ಮಡಿಕೇರಿ, ಮೇ ೨೦: ಕೊಡವ ಭಾಷಿಕ ಸಮುದಾಯ ಕೂಟದ ಆಶ್ರಯದಲ್ಲಿ ಪ್ರಥಮ ವರ್ಷದ ಕೊಡವ ಭಾಷಿಕ ೨೧ ಜನಾಂಗಗಳ ನಡುವೆ ನಡೆದ ಕಳಿನಮ್ಮೆ - ೨೦೨೬ರ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ೨೧ ಜನಾಂಗದ ತಲಾ ಒಬ್ಬರಂತೆ ೨೧ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಹೊನ್ನೇಪಂಡ ಲೌಲಿ ಮನು (ಸಹಕಾರಿ ಕ್ಷೇತ್ರ), ಉತ್ತುಕುಟ್ಟಡ ತಿಮ್ಮಯ್ಯ ಉಪ್ಪುಚ (ಜಾನಪದ ತಜ್ಞ), ಕೂಡಂಡ ಎಂ. ಪೆಮ್ಮಯ್ಯ (ಪೊಲೀಸ್ ಸೇವೆ), ಕೋಲೆಯಂಡ ಡಾ. ಮೋಹನ್ ಅಪ್ಪಾಜಿ (ವೈದ್ಯಕೀಯ), ಪವ್ವೇರಂಡ ಮಾಯಮ್ಮ ಗಣಪತಿ (ನಾಟಿ ವೈದ್ಯೆ) ಕಣಿಯಂಡ ಎನ್. ನಾಣಯ್ಯ (ಸಂಘಟನೆ), ಜೋಕೀರ ಸಭಿತ ಉಮೇಶ್ (ವೈದ್ಯಕೀಯ), ಮುಕ್ಕಾಟಿರ ಸಚಿತ್ ಗಣಪತಿ (ವೈಜ್ಞಾನಿಕ), ಮಲೆಯಂಡ ಡಾ ಅಯ್ಯಪ್ಪ (ಪರಿಸರ ಸಂರಕ್ಷಣೆ), ಕ್ಯಾ. ಬಾಚುರ ಪೂಣಚ್ಚ (ಭಾರತೀಯ ಸೇನೆ), ಇಗ್ಗುಡ ಡಾಲು ಗಣಪತಿ (ಭಾರತೀಯ ಸೇನೆ), ಮೇದರ ಹರೀಶ್ (ಸಾಮಾಜಿಕ), ಬಳಪಂಡ ಪಂಚಮಿ ಬಿದ್ದಪ್ಪ (ಕ್ರೀಡೆ), ಕಾಪಾಳರ ಕಾಳು ಕಾಳಪ್ಪ (ಜನಪದ ಕಲಾವಿದ), ಅರಮನೆಪಾಲೆ ಸುಭಾಷ್ (ಕಾರ್ಗಿಲ್ ವೀರ), ಕೋಲಿಂದಮಲೆ ಚಿಣ್ಣಪ್ಪ (ಕೊಡವ ಜಾನಪದ ಕಲೆ), ಪೊನ್ನಾಟಿಯಂಡ ಬಿ ತಮ್ಮಯ್ಯ (ಅಗ್ನಿಶಾಮಕ ದಳ), ಮಾರಂಗಿ ಮನು (ಕೊಡವ ವಾದ್ಯಗಾರ), ಚರ್ಮಂಡ ಅಪ್ಪುಣು ಪೂವಯ್ಯ (ಕೊಡವ ಜಾನಪದ), ಪುತ್ತಾಮನೆ ಪೂಜ ಶರಣು (ಶೈಕ್ಷಣಿಕ), ಬೊಳ್ಳನಮಂಡ ಉತ್ತಪ್ಪ (ಅಗ್ನಿಶಾಮಕ ದಳ) ಅವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ವೀರಾಜಪೇಟೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ಕಾಫಿ ಬೆಳೆಗಾರ, ಸಮಾಜ ಸೇವಕ ಕೂಡಂಡ ರಾಜೇಂದ್ರ ಅಯ್ಯಮ್ಮ, ವೀರಾಜಪೇಟೆ ಕೊಡವ ಸಮಾಜ ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್ ಹಾಗೂ ವಿವಿಧ ಜನಾಂಗಗಳ ಸಮಾಜದ ಅಧ್ಯಕ್ಷರುಗಳು, ಕೂಟದ ಅಧ್ಯಕ್ಷ ಮೇಚಿರ ಡಾ. ಸುಭಾಷ್ ನಾಣಯ್ಯ, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕೂಟದ ಗೌರವ ಕಾರ್ಯದರ್ಶಿ ಕೂಡಂಡ ಸಾಬ ಸುಬ್ರಮಣಿ ಸನ್ಮಾನಿತರ ಪರಿಚಯ ಮಾಡಿದರು.