ಕೂಡಿಗೆ, ಮೇ. ೨೬: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದ ಮತ್ತಾರಿ ಹರ್ಷ(೩೭) ದೆಹಲಿಯಲ್ಲಿ ನಡೆದ ಬುಡಕಟ್ಟು ಸಮಾವೇಶಕ್ಕೆ ತೆರಳಿ ಕಾರ್ಯಕ್ರಮ ಮುಗಿಸಿ ವಾಪಸ್ಸು ಬರುವ ಸಂದರ್ಭ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆೆ ನಡೆದಿದೆ. ರೈಲಿನಲ್ಲಿ ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಸಂದರ್ಭ ಮಧ್ಯಪ್ರದೇಶ ಇಂದೋರ್‌ನಲ್ಲಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ವೈದ್ಯರು ಸ್ಥಳದಲ್ಲಿ ತಪಾಸಣೆ ನಡೆಸಿ ಸಾವನ್ನಪ್ಪಿರುವುದಾಗಿ ದೃಢಪಡಿಸಿದ್ದಾರೆ. ಇವರು ದೊಡ್ಡತ್ತೂರು ಗ್ರಾಮದ ಮತ್ತಾರಿ ಭೋಜಪ್ಪ ಅವರ ಪುತ್ರರಾಗಿದ್ದು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೃತದೇಹ ತಾ.೨೭ ರಂದು ಸ್ವಗ್ರಾಮಕ್ಕೆ ಬರಲಿದ್ದು ಅಂತ್ಯಕ್ರಿಯೆ ಚಿಕ್ಕತ್ತೂರು ಗ್ರಾಮದಲ್ಲಿ ನಡೆಯಲಿದೆ.