ಭಾರತೀಯ ಪ್ರಜಾಪ್ರಭುತ್ವ ಎಂಬುದು "ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ" ಇರುವ ಆಡಳಿತ ವ್ಯವಸ್ಥೆ. ಈ ವ್ಯವಸ್ಥೆಯ ಯಶಸ್ಸು ಮತ್ತು ಕಾರ್ಯನಿರ್ವಹಣೆಯು ಸಂಪೂರ್ಣವಾಗಿ "ಬಹುಮತ" (ಒಚಿರಿoಡಿiಣಥಿ) ಎಂಬ ತತ್ವದ ಮೇಲೆ ನಿಂತಿದೆ. ರಾಜಕೀಯದಲ್ಲಿ ಬಹುಮತ ಎಂದರೆ ಕೇವಲ ಸಂಖ್ಯೆಗಳಾಟವಲ್ಲ; ಅದು ಸಾರ್ವಜನಿಕ ಅಭಿಪ್ರಾಯದ ಪ್ರತಿಬಿಂಬ ಮತ್ತು ಅಧಿಕಾರಕ್ಕೆ ದೊರೆಯುವ ನೈತಿಕ ಸಮ್ಮತಿ. ಒಂದು ಮಾದರಿ ಸರ್ಕಾರದಲ್ಲಿ "ಬಹುಮತ ಸಾಬೀತುಪಡಿಸುವುದು" (Pಡಿoviಟಿg ಒಚಿರಿoಡಿiಣಥಿ) ಎಂಬುದು ಕೇವಲ ಒಂದು ಪ್ರಕ್ರಿಯೆಯಲ್ಲ. ಅದು ಸರ್ಕಾರದ ಅಸ್ತಿತ್ವದ ಮೂಲಾಧಾರವಾಗಿದೆ. ಯಾವುದೇ ಒಂದು ಸರ್ಕಾರ ಅಧಿಕಾರಕ್ಕೆ ಬರಲು ಅಥವಾ ಅಧಿಕಾರದಲ್ಲಿ ಮುಂದುವರಿಯಲು ಶಾಸನಸಭೆಯ (ವಿಧಾನಸಭೆ ಅಥವಾ ಲೋಕಸಭೆ) ಅರ್ಧಕ್ಕಿಂತ ಹೆಚ್ಚು ಸದಸ್ಯರ ಬೆಂಬಲವನ್ನು ಹೊಂದಿರುವುದು ಕಡ್ಡಾಯ.
ರಾಜಕೀಯ ಬಹುಮತದ ಅರ್ಥ
ಸರಳವಾಗಿ ಹೇಳುವುದಾದರೆ, ಒಂದು ನಿರ್ದಿಷ್ಟ ಗುಂಪು ಅಥವಾ ನಿರ್ಧಾರಕ್ಕೆ ಹೆಚ್ಚಿನ ಸಂಖ್ಯೆಯ ಸದಸ್ಯರ ಬೆಂಬಲವಿರುವುದನ್ನು ಬಹುಮತ ಎನ್ನಲಾಗುತ್ತದೆ. ರಾಜಕೀಯ ಸಂದರ್ಭದಲ್ಲಿ, ಚುನಾವಣೆಗಳಲ್ಲಿ ಅತಿ ಹೆಚ್ಚು ಮತಗಳನ್ನು ಪಡೆಯುವುದು ಅಥವಾ ಶಾಸನಸಭೆಯಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಬಹುಮತ ಎನಿಸಿಕೊಳ್ಳುತ್ತದೆ.
ಬಹುಮತದ ಪ್ರಮುಖ ವಿಧಗಳು
೧. ಸರಳ ಬಹುಮತ (Simಠಿಟe ಒಚಿರಿoಡಿiಣಥಿ): ಹಾಜರಿದ್ದು ಮತ ಚಲಾಯಿಸಿದವರಲ್ಲಿ ಶೇ. ೫೦ಕ್ಕಿಂತ ಹೆಚ್ಚು ಬೆಂಬಲ ಪಡೆಯುವುದು.
೨. ಸಂಪೂರ್ಣ ಬಹುಮತ (ಂbsoಟuಣe ಒಚಿರಿoಡಿiಣಥಿ): ಸದನದ ಒಟ್ಟು ಸದಸ್ಯ ಬಲದಲ್ಲಿ ಅರ್ಧಕ್ಕಿಂತ ಹೆಚ್ಚು (೫೦% + ೧) ಸ್ಥಾನಗಳನ್ನು ಪಡೆಯುವುದು. ಭಾರತದಲ್ಲಿ ಸರ್ಕಾರ ರಚಿಸಲು ಇದು ಅತಿ ಮುಖ್ಯ.
೩. ವಿಶೇಷ ಬಹುಮತ (Sಠಿeಛಿiಚಿಟ ಒಚಿರಿoಡಿiಣಥಿ): ಸಂವಿಧಾನ ತಿದ್ದುಪಡಿಯಂತಹ ಗಂಭೀರ ವಿಷಯಗಳಿಗೆ ಬೇಕಾದ ೨/೩ ಭಾಗದಷ್ಟು ಬೆಂಬಲ.
೪. ಸಾಪೇಕ್ಷ ಬಹುಮತ (Pಟuಡಿಚಿಟiಣಥಿ/ಖeಟಚಿಣive ಒಚಿರಿoಡಿiಣಥಿ): ಇತರ ಅಭ್ಯರ್ಥಿಗಳಿಗಿಂತ ಕೇವಲ ಒಂದು ಮತ ಹೆಚ್ಚಿಗೆ ಪಡೆದರೂ ವಿಜಯಿ ಎಂದು ಘೋಷಿಸುವುದು (ಈiಡಿsಣ-Pಚಿsಣ-ಖಿhe-Posಣ sಥಿsಣem).
ಚುನಾವಣಾ ವ್ಯವಸ್ಥೆ ಮತ್ತು ಬಹುಮತ
ಭಾರತದಂತಹ ಸಂಸದೀಯ ಪ್ರಜಾಪ್ರಭುತ್ವದಲ್ಲಿ, "ಸಾಪೇಕ್ಷ ಬಹುಮತ" ಪದ್ಧತಿಯನ್ನು ಅನುಸರಿಸಲಾಗುತ್ತದೆ. ಇಲ್ಲಿ ಒಬ್ಬ ಅಭ್ಯರ್ಥಿಯು ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ. ೫೦ ಪಡೆಯದಿದ್ದರೂ, ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ಮತ ಪಡೆದರೆ ಆಯ್ಕೆಯಾಗುತ್ತಾನೆ. ಇದು ಕೆಲವೊಮ್ಮೆ ವಿರೋಧಾಭಾಸಕ್ಕೆ ಕಾರಣವಾಗಬಹುದು, ಏಕೆಂದರೆ ಬಹುಪಾಲು ಜನರು ಆ ಅಭ್ಯರ್ಥಿಯ ವಿರುದ್ಧ ಮತ ಚಲಾಯಿಸಿದ್ದರೂ, ವಿಭಜಿತ ಮತಗಳ ಲಾಭದಿಂದ ಆತ ಗೆಲ್ಲುತ್ತಾನೆ.
ಆದರೆ, ಸರ್ಕಾರ ರಚನೆಯ ವಿಷಯಕ್ಕೆ ಬಂದಾಗ "ಸಂಪೂರ್ಣ ಬಹುಮತ' ಅನಿವಾರ್ಯ. ಭಾರತದ ಲೋಕಸಭೆಯ ೫೪೩ ಸ್ಥಾನಗಳಲ್ಲಿ ಸರ್ಕಾರ ರಚಿಸಲು ಕನಿಷ್ಟ ೨೭೨ ಸ್ಥಾನಗಳ ಬೆಂಬಲ ಬೇಕೇ ಬೇಕು.
ಬಹುಮತದ ಪ್ರಾಮುಖ್ಯತೆ
೧. ನಿರ್ಧಾರ ಕೈಗೊಳ್ಳುವ ಶಕ್ತಿ: ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತವಿದ್ದಾಗ, ಅದು ಜನಪರ ಯೋಜನೆಗಳನ್ನು ಮತ್ತು ಕಠಿಣ ನಿರ್ಧಾರಗಳನ್ನು ದೃಢವಾಗಿ ಜಾರಿಗೆ ತರಬಲ್ಲದು.
೨. ರಾಜಕೀಯ ಸ್ಥಿರತೆ: ಬಹುಮತವಿಲ್ಲದ ಸರ್ಕಾರಗಳು (ತೂಗು ಅಸೆಂಬ್ಲಿ) ಸದಾ ಪತನದ ಭೀತಿಯಲ್ಲಿರುತ್ತವೆ. ಇದು ಆಡಳಿತದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
೩. ನೀತಿಗಳ ನಿರಂತರತೆ: ಸ್ಪಷ್ಟ ಬಹುಮತವು ದೀರ್ಘಕಾಲದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಪೂರಕವಾಗಿರುತ್ತದೆ.
೪. ಪ್ರಜಾಪ್ರಭುತ್ವದ ನೈತಿಕತೆ ಮತ್ತು ಜನರ ತೀರ್ಪು: ಪ್ರಜಾಪ್ರಭುತ್ವದಲ್ಲಿ "ಜನರೇ ಪ್ರಭುಗಳು". ಜನರು ತಮ್ಮ ಪ್ರತಿನಿಧಿಗಳನ್ನು ಆರಿಸಿ ಕಳುಹಿಸುತ್ತಾರೆ. ಒಂದು ಪಕ್ಷ ಅಥವಾ ಮೈತ್ರಿಕೂಟ ಬಹುಮತವನ್ನು ಸಾಬೀತುಪಡಿಸಿದಾಗ, ಅದು ಪರೋಕ್ಷವಾಗಿ ಜನರ ಬಹುಮತದ ಬೆಂಬಲವನ್ನು ಹೊಂದಿದೆ ಎಂದರ್ಥ. ಶಾಸನಸಭೆಯಲ್ಲಿ ಬಹುಮತ ಕಳೆದುಕೊಂಡ ಸರ್ಕಾರವು ಜನರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಅಧಿಕಾರದಲ್ಲಿರಲು ನೈತಿಕ ಹಕ್ಕನ್ನು ಉಳಿಸಿಕೊಳ್ಳಲು ಬಹುಮತದ ಸಾಬೀತು ಅತ್ಯಗತ್ಯ.
೫. ಸಂವಿಧಾನಾತ್ಮಕ ಅಗತ್ಯತೆ: (ಅoಟಿsಣiಣuಣioಟಿಚಿಟ ಒಚಿಟಿಜಚಿಣe) ಭಾರತದ ಸಂವಿಧಾನದ ಪ್ರಕಾರ, ಮಂತ್ರಿ ಪರಿಷತ್ತು ಸಾಮೂಹಿಕವಾಗಿ ಕೆಳಮನೆಗೆ (ಲೋಕಸಭೆ ಅಥವಾ ವಿಧಾನಸಭೆ) ಜವಾಬ್ದಾರಿಯಾಗಿರುತ್ತದೆ.
ವಿಶ್ವಾಸಮತ (ಗಿoಣe oಜಿ ಅoಟಿಜಿiಜeಟಿಛಿe) ಹೊಸ ಸರ್ಕಾರ ರಚನೆಯಾದಾಗ ರಾಜ್ಯಪಾಲರು ಅಥವಾ ರಾಷ್ಟçಪತಿಗಳು ಬಹುಮತ ಸಾಬೀತುಪಡಿಸಲು ಸೂಚಿಸುತ್ತಾರೆ.
ಅವಿಶ್ವಾಸ ನಿರ್ಣಯ (ಓo-ಅoಟಿಜಿiಜeಟಿಛಿe ಒoಣioಟಿ) ವಿರೋಧ ಪಕ್ಷಗಳು ಸರ್ಕಾರದ ಮೇಲೆ ನಂಬಿಕೆ ಇಲ್ಲದಿದ್ದಾಗ ಇದನ್ನು ಮಂಡಿಸುತ್ತವೆ. ಈ ಸಂದರ್ಭದಲ್ಲಿ ಬಹುಮತ ಸಾಬೀತುಪಡಿಸುವುದು ಸರ್ಕಾರದ ಅಸ್ತಿತ್ವಕ್ಕೆ ಅನಿವಾರ್ಯವಾಗುತ್ತದೆ.
೬. ರಾಜಕೀಯ ಸ್ಥಿರತೆ ಮತ್ತು ಆಡಳಿತದ ಸುಗಮತೆ: ಬಹುಮತ ಹೊಂದಿರುವ ಸರ್ಕಾರವು ದೃಢವಾದ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲದು. ಅಲ್ಪಮತದ ಸರ್ಕಾರವು ಯಾವಾಗಲೂ ಪತನದ ಭೀತಿಯಲ್ಲಿರುತ್ತದೆ, ಇದರಿಂದಾಗಿ ದೀರ್ಘಕಾಲದ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಾಗುವುದಿಲ್ಲ. ಬಹುಮತ ಸಾಬೀತಾದಾಗ ಸರ್ಕಾರಕ್ಕೆ ಒಂದು ರೀತಿಯ ರಾಜಕೀಯ ರಕ್ಷಾಕವಚ ಸಿಗುತ್ತದೆ. ಇದು ದೇಶದ ಅಥವಾ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಸ್ಥಿರ ಆಡಳಿತ ನೀಡಲು ಸಹಾಯ ಮಾಡುತ್ತದೆ.
೭. ಮೈತ್ರಿ ರಾಜಕೀಯ ಮತ್ತು ಕುದುರೆ ವ್ಯಾಪಾರ ತಡೆ (ಂಟಿಣi-ಆeಜಿeಛಿಣioಟಿ ಐಚಿತಿ): ಇಂದಿನ ದಿನಗಳಲ್ಲಿ ಮೈತ್ರಿ ಸರ್ಕಾರಗಳು ಸಾಮಾನ್ಯವಾಗಿದೆ. ಹಲವು ಪಕ್ಷಗಳು ಸೇರಿ ಸರ್ಕಾರ ರಚಿಸಿದಾಗ ಸಣ್ಣ ಭಿನ್ನಾಭಿಪ್ರಾಯಗಳೂ ಸರ್ಕಾರದ ಪತನಕ್ಕೆ ಕಾರಣವಾಗಬಹುದು. ಬಹುಮತ ಸಾಬೀತು ಪ್ರಕ್ರಿಯೆಯು ಶಾಸಕರು ತಮ್ಮ ನಿಷ್ಠೆಯನ್ನು ಎಲ್ಲಿ ಇರಿಸಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇದು ಪಕ್ಷಾಂತರ ತಡೆ ಕಾಯಿದೆಯಡಿ ಶಿಸ್ತು ಕಾಪಾಡಲು ಮತ್ತು ಅನೈತಿಕ ಕುದುರೆ ವ್ಯಾಪಾರವನ್ನು (ಊoಡಿse ಖಿಡಿಚಿಜiಟಿg) ತಡೆಯಲು ಇರುವ ಒಂದು ಸಾಂವಿಧಾನಿಕ ಅಸ್ತçವಾಗಿದೆ.
೮. ಶಾಸನ ರಚನೆಯಲ್ಲಿನ ಪ್ರಭಾವ: ಯಾವುದೇ ಹೊಸ ಕಾನೂನು ಅಥವಾ ವಿಧೇಯಕವನ್ನು (ಃiಟಟ) ಅಂಗೀಕರಿಸಲು ಸದನದಲ್ಲಿ ಬಹುಮತದ ಅವಶ್ಯಕತೆ ಇರುತ್ತದೆ. ಸರ್ಕಾರವು ಬಹುಮತವನ್ನು ಹೊಂದಿಲ್ಲದಿದ್ದರೆ, ಅದು ಯಾವುದೇ ಜನಪರ ಕಾಯ್ದೆಗಳನ್ನು ಜಾರಿಗೆ ತರಲು ಸಾಧ್ಯವಾಗುವುದಿಲ್ಲ. ಬಜೆಟ್ ಮಂಡನೆಯAತಹ ಪ್ರಮುಖ ಸಂದರ್ಭಗಳಲ್ಲಿ ಬಹುಮತ ಸಾಬೀತುಪಡಿಸಲು ವಿಫಲವಾದರೆ ಸರ್ಕಾರ ತಕ್ಷಣ ರಾಜೀನಾಮೆ ನೀಡಬೇಕಾಗುತ್ತದೆ.
೯) ನ್ಯಾಯಾಂಗದ ಹಸ್ತಕ್ಷೇಪ ಮತ್ತು ಸ್ಪಷ್ಟತೆ: ಅನೇಕ ಬಾರಿ ರಾಜಕೀಯ ಬಿಕ್ಕಟ್ಟು ಉಂಟಾದಾಗ (ಉದಾಹರಣೆಗೆ ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆದಂತೆ), ಸುಪ್ರೀಂಕೋರ್ಟ್ ಫ್ಲೋರ್ ಟೆಸ್ಟ್ (ಈಟooಡಿ ಖಿesಣ) ಅಥವಾ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಆದೇಶಿಸುತ್ತದೆ. ರಾಜಭವನದಲ್ಲಿ ನಡೆಯುವ ಸಹಿ ಸಂಗ್ರಹಕ್ಕಿAತ, ಸದನದ ಒಳಗೆ ನಡೆಯುವ ಮತದಾನವೇ ಅಂತಿಮ ಮತ್ತು ಪಾರದರ್ಶಕ ಎಂಬುದು ನ್ಯಾಯಾಂಗದ ನಿಲುವು. ಇದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ.
ಬಹುಮತ ಸಾಬೀತುಪಡಿಸುವ ವಿವಿಧ ಹಂತಗಳು
೧. ಫ್ಲೋರ್ ಟೆಸ್ಟ್ (ಈಟooಡಿ ಖಿesಣ): ಮುಖ್ಯಮಂತ್ರಿಗಳು ಅಥವಾ ಪ್ರಧಾನ ಮಂತ್ರಿಗಳು ಸದನದಲ್ಲಿ ವಿಶ್ವಾಸಮತ ಯಾಚಿಸುವುದು.
೨. ಧ್ವನಿ ಮತ (ಗಿoiಛಿe ಗಿoಣe): ಸದಸ್ಯರ ಶಬ್ದದ ಆಧಾರದ ಮೇಲೆ ನಿರ್ಧಾರ.
೩. ವಿಭಜನೆ ಮತ (ಆivisioಟಿ ಗಿoಣe): ಸದಸ್ಯರು ಎಲೆಕ್ಟಾçನಿಕ್ ಬಟನ್ ಒತ್ತುವ ಮೂಲಕ ಅಥವಾ ಸಹಿ ಮಾಡುವ ಮೂಲಕ ಮತ ಚಲಾಯಿಸುವುದು. ಇದು ಅತ್ಯಂತ ಪಾರದರ್ಶಕ ವಿಧಾನ.
ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ರಾಜಕೀಯ ಬೆಳವಣಿಗೆಗಳ ಸಂದರ್ಭದಲ್ಲಿ, ಬಹುಮತ ಸಾಬೀತು (ಈಟooಡಿ ಖಿesಣ) ಕುರಿತಾಗಿ ಸುಪ್ರೀಂಕೋರ್ಟ್ ನೀಡಿದ ತೀರ್ಪುಗಳು
೧. ಎಸ್.ಆರ್. ಬೊಮ್ಮಾಯಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ (೧೯೯೪)
ಇದು ಬಹುಮತ ಸಾಬೀತಿಗೆ ಸಂಬAಧಿಸಿದAತೆ ಅತ್ಯಂತ ನಿರ್ಣಾಯಕ ತೀರ್ಪು. ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ಈ ಕೆಳಗಿನ ಅಂಶಗಳನ್ನು ಸ್ಪಷ್ಟಪಡಿಸಿತು.
ಸದನವೇ ಅಂತಿಮ: ಸರ್ಕಾರಕ್ಕೆ ಬಹುಮತ ಇದೆಯೇ ಅಥವಾ ಇಲ್ಲವೇ ಎಂಬುದು ಕೇವಲ ರಾಜ್ಯಪಾಲರ ವ್ಯಕ್ತಿನಿಷ್ಠ ಅಭಿಪ್ರಾಯಕ್ಕೆ ಸೀಮಿತವಾಗಬಾರದು. ಅದನ್ನು ವಿಧಾನಸಭೆಯ ಒಳಗೇ (ಈಟooಡಿ oಜಿ ಣhe ಊouse) ಪರೀಕ್ಷಿಸಬೇಕು.
ಅಧಿಕಾರ ದುರುಪಯೋಗಕ್ಕೆ ತಡೆ: ಸಂವಿಧಾನದ ೩೫೬ನೇ ವಿಧಿಯಡಿ (ರಾಷ್ಟçಪತಿ ಆಳ್ವಿಕೆ) ರಾಜ್ಯ ಸರ್ಕಾರಗಳನ್ನು ಅನಗತ್ಯವಾಗಿ ವಜಾಗೊಳಿಸುವುದಕ್ಕೆ ಈ ತೀರ್ಪು ಬ್ರೇಕ್ ಹಾಕಿತು.
೨. ರಾಮೇಶ್ವರ್ ಪ್ರಸಾದ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ (೨೦೦೬)
ಬಿಹಾರ ವಿಧಾನಸಭೆ ವಿಸರ್ಜನೆಗೆ ಸಂಬAಧಿಸಿದ ಈ ಪ್ರಕರಣದಲ್ಲಿ ಕೋರ್ಟ್ ಹೀಗೆ ಹೇಳಿದೆ. ಕೇವಲ ಕುದುರೆ ವ್ಯಾಪಾರ (ಊoಡಿse-ಣಡಿಚಿಜiಟಿg) ನಡೆಯಬಹುದು ಎಂಬ ಆತಂಕದ ಮೇಲೆ, ಬಹುಮತ ಸಾಬೀತಿಗೆ ಅವಕಾಶ ನೀಡದೆ ವಿಧಾನಸಭೆಯನ್ನು ವಿಸರ್ಜಿಸುವುದು ಅಸಂವಿಧಾನಿಕ.
೩. ಯಡಿಯೂರಪ್ಪ ವರ್ಸಸ್ ಕರ್ನಾಟಕ ಸರ್ಕಾರ (೨೦೧೮)
೨೦೧೮ ರ ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರದ ಬೆಳವಣಿಗೆಯಲ್ಲಿ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿತು.
ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ೧೫ ದಿನಗಳ ಕಾಲಾವಕಾಶ ನೀಡಿದ್ದರು. ಆದರೆ ಸುಪ್ರೀಂಕೋರ್ಟ್ ಇದನ್ನು ಕೇವಲ ೨೪ ಗಂಟೆಗಳಿಗೆ ಇಳಿಸಿ, ತಕ್ಷಣವೇ ಫ್ಲೋರ್ ಟೆಸ್ಟ್ ನಡೆಸುವಂತೆ ಆದೇಶಿಸಿತು. ಇದು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಯಿತು.
೪. ಶಿವಸೇನಾ ವರ್ಸಸ್ ಮಹಾರಾಷ್ಟç ರಾಜ್ಯಪಾಲರು (೨೦೧೯ - ೨೦೨೩)
ಮಹಾರಾಷ್ಟçದ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಈ ಅಂಶಗಳನ್ನು ಎತ್ತಿ ಹಿಡಿಯಿತು
ಪಕ್ಷಾಂತರ ನಿಷೇಧ ಕಾಯ್ದೆ: ಪಕ್ಷದ ವಿಪ್ (Whiಠಿ) ಉಲ್ಲಂಘಿಸುವ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಸ್ಪೀಕರ್ ಅವರಿಗಿದೆ. ಬಹುಮತದ ಬಗ್ಗೆ ಸಂಶಯ ಬಂದಾಗ ವಿಳಂಬ ಮಾಡದೆ ಫ್ಲೋರ್ ಟೆಸ್ಟ್ ನಡೆಸಬೇಕು.
ರಾಜಕೀಯ ಬಹುಮತವು ಕೇವಲ ಅಂಕಿಅAಶಗಳ ಆಟವಲ್ಲ, ಅದು ಜನರ ಆಶೋತ್ತರಗಳ ಸಂಕೇತ. ಬಹುಮತ ಪಡೆದ ಪಕ್ಷವು ಅದನ್ನು ಅಧಿಕಾರ ಎಂದು ಭಾವಿಸದೆ ಜವಾಬ್ದಾರಿ ಎಂದು ಸ್ವೀಕರಿಸಬೇಕು. ಪ್ರಜಾಪ್ರಭುತ್ವವು ಸುಗಮವಾಗಿ ಸಾಗಬೇಕಾದರೆ ಬಹುಮತದ ಜೊತೆಗೆ ಅಲ್ಪಸಂಖ್ಯಾತ ಮತ್ತು ಭಿನ್ನಾಭಿಪ್ರಾಯಗಳಿಗೂ ಗೌರವ ನೀಡುವ ಸಹಿಷ್ಣುತೆ ಇರಬೇಕು. ಬಹುಮತದ ಆಡಳಿತವು ಕೇವಲ ಅನೇಕರ ಆಡಳಿತ'ವಾಗದೆ ಎಲ್ಲರ ಕಲ್ಯಾಣದ ಆಡಳಿತ (ಸರ್ವೋದಯ) ಆಗಿರಬೇಕು.