ಮಡಿಕೇರಿ, ಮೇ ೩೦: ಭಾರತೀಯ ನೌಕಾಪಡೆಗೆ ಸಬ್ ಲೆಫ್ಟಿನೆಂಟ್ ಮುಂಡ್ಯೋಳAಡ ಸಿ ಸೋನಲ್ ಅವರು ಕಮಿಷನ್ಡ್ ಆಗಿದ್ದಾರೆ.
ತಾ.೨೮ ರಂದು ಕಣ್ಣೂರಿನಲ್ಲಿ ೪೨ನೇ ನೇವಲ್ ಓರಿಯಂಟೇಷನ್ ಕೋರ್ಸ್ ಪೂರೈಸಿದ ಸೋನಲ್ ಅವರು, ಇದೀಗ ನೌಕಾಪಡೆಗೆ ಅಧಿಕೃತವಾಗಿ ನೇಮಕಗೊಂಡಿದ್ದಾರೆ.
ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿAಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದಿರುವ ಸೋನಲ್, ಮೂಲತಃ ಚೆಯ್ಯಂಡಾಣೆ ನಿವಾಸಿ ಮುಂಡ್ಯೋಳAಡ ಚಂಗಪ್ಪ (ದೇವಿ) ಹಾಗೂ ಮುಂಡ್ಯೋಳAಡ ಮಾಚಮ್ಮ (ಮಾಲ) ದಂಪತಿಯ ಪುತ್ರಿ