ಮಡಿಕೇರಿ ಮೇ, ೩೦: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ವತಿಯಿಂದ ನಡೆದ ಅಂತರ ಕೆಐಸಿಎಂ ಚರ್ಚಾ ಸ್ಪರ್ಧೆಯಲ್ಲಿ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್ ಮಡಿಕೇರಿ ತರಬೇತಿ ಸಂಸ್ಥೆಯ ಅಭ್ಯರ್ಥಿಗಳಾದ ಶ್ರೇಯ ಪೊನ್ನಪ್ಪ ಬಿ. ಅವರು ರಾಜ್ಯಕ್ಕೆ ಪ್ರಥಮ ಬಹುಮಾನ ಮತ್ತು ಕಾವ್ಯ ಕೆ.ಸಿ ಅವರು ದ್ವಿತೀಯ ಬಹುಮಾನ ಜೊತೆಗೆ ಪರ್ಯಾಯ ಪಾರಿತೋಷಕ ಪಡೆದಿದ್ದಾರೆ.

ವಿಜೇತರಿಗೆ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೆಶಕರಾದ ಬಿ.ಶಿವಸ್ವಾಮಿ ಮತ್ತು ಕಾರ್ಯದರ್ಶಿಗಳಾದ ಅಶ್ವತ್ಥ ನಾರಾಯಣ ಬಹುಮಾನ ವಿತರಿಸಿದರು ಎಂದು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಪುಟ್ಟಸ್ವಾಮಿ ತಿಳಿಸಿದ್ದಾರೆ.