ಸಿದ್ದಾಪುರ, ಜೂ. ೪: ಕಾರ್ಮಿಕರನ್ನು ಕೆಲಸ ಬಿಟ್ಟು ಕರೆತರುವ ಸಂದರ್ಭದಲ್ಲಿ ಜಿಪಿನ ಬ್ರೇಕ್ ವಿಫಲಗೊಂಡು ನಿಯಂತ್ರಣ ತಪ್ಪಿ ಇಳಿಜಾರಿನಲ್ಲಿ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಅಮ್ಮತ್ತಿ ಒಂಟಿಯAಗಡಿ ಸಮೀಪದ ದೇವರ ಮುಟ್ಟೆ ಪೈಸಾರಿಯಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಹಚ್ಚಿನಾಡು ಗ್ರಾಮದಿಂದ ಸಿದ್ದಾಪುರಕ್ಕೆ ಕಾರ್ಮಿಕರನ್ನು ಕೆಲಸ ಮುಗಿಸಿ ಕರೆದುಕೊಂಡು ಬರುತ್ತಿರುವ ಸಂದರ್ಭದಲ್ಲಿ ಅಪರಾಹ್ನ ೩.೩೦ ಕ್ಕೆ ಜೀಪಿನ ಬ್ರೇಕ್ ವಿಫಲಗೊಂಡು ಚಾಲಕನ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ ಇಳಿಜಾರಿನ ರಸ್ತೆಯಲ್ಲಿ ಖಾಸಗಿ ವ್ಯಕ್ತಿಯ ಮನೆಯ ತಡೆಗೋಡೆಗೆ ಜೀಪು ಡಿಕ್ಕಿಯಾಗಿದೆ.
ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಕಾರ್ಮಿಕರಾದ ಸಿದ್ದಾಪುರ, ನೆಲ್ಲಿಹುದಿಕೇರಿ ನಲ್ವತ್ತೇಕರೆ ನಿವಾಸಿಗಳಾದ ರಮ್ಲತ್ (೩೮) ಅಸಮುದ್ದೀನ್ (೫೮) ಅಲೀಮಾ (೫೨) ರಖೀಲ್ ಉಲಾಮ ಇಸ್ಲಾಂ (೪೮) ಅಚ್ಚಮ್ಮ (೬೩) ಸೂರ, (೪೫) ಕೈರುನ್ನೀಸ (೪೩) ಎಂಬವರುಗಳಿಗೆ ತಲೆ ಭಾಗಕ್ಕೆ, ಕಾಲಿಗೆ, ಕೈಗಳಿಗೆ ಗಾಯವಾಗಿದ್ದು ಗಾಯಾಳುಗಳನ್ನು ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಯಿತು.
ಜೀಪು ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದ ಅಶ್ರಫ್ ಎಂಬವರಿಗೆ ಸೇರಿದ ಜೀಪಿನ ಮುಂಭಾಗ ಜಖಂಗೊAಡಿದೆ. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ