ಮಡಿಕೇರಿ, ಜೂ. ೬: ಕೊಡಗಿನ ಕ್ರೀಡಾಪಟು ಒಲಂಪಿಯನ್ ಡಾ. ಅಂಜಪರವAಡ ಬಿ. ಸುಬ್ಬಯ್ಯ ಹಾಗೂ ಪ್ರೀತ ದಂಪತಿಯ ಪುತ್ರಿ ರಿಯಾ ಪೊನ್ನಮ್ಮ ಹಾಗೂ ನಡಿಕೇರಿಯಂಡ ದಿ. ಪ್ರವೀಣ್ ಹಾಗೂ ಸೋನಾ ಕಾಳಪ್ಪ ಅವರ ಪುತ್ರ ನಿಖಿಲ್ ಬಿದ್ದಪ್ಪ ಅವರುಗಳ ವಿವಾಹ ತಾ. ೪ ರಂದು ಬೆಂಗಳೂರು ಕೊಡವ ಸಮಾಜದಲ್ಲಿ ನೆರವೇರಿತು.
ಈ ವಿವಾಹ ಸಂಭ್ರಮ ಜಿಲ್ಲೆ ಸೇರಿದಂತೆ ವಿವಿಧೆಡೆಯ ಕ್ರೀಡಾಪಟುಗಳ ಅಪರೂಪದ ಸಮ್ಮಿಲನಕ್ಕೂ ವೇದಿಕೆಯಾಗಿದ್ದು, ಹಾಲಿ, ಮಾಜಿ ಕ್ರೀಡಾಪಟುಗಳು, ಜತೆಗೆ ಸೇನಾಧಿಕಾರಿಗಳೂ ಸಂಭ್ರಮದಿAದ ಪಾಲ್ಗೊಂಡಿದ್ದರು.
ಒಲAಪಿಯನ್ಗಳು, ಅರ್ಜುನ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ ವಿಜೇತ ಕ್ರೀಡಾ ಪಟುಗಳು ಜತೆಯಾಗಿ ಬೆರೆತು ಸಂಭ್ರಮಿಸಿದರು. ಜಾಫರ್ ಇಕ್ಬಾಲ್, ವಿನಿತ್ ಕುಮಾರ್, ಮಹಮ್ಮದ್ ರಿಯಾಜ್, ಧನರಾಜ್ ಪಿಳ್ಳೆ, ಆಶಿಶ್ ಬಲ್ಲಾಳ್, ಕೊಡಗಿನವರಾದ ಎಂ.ಎA. ಸೋಮಯ್ಯ, ಡಾ. ಎಂ.ಪಿ. ಗಣೇಶ್, ಪೈಕೆರ ಕಾಳಯ್ಯ, ಅಶ್ವಿನಿ ನಾಚಪ್ಪ, ಸಿ.ಎಸ್. ಪೂಣಚ್ಚ, ಎಸ್.ವಿ. ಸುನಿಲ್, ನಿಕಿನ್ ತಿಮ್ಮಯ್ಯ, ಅರ್ಜುನ್ ಹಾಲಪ್ಪ, ಕೂತಂಡ ಪೂಣಚ್ಚ, ಬಾಳೆಯಡ ಪೂಣಚ್ಚ, ಮುಕ್ಕಾಟಿರ ವಿನೋದ್ ಚಿಣ್ಣಪ್ಪ, ಕುಲ್ಲೇಟಿರ ಉತ್ತಯ್ಯ, ವಿ.ಎಸ್. ವಿನಯ್, ಬುಟ್ಟಿಯಂಡ ಚಂಗಪ್ಪ, ಕ್ರಿಕೆಟಿಗ ದೊಡ್ಡ ಗಣೇಶ್ ಸೇರಿದಂತೆ ಹಲವಾರು ಕ್ರೀಡಾ ಸಾಧಕರು, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ನಿವೃತ್ತ ಲೆಫ್ಟಿನೆಂಟ್ ಜನರಲ್ಗಳಾದ ಕೋದಂಡ ಪೂವಯ್ಯ, ಚೆನ್ನಿರ ಬನ್ಸಿ ಪೊನ್ನಪ್ಪ, ಹಾಕಿ ಕೂರ್ಗ್, ಕೊಡವ ಹಾಕಿ ಅಕಾಡೆಮಿ ಪ್ರಮುಖರು ಮತ್ತಿತರರು ಭಾಗಿಗಳಾಗಿದ್ದರು.