ಸಿದ್ದಾಪುರ, ಜೂ. ೪: ನೆಲ್ಲಿಹುದಿಕೇರಿ, ಅರೆಕಾಡು ರಸ್ತೆಯ ಅತ್ತಿಮಂಗಲ ಹಾಗೂ ನಲ್ವತ್ತೇಕರೆ, ಬೆಟ್ಟದಕಾಡು ಭಾಗದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಿರುವ ಹಾಗೂ ಮಾನವನ ಮೇಲೆ ಮತ್ತು ವಾಹನಗಳ ಮೇಲೆ ದಾಳಿ ನಡೆಸುತ್ತಿರುವ ಒಂಟಿಸಲಗವನ್ನು ಸೆರೆ ಹಿಡಿಯಲು ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ.
ಕಳೆದ ಕೆಲವು ತಿಂಗಳಿನಿAದ ಅಭ್ಯತ್‌ಮಂಗಲ, ಕಾಟಿಬಾಣೆ, ಅರೆಕಾಡು ರಸ್ತೆಯಲ್ಲಿ ಹಾಗೂ ಅತ್ತಿಮಂಗಲ ಬಳಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆ ನಡೆಸುತ್ತಾ ನಾಲ್ಕೆöÊದು ಮಂದಿಯ ಮೇಲೆ ಹಾಗೂ ಐದಾರು ವಾಹನಗಳ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿರುವ ಒಂಟಿಸಲಗವನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ ಮೇರೆಗೆ ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಹಾಗೂ ಮೀನುಕೊಲ್ಲಿ ಶಾಖೆಯ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಸೇರಿ ಈ ಒಂಟಿಸಲಗವನ್ನು ಪತ್ತೆಹಚ್ಚಿ ಅದರ ಚಲನ ವಲನವನ್ನು ಕಂಡುಹಿಡಿದು ಅದರ ಚಿತ್ರಗಳನ್ನು ಸೆರೆಹಿಡಿದು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದಾರೆ.
ಒಂಟಿಸಲಗವನ್ನು ಸೆರೆ ಹಿಡಿಯಲು ಅನುಮತಿಯನ್ನು ಕೋರಿದ್ದಾರೆ. ಸರಕಾರದಿಂದ ಅನುಮತಿ, ಆದೇಶ ಬಂದ ಬಳಿಕ ಅರಣ್ಯ ಇಲಾಖೆಯ ವತಿಯಿಂದ ಕಾರ್ಯಾಚರಣೆ ನಡೆಸಲು ಸಿದ್ಧತೆ ಕೈಗೊಳ್ಳುವ ಸಾಧ್ಯತೆ ಕಂಡು ಬಂದಿದೆ.