ತಿತಿಮತಿ ಅರಣ್ಯ ವಲಯದ ಮಜ್ಜಿಗೆಹಳ್ಳ ಸಸ್ಯಕ್ಷೇತ್ರದಲ್ಲಿ ರೈತರಿಗೆ ವಿತರಿಸಲು ೬x೯ ಮತ್ತು ೮x೧೨ ಗಾತ್ರದ ಒಟ್ಟು ೨೦,೦೦೦ ವಿವಿಧ ಜಾತಿಯ ಸಸಿಗಳನ್ನು ಬೆಳಸಿದ್ದು, ಸಸಿಗಳನ್ನು ತಾ. ೫ ರಿಂದ ವಿತರಿಸಲು ಪ್ರಾರಂಭಿಸಲಾಗುತ್ತದೆ. ೬x೯ ಗಾತ್ರದ ಸಸಿಗಳಿಗೆ ರೂ. ೩ ಮತ್ತು ೮x೧೨ ಗಾತ್ರದ ಸಸಿಗಳಿಗೆ ರೂ. ೬ ರಂತೆ ಬೆಲೆ ನಿಗದಿಪಡಿಸಲಾಗಿದ್ದು, ರೈತರು ಅರ್ಜಿ, ಆರ್.ಟಿ.ಸಿ ಮತ್ತು ಆಧಾರ್ ಕಾರ್ಡ್ನ ಪ್ರತಿಯೊಂದಿಗೆ ವಲಯ ಕಚೇರಿಯಲ್ಲಿ ದಾಖಲಾತಿ ಗಳನ್ನು ಸಲ್ಲಿಸಿ, ಸಸಿಗಳನ್ನು ಪಡೆದು ಕೊಳ್ಳುವಂತೆ ಕೋರಲಾಗಿದೆ. ವಿಶ್ವ ಪರಿಸರ ದಿನ ಮತ್ತು ವನ ಮಹೋತ್ಸವ ಕಾರ್ಯಕ್ರಮ ಆಚರಿಸುವ ಸಲುವಾಗಿ ವಿವಿಧ ಜಾತಿಯ ೧೦x೧೬ ಗಾತ್ರದ ೩೦೦೦ ಸಸಿಗಳನ್ನು ಬೆಳೆಸಿದ್ದು, ಸಸಿಗಳನ್ನು ಶಾಲಾ ಕಾಲೇಜು ಮತ್ತು ಸಂಘ-ಸAಸ್ಥೆಗಳಿಗೆ ಉಚಿತವಾಗಿ ವಿತರಿಸಲಾಗುವುದು, ಸಂಸ್ಥೆಯ ಅಧಿಕೃತ ಪತ್ರ ಮತ್ತು ಮೊಹರಿನೊಂದಿಗೆ ವಲಯ ಕಚೇರಿಗೆ ಹಾಜರಾಗಿ ಪಡೆದುಕೊಳ್ಳುವಂತೆ ತಿತಿಮತಿ ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.