ಮಡಿಕೇರಿ, ಮೇ ೨೦ : ಮಡಿಕೇರಿಗೆ ತಮಿಳುನಾಡಿನಿಂದ ಖಾಸಗಿ ಬಸ್ಸೊಂದರಲ್ಲಿ ಆಗಮಿಸಿದ್ದ ಪ್ರವಾಸಿಗರು ಗಾಂಧಿ ಮೈದಾನದಲ್ಲಿ ಅಡುಗೆ ಮಾಡಿ ಮೈದಾನದಲ್ಲಿ ಅಶುಚಿತ್ವ ಉಂಟುಮಾಡಿದ ಹಿನ್ನೆಲೆಯಲ್ಲಿ ಅವರಿಗೆ ನಗರಸಭೆಯಿಂದ ದಂಡ ವಿಧಿಸಲಾಯಿತು.
ಮೈದಾನದಲ್ಲಿ ಅಶುಚಿತ್ವ ಉಂಟುಮಾಡುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ಹೆಲ್ತ್ ಇನ್ಸ್ಪೆಕ್ಟರ್ ಸುರೇಶ್ ಪರಿಶೀಲನೆ ನಡೆಸಿ ೨ ಸಾವಿರ ರೂ. ದಂಡ ವಿಧಿಸಿದರು. ಈ ವೇಳೆ ನಗರಸಭೆ ಸಿಬ್ಬಂದಿ ರಂಗಪ್ಪ, ಭೂತ್ ರಾಜ್ ಮತ್ತಿತರರು ಇದ್ದರು.