ಗೋಣಿಕೊಪ್ಪ, ಮೇ ೩೦: ಭಗತ್‌ಸಿಂಗ್ ಯುವಕ ಸಂಘÀ ಆಯೋಜಿಸಿದ್ದ ೬ನೇ ಆವೃತ್ತಿಯ ಜಿಸಿಎಲ್ ಕ್ರಿಕೆಟ್‌ನ ಭಗತ್ ಕಪ್‌ನಲ್ಲಿ ವಿರಾಟ್ ಕ್ರಿಕೆಟರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಹಾತೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಾಲ್ಕು ದಿನಗಳು ಕಾಲ ನಡೆದ ಈ ಕ್ರೀಡಾಕೂಟದ ಅಂತಿಮ ಹಣಾಹಣಿಯಲ್ಲಿ ಬೂಮ್ ಬೂಮ್ ತಂಡ ಐದು ಓವರ್‌ನಲ್ಲಿ ಎರಡು ವಿಕೆಟ್ ನಷ್ಟಕ್ಕೆ ದಾಖಲಿಸಿದ ೨೨ ರನ್ ಬೆನ್ನಟ್ಟಿದ ವಿರಾಟ್ ಕ್ರಿಟೆರ್ಸ್ ತಂಡÀ ಯಾವುದೇ ವಿಕೆಟ್ ನಷ್ಟವಿಲ್ಲದೆ ಎರಡು ಓವರ್‌ಗಳಲ್ಲಿ ೨೩ ರನ್‌ಗಳನ್ನು ಕಲೆ ಹಾಕುವ ಮೂಲಕ ಗೆಲುವು ದಾಖಲಿಸಿತು.

ವಿರಾಟ್ ಕ್ರಿಕೆಟರ್ಸ್ನ ಗಗನ್ ಆಳ್ವ ೮ ಬಾಲ್‌ಗೆ ೨೦ ರನ್ ಗಳಿಸಿದರು. ಬೂಮ್ ಬೂಮ್‌ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ವಿಜೇತ ತಂಡಕ್ಕೆ ೧ ಲಕ್ಷ ನಗದು, ದ್ವಿತೀಯ ಸ್ಥಾನಕ್ಕೆ ೫೦ ಸಾವಿರ ನಗದು ಮತ್ತು ಟ್ರೋಫಿಯನ್ನು ವಿತರಿಸಲಾಯಿತು.

ತೃತೀಯ ಸ್ಥಾನವನ್ನು ಸಿ.ಎಸ್ ಕ್ರಿಕೆಟರ್ಸ್ ಮತ್ತು ನಾಲ್ಕನೇ ಸ್ಥಾನವನ್ನು ಎ.e.ೆ ಬಾಯ್ಸ್ ಕ್ರಿಕೆಟರ್ಸ್ ಪಡೆದುಕೊಂಡವು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುಮ್ಮಟೀರ ಕಿಲನ್ ಗಣಪತಿ ಮಾತನಾಡಿ, ಕ್ರೀಡೆ ಎನ್ನುವುದು ಸದಾ ಮನುಷ್ಯನನ್ನು ಚಟುವಟಿಕೆಯಿಂದ ಇರುವಂತೆ ಮಾಡುವ ಪ್ರೇರಣೆಯ ಅಂಶವಾಗಿದೆ. ಭಗತ್ ಸಿಂಗ್ ಯುವಕ ಸಂಘ ಈ ಹಿನ್ನೆಲೆಯಲ್ಲಿ ಕ್ರಿಕೆಟಿಗೆಆದ್ಯತೆ ನೀಡುವ ಮೂಲಕ ಯುವಕರನ್ನು ಆರೋಗ್ಯಪೂರ್ಣ ವ್ಯಕ್ತಿತ್ವಕ್ಕೆ ಪ್ರೇರೇಪಿಸುತ್ತಿದೆ ಎಂದು ಹೇಳಿದರು.

ಗೋಣಿಕೊಪ್ಪ ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ಮಾತನಾಡಿ, ಪಂದ್ಯಾಟವನ್ನು ಆಯೋಜಿಸುವುದು ಬಹುದೊಡ್ಡ ಸವಾಲಿನ ಕೆಲಸವಾಗಿದೆ. ಇಂತಹ ಸಾಹಸಕ್ಕೆ ಭಗತ್ ಸಿಂಗ್ ಯುವಕ ಸಂಘ ಮುಂದಾಗಿರುವುದು ಶ್ರೇಷ್ಠ ಸಾಧನೆ ಎಂದು ಶ್ಲಾಘಿಸಿದರು.

ಸಮಾಜ ಸೇವಕ ಚೋಕಂಡ ಸಂಜು ಸುಬ್ಬಯ್ಯ ಮಾತನಾಡಿ, ಆರೋಗ್ಯಪೂರ್ಣ ಬದುಕಿಗೆ ಕ್ರೀಡೆಗಳು ಸಹಕಾರಿಯಾಗಬಲ್ಲದು. ಈ ನಿಟ್ಟಿನಲ್ಲಿ ಸಂಘಟನೆಗಳು ಅತಿ ಹೆಚ್ಚು ಕ್ರೀಡಾಕೂಟಗಳನ್ನಾಗಿಸುವ ಮೂಲಕ ಯುವಕರಿಗೆ ಕ್ರೀಡೆಯಲ್ಲಿ ಆಸಕ್ತಿ ಗಳಿಸುವ ವೇದಿಕೆಯಾಗಬೇಕು ಎಂದರು.

ಪತ್ರಕರ್ತ ಜಗದೀಶ್ ಜೋಡುಬೀಟಿ ಮಾತನಾಡಿ, ಬಲಿಷ್ಠ ಭಾರತ ನಿರ್ಮಾಣಕ್ಕೆ ಆರೋಗ್ಯಪೂರ್ಣ ಯುವ ಸಮುದಾಯದ ಅಗತ್ಯತೆ ಇದೆ. ಯುವಕರು ಆರೋಗ್ಯಪೂರ್ಣವಾಗಿರಲು ಮತ್ತು ಈ ದೇಶವನ್ನು ಕಟ್ಟುವ ಶಕ್ತಿವಂತರಾಗಲು ಬಲಿಷ್ಠ, ಪೌಷ್ಟಿಕ ದೇಹದೃಢತೆಯನ್ನು ಹೊಂದಬೇಕಾಗಿದೆ. ಹಾಗದ್ದಲ್ಲಿ ಅತ್ಯುತ್ತಮ ಜೀವನ ನಡೆಸಲು ಸಾಧ್ಯವಾಗಬಲ್ಲದು ಈ ಕಾರಣಕ್ಕೆ ಕ್ರಿಕೆಟ್ ಬಹು ಸಹಕಾರಿ ಎಂದು ಹೇಳಿದರು.

ಇದೇ ಸಂದರ್ಭ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಬ್ಯಾಂಕಿAಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಿರಿಯಮಾಡ ಅರುಣ್ ಪೂಣಚ್ಚ, ಸಮಾಜ ಸೇವಕ ಸಂಜು ಸುಬ್ಬಯ್ಯ, ಭಗತ್‌ಸಿಂಗ್ ಯುವಕ ಸಂಘÀದ ಅಧ್ಯಕ್ಷ ಸಿಂಗಿ ಸತೀಶ್, ಸಮಾಜ ಸೇವಕ ಉಂಬಾಯಿ, ಭಗತ್‌ಸಿಂಗ್ ಯುವಕ ಸಂಘದ ಗೌರವಾಧ್ಯಕ್ಷ ಕಣ್ಣನ್ ವೇಣು ದಂಪತಿಯನ್ನು ಸನ್ಮಾನಿಸಲಾಯಿತು.

ಗೋಣಿಕೊಪ್ಪ ಗ್ರಾ.ಪಂ. ಸದಸ್ಯ ಶರತ್‌ಕಾಂತ್, ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಪ್ರಶಾಂತ್, ಪ್ರಧಾನ ಕಾರ್ಯದರ್ಶಿ ವಿ.ವಿ. ಅರುಣ್‌ಕುಮಾರ್, ಮೀನು ವ್ಯಾಪಾರಿ ಊಂಬಾಯಿ, ಉದ್ಯಮಿಗಳಾದ ಜೀವನ್, ಜಿತನ್, ಪುಲಿಯಂಡ ರೋಷನ್, ಭಗತ್ ಸಿಂಗ್ ಯುವಕ ಸಂಘದ ಉಪಾಧ್ಯಕ್ಷ ಕಣ್ಣನ್ ವೇಣು, ಕ್ರೀಡಾ ಸಂಚಾಲಕ ಸಂತೋಷ್ ಪಿಟ್ಟೆ, ಉಪಾಧ್ಯಕ್ಷ ವೇಣು ಮೆನನ್, ಸಂಘದ ನಿರ್ದೇಶಕರುಗಳಾದ, ಹರಿಶ್, ಪುಷ್ಪ ಮನೊಜ್, ಸುರೇಶ್, ಎ.ಡಿ. ಮಂಜುನಾಥ್, ರವಿ ಸ್ಕಂದ, ನಿತಿನ್ ಆಳ್ವ, ಸಂಜಯ್, ರವಿ ಟಿಂಬರ್, ಅಭಿ, ವಿನ್ಯಾ ಮನೋಜ್, ಅಪ್ಪಿ, ಜೋಗಿ, ಸುದಿ, ಅಕ್ಷಯ್, ಶಿವು ಸೇರಿದಂತೆ ಇನ್ನಿತರರು ಇದ್ದರು.