ಮಡಿಕೇರಿ, ಮೇ ೨೬: ಕೊಡಗು ಜಿಲ್ಲೆಯು ಪ್ರವಾಸಿಗರಿಗೆ ಸುರಕ್ಷಿತವಾಗಿದ್ದು, ಆತಿಥ್ಯಕ್ಕೆ ಎಂದಿನAತೆ ಹೆಸರುವಾಸಿಯಾಗಿದೆ. ವದಂತಿಗಳಿಗೆ ಪ್ರವಾಸಿಗರು ಕಿವಿಗೊಡಬಾರದು ಎಂಬ ಸಂದೇಶವನ್ನು ಪ್ರವಾಸಿಗರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ನಾಡಿನ ಪ್ರವಾಸೋದ್ಯಮಿಗಳು, ಸಂಘ ಸಂಸ್ಥೆಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಕೂರ್ಗ್ ಹೋಟೇಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೊಳAಡ ದಿನೇಶ್ ಕಾರ್ಯಪ್ಪ ಹೇಳಿದರು.
ನಗರದ ವ್ಯಾಲಿವ್ಯೂ ಹೊಟೇಲ್ ಸಭಾಂಗಣದಲ್ಲಿ ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ವತಿಯಿಂದ ಆಯೋಜಿತ ಪ್ರವಾಸೋದ್ಯಮ ಸಂಬAಧಿತ ವಿವಿಧ ಸಂಘ ಸಂಸ್ಥಗಳೊAದಿಗಿನ ಸಭೆಯಲ್ಲಿ ಅವರು ಮಾತನಾಡಿದರು.
ಕೆಲವರು ಅನಗತ್ಯವಾಗಿ ಕೊಡಗಿನ ಪ್ರವಾಸೋದ್ಯಮದ ಬಗ್ಗೆ ಇಲ್ಲಸಲ್ಲದ ಟೀಕೆ, ದೂರುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಬ್ಬಿಸುತ್ತಾ ಕೊಡಗಿನ ಆತಿಥ್ಯ ಸಂಸ್ಕೃತಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥ ಆಧಾರ ರಹಿತ ಹೇಳಿಕೆಗಳನ್ನು ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡ ಸರ್ವರೂ ಖಂಡಿಸಲೇಬೇಕಾಗಿದೆ ಎಂದು ದಿನೇಶ್ ಹೇಳಿದರು. ಕಳೆದ ವರ್ಷ ಕೊಡಗಿಗೆ ೨೫ ಲಕ್ಷದಷ್ಟು ಪ್ರವಾಸಿಗರು ಭೇಟಿ ನೀಡಿದ್ದರಾದರೂ ೪೫ ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂಬ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ದಿನೇಶ್, ಸದ್ಯದಲ್ಲಿಯೇ ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ಉಪನಿರ್ದೇಶಕರನ್ನು ನಿಯೋಜಿಸುವ ನಿಟ್ಟಿನಲ್ಲಿ ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಪ್ರಯತ್ನಿಸಲಿದೆ ಎಂದರು.
ಪ್ರವಾಸಿ ತಾಣಗಳಲ್ಲಿ ಅಥವಾ ಯಾವದೇ ಪ್ರವಾಸೋದ್ಯಮದ ಸಂಬAಧಿತ ಚಟುವಟಿಕೆಗಳಲ್ಲಿ ಅಹಿತಕರ ಘಟನೆ ಸಂಭವಿಸಿದ ಕೂಡಲೇ ಪೂರ್ವಪರ ತಿಳಿಯದೇ ಪ್ರವಾಸೀ ಚಟುವಟಿಕೆಗಳಿಗೇ ನಿರ್ಬಂಧ ಹೇರುವ ಸರ್ಕಾರದ ಕ್ರಮದಿಂದಾಗಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ತೀವ್ರ ಹಿನ್ನಡೆಯಾಗಿದೆ ಎಂದೂ ದಿನೇಶ್ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯ ದುಬಾರೆ, ಮಾಂದಲಪಟ್ಟಿ, ತಡಿಯಂಡಮೋಳ್ ನಂಥ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ತೆರಳದಂತೆ ನಿರ್ಬಂಧ ಹೇರಿರುವ ನಿಯಮವನ್ನು ಕೂಡಲೇ ಹಿಂಪಡೆಯುವAತೆಯೂ ದಿನೇಶ್ ಒತ್ತಾಯಿಸಿದರು.
ಕೊಡಗು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಕೊಡಗಿನ ವ್ಯಾಪಾರಸ್ಥರು ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರನ್ನು ನಂಬಿಕೊAಡು ವಹಿವಾಟು ನಡೆಸುತ್ತಿದ್ದಾರೆ. ಹೀಗಿರುವಾಗ ಜಿಲ್ಲೆಗೆ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾದಲ್ಲಿ ಅದು ವರ್ತಕರ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎದು ಆತಂಕ ವ್ಯಕ್ತಪಡಿಸಿದರು. ಈಗಾಗಲೇ ಪ್ರವಾಸೋದ್ಯಮ ಇಲಾಖೆಯು ಜಿಲ್ಲೆಯಾದ್ಯಂತ ೧೨ ಹೊಸ ತಾಣಗಳೂ ಸೇರಿ ೩೬ ಪ್ರವಾಸಿತಾಣಗಳ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ಜಿಲ್ಲೆಗೆ ಬರುವ ಪ್ರವಾಸಿಗರ ವಾಹನ ನಿಲುಗಡೆಯ ಸಮಸ್ಯೆಯನ್ನೂ ಸಂಬAಧಿಸಿದ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು ಪರಿಹರಿಸಬೇಕಾಗಿದೆ.
ಕೊಡಗು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷೆ ಮೋಂತಿ ಗಣೇಶ್ ಮಾತನಾಡಿ, ಜಿಲ್ಲೆಯಲ್ಲಿನ ಅನಧಿಕೃತ ಹೋಂಸ್ಟೇಗಳನ್ನು ಮುಚ್ಚಿಸಲು ಸರ್ಕಾರದ ಕ್ರಮ ಏನೇನೂ ಸಾಲದು. ಹೆಚ್ಚುವರಿ ಸಿಬ್ಬಂದಿಗಳೊAದಿಗೆ ನಿಯಮಬಾಹಿರ ಹೋಂಸ್ಟೇಗಳಿಗೆ ಕಡಿವಾಣ ಹಾಕಲೇಬೇಕು ಎಂದು ಆಗ್ರಹಿಸಿದರು. ಪ್ರವಾಸೋದ್ಯಮದ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯೂ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಯೋಜನೆಗಳಿಗೆ ಹಿನ್ನಡೆ ಉಂಟು ಮಾಡಿದೆ ಎಂದೂ ಮೋಂತಿ ಗಣೇಶ್ ನುಡಿದರು.
ಕೂರ್ಗ್ ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳನ್ನು ವಿಳಂಬರಹಿತವಾಗಿ ಅಬಿವೃದ್ಧಿ ಮಾಡುವುದು ಮುಖ್ಯ. ಅನೇಕ ತಾಣಗಳಲ್ಲಿ ಮೂಲಸೌಲಭ್ಯವೇ ಇಲ್ಲ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಪ್ರವಾಸೋದ್ಯಮಕ್ಕೆ ಸಂಬAಧಿಸಿದ ಸಂಘಸAಸ್ಥೆಗಳು ಒಗ್ಗೂಡಿ ತಮ್ಮ ವ್ಯಾಪ್ತಿಯಲ್ಲಿನ ಪ್ರವಾಸಿ ತಾಣಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಜೆಟ್ ಸಹಿತವಾಗಿ ವರದಿ ನೀಡಿದರೆ ಸರ್ಕಾರದ ಮಟ್ಟದಲ್ಲಿ ಈ ನಿಟ್ಟಿನಲ್ಲಿ ಚರ್ಚಿಸಲು ಅನುಕೂಲವಾಗಲಿದೆ ಎಂದರು. ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡವರು ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಚೇತರಿಕೆಗಾಗಿ ಒಂದೇ ಧ್ವನಿಯಲ್ಲಿ ಮಾತನಾಡಬೇಕಾದ ಅಗತ್ಯವಿದೆ ಎಂದೂ ಅವರು ಹೇಳಿದರು.
ಹಿರಿಯ ಪತ್ರಕರ್ತ ಅನಿಲ್ ಹೆಚ್.ಟಿ. ಮಾತನಾಡಿ ರಾಜ್ಯದ ಪ್ರವಾಸೋದ್ಯಮಕ್ಕೆ ಕೊಡಗು ಜಿಲ್ಲೆಯು ಮಹತ್ವದ ಕೊಡುಗೆ ನೀಡಿದ್ದರೂ ಅನೇಕ ವರ್ಷಗಳಿಂದ ಪ್ರವಾಸೋದ್ಯಮ ಖಾತೆ ಸಚಿವರು ಜಿಲ್ಲೆಗೆ ಭೇಟಿ ನೀಡಲೇ ಇಲ್ಲ. ಜಿಲ್ಲೆಗೆ ಭೇಟಿ ನೀಡಿದರೆ ಮಾತ್ರ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಚಿವರಿಗೆ, ಉನ್ನತ ಅಧಿಕಾರಿಗಳಿಗೆ ಕೊಡಗಿನ ಪ್ರವಾಸೋದ್ಯಮದ ಬೇಡಿಕೆ ತಿಳಿಯಲು ಸಾಧ್ಯ ಎಂದರು. ಅತ್ಯಧಿಕ ಆದಾಯ ಬರುತ್ತಿದ್ದ ದುಬಾರೆಯಲ್ಲಿ ಪ್ರವಾಸಿಗರಿಗೆ ಕೆಲವೊಂದು ನಿರ್ಭಂಧ ಹೇರಿರುವ ಕ್ರಮದ ಬಗ್ಗೆ ಅರಣ್ಯ ಇಲಾಖೆ ಪುನರ್ ವಿಮರ್ಶೆ ಮಾಡಬೇಕು. ೨೩ ವರ್ಷಗಳಿಂದ ಸಂಭವಿಸದ ಆಕಸ್ಮಿಕ ದುರಂತ ಸಂಭವಿಸಿದ ಕೂಡಲೇ ಪ್ರವಾಸಿಗರನ್ನು ಪ್ರವಾಸೋದ್ಯಮಕ್ಕೆ ಸಂಬAಧಿಸಿದ ಚಟುವಟಿಕೆಯಿಂದಲೇ ದೂರವಿಡುವ ಕ್ರಮ ಸರಿಯಲ್ಲ ಎಂದೂ ಅನಿಲ್ ಪ್ರತಿಪಾದಿಸಿದರು. ಆನ್ ಲೈನ್ ಬುಕ್ಕಿಂಗ್ನAಥ ಅತ್ಯಾಧುನಿಕ ವ್ಯವಸ್ಥೆ ಮೂಲಕ ದುಬಾರೆಗೆ ಬರುವ ಪ್ರವಾಸಿಗರಿಗೆ ವ್ಯವಸ್ಥಿತವಾಗಿ ಸಾಕಾನೆ ಶಿಬಿರಕ್ಕೆ ಪ್ರವೇಶಾವಕಾಶ ಕಲ್ಪಿಸಲು ಸಾಧ್ಯವಿದೆ ಎಂದೂ ಅನಿಲ್ ಹೇಳಿದರು.
ದುಬಾರೆಯ ರಾಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಉತ್ತಪ್ಪ ಮಾತನಾಡಿ, ಈಗಾಗಲೇ ದುಬಾರೆಯಲ್ಲಿರುವ ೮೪ ರಾಫ್ಟಿಂಗ್ಗೆ ಸಂಖ್ಯೆಯನ್ನು ಸ್ಥಗಿತಗೊಳಿಸಬೇಕು. ಹೆಚ್ಚುವರಿ ರಾಫ್ಟಿಂಗ್ ನೀಡಿದರೆ ಸಮಸ್ಯೆಯಾಗಲಿದೆ ಎಂದರು.
ದುಬಾರೆಯ ರಾಫ್ಟಿಂಗ್ ಅಸೋಸಿಯೇಷನ್ ಸಲಹೆಗಾರ ಕೆ.ಎಸ್.ರತೀಶ್ ಮಾತನಾಡಿ ದುಬಾರೆಯಲ್ಲಿ ಪ್ರವಾಸಿಗರನ್ನು ನಿಯಂತ್ರಿಸಲು ಹೆಚ್ಚುವರಿ ಸಿಬ್ಬಂದಿಗಳ ಅಗತ್ಯವಿದೆ. ಅಂತೆಯೇ ದುಬಾರೆಯ ನಿರ್ವಹಣೆಗಾಗಿಯೇ ಪ್ರತ್ಯೇಕ ಅಧಿಕಾರಿಯನ್ನು ನಿಯೋಜಿಸಬೇಕಾಗಿದೆ ಎಂದು ಸಲಹೆ ನೀಡಿದರು. ದುಬಾರೆಯ ಸಾಕಾನೆ ಶಿಬಿರವನ್ನು ೧೦ ದಿನಗಳಿಂದ ಮುಚ್ಚಿರುವ ಹಿನ್ನಲೆಯಲ್ಲಿ ಪ್ರವಾಸೋದ್ಯಮವನ್ನೇ ನಂಬಿಕೊAಡಿರುವ ನೂರಾರು ಮಂದಿಗೆ ನಷ್ಯವಾಗುತ್ತಿದೆ. ಹೀಗಾಗಿ ಶೀಘ್ರವೇ ದುಬಾರೆಯಲ್ಲಿ ಚಟುವಟಿಕೆಗಳನ್ನು ಪುನರಾರಂಭಿಸಬೇಕೆAದು ಒತ್ತಾಯಿಸಿದರು.
ಮಾಂದಲಪಟ್ಟಿ ಜೀಪು ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಪಿ.ಟಿ. ಉಣ್ಣಿಕೃಷ್ಣ ಮಾತನಾಡಿ, ಹೆಚ್ಚು ವರಮಾನ ತರುವ ಪ್ರವಾಸಿ ತಾಣವಾದ ಮಾಂದಲಪಟ್ಟಿ ಕೂಡ ಮುಚ್ಚಲ್ಪಟ್ಟಿದೆ; ರಸ್ತೆ ಕಾಮಗಾರಿ ಪೂರ್ಣವಾಗಿದ್ದರೂ ಪ್ರವಾಸಿಗರಿಂದ ಆದಾಯ ಬರುವ ತಿಂಗಳಿನಲ್ಲಿಯೇ ಮಾಂದಲಪಟ್ಟಿಯನ್ನು ಪ್ರವಾಸಿಗರಿಂದ ದೂರ ಇಡಲಾಗಿದೆ. ಇದರಿಂದಾಗಿ ಮಾಂದಲಪಟ್ಟಿಯನ್ನೇ ನಂಬಿಕೊAಡಿರುವ ೬೦೦ ಕ್ಕೂ ಅಧಿಕ ಜೀಪು ಮಾಲೀಕರು, ಅಂಗಡಿ ಮಾಲೀಕರ ಕುಟುಂಬಗಳಿಗೆ ಸಂಕಷ್ಟ ಎದುರಾಗಿದೆ ಎಂದರು. ಮಡಿಕೇರಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿರುವುದು ಕೂಡ ಪ್ರವಾಸಿಗರಿಗೆ ತೀವ್ರ ಸಮಸ್ಯೆಯುಂಟು ಮಾಡಿದೆ. ಮಂಗಳೂರು ರಸ್ತೆಯಲ್ಲಿರುವ ಸರ್ಕಾರಿ ಪ್ರವಾಸಿ ಮಂದಿರದ ಜಾಗದಲ್ಲಿ ಮಲ್ಟಿ ಲೆವಲ್ ವ್ಯವಸ್ಥೆಯಡಿ ವಾಹನ ನಿಲುಗಡೆಗೆ ಅವಕಾಶ ನೀಡಬೇಕು ಎಂದೂ ಉಣ್ಣಿಕೃಷ್ಣ ಒತ್ತಾಯಿಸಿದರು.
ಮಡಿಕೇರಿ ಪ್ರವಾಸಿ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ತೆಕ್ಕಡ ಸಂತೋಷ್ ಮಾತನಾಡಿ, ಬಾಡಿಗೆ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಕೋರಿದರು. ಕೂರ್ಗ್ ಹೋಟೇಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಪದಾಧಿಕಾರಿ ಮೋಹನ್ ದಾಸ್, ಕೊಡಗು ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಎ.ಕೆ. ನವೀನ್ ಮಾತನಾಡಿ, ಪ್ರವಾಸಿಗರಿಗೆ ಉಂಟಾಗುತ್ತಿರುವ ವಿವಿಧ ಸಮಸ್ಯೆ ಪರಿಹಾರ ಸಂಬAಧಿತ ಶಾಸಕರ ಮೂಲಕ ಸರ್ಕಾರದ ಬಳಿ ನಿಯೋಗ ತೆರಳುವುದು ಸೂಕ್ತ ಎಂದು ಸಲಹೆ ನೀಡಿದರು.
ಕೂರ್ಗ್ ಹೊಟೇಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ನಾಸೀರ್ ಅಹಮ್ಮದ್, ಖಜಾಂಜಿ ಸಾಗರ್ ಗಣಪತಿ, ಉಪಾಧ್ಯಕ್ಷ ಬಿ.ಸಿ. ಮಂಜುನಾಥ್ ವೇದಿಕೆಯಲ್ಲಿದ್ದರು.
ಕೊಡಗು ಟ್ರಾವಲ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ್, ಸೋಮವಾರಪೇಟೆ ತಾಲೂಕು ಹೋಂಸ್ಟೇ ಅಸೋಸಿಯೇಷನ್ ನಿರ್ದೇಶಕ ಕಾರ್ತಿಕ್ ಸದಾನಂದ್, ಸುವಿದ್, ಕಾವೇರಿ ಕಾರು ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಗೌತಮ್, ಕಾಫಿ ನಾಡು ಕಾರು ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮಹೇಂದ್ರ, ಕೊಹೆರಾ ಆಡಳಿತ ಮಂಡಳಿಯ ಹರಿಕೃಷ್ಣನ್, ಜಿಷ್ಣು ಸೇರಿದಂತೆ ವಿವಿಧ ಸಂಘಸAಸ್ಥಗಳ ಪ್ರಮುಖರು ಹಾಜರಿದ್ದರು.