮಂಗಲ ಗ್ರಾಮದ ಜೇನುಕೊಲ್ಲಿಯಲ್ಲಿ ನಡೆದಿದೆ. ಕಳೆದ ಎರಡು ಮೂರು ದಿನಗಳಿಂದ ಕುಯ್ಯಮುಡಿ ಮೋತಿಲಾಲ್ ಎಂಬವರ ಹಸು ಹಾಗೂ ಕರು ಕಾಣೆಯಾಗಿದ್ದು, ಈ ಹಿನ್ನೆಲೆಯಲ್ಲಿ ಹುಡುಕಾಡಿದ್ದಾಗ ತೋಟದ ಸಮೀಪವೇ ಹುಲಿ ಸಂಪೂರ್ಣ ತಿಂದು ಹಾಕಿರುವ ಎರಡು ವಯಸ್ಸಿನ ಪುಟ್ಟ ಕರು ಹಾಗೂ ೬ ವಯಸ್ಸಿನ ಹಸು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ಬಳಿಕ ಅರಣ್ಯ ಇಲಾಖೆಗೆ ಈ ಬಗ್ಗೆ ತಿಳಿಸಿದ್ದಾರೆ. ಮೀನುಕೊಲ್ಲಿ ಶಾಖೆಯ ಉಪವಲಯ ಅರಣ್ಯ ಅಧಿಕಾರಿ ಸಚಿನ್ ನಿಂಬಾಳ್ಕರ್ ಹಾಗೂ ಅರಣ್ಯ ಇಲಾಖಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಪಶು ವೈದ್ಯ ಡಾ.ಸಂಜೀವ ಆರ್ ಸಿಂಧೆ ಮರಣೋತರ ಪರೀಕ್ಷೆ ನಡೆಸಿದರು. ಹುಲಿ ಧಾಳಿ ಘಟನೆಯಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕೊಡಗು ಜಿಲ್ಲೆಯ, ಸೋಮವಾರಪೇಟೆ ತಾಲೂಕಿನ, ಚೆಟ್ಟಳ್ಳಿ ಶ್ರೀಮಂಗಲ ಗ್ರಾಮದ ಜೇನುಕೊಲ್ಲಿ ಬೆಟ್ಟದಲ್ ಕೋರನ್ ಎಸ್ಟೇಟ್ ಸುತ್ತಮುತ್ತ ಹುಲಿ ಕಂಡುಬAದಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದಿರುವAತೆ, ಹುಲಿಯ ಸುಳಿವು ಕಂಡುಬAದಲ್ಲಿ ಅರಣ್ಯ ಇಲಾಖೆಯ ಸಹಾಯವಾಣಿ ಸಂಖ್ಯೆ ೮೨೭೭೧೨೪೪೪೪ಗೆ ಕರೆ ಮಾಡಿ ತಿಳಿಸಬೇಕೆಂದು ಇಲಾಖೆ ಕೋರಿದೆ.
- ಕರುಣ್ ಕಾಳಯ್ಯ