ಕೂಡಿಗೆ, ಮೇ ೧೫: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದಲ್ಲಿರುವ ಶ್ರೀ ಶನೀಶ್ವರ ದೇವಸ್ಥಾನ ಸಮಿತಿಯ ವತಿಯಿಂದ ತಾ. ೧೬ ರಂದು (ಇಂದು) ಶ್ರೀ ಶನೈಶ್ಚರ ಜಯಂತಿ ನಡೆಯಲಿದೆ.

ಜಯಂತಿ ಅಂಗವಾಗಿ ಸ್ವಸ್ತಿಶ್ರೀÃ ಪಂಚಗವ್ಯ, ಪುಣ್ಯಾಹ ವಾಚನ ಗಣಯಾಗ, ಸಗ್ರಹಾಮಕ ಶಾಂತಿ ಹೋಮ, ನವಕ ಕಲಶಾರಾಧನೆ, ಪ್ರಧಾನ ಹೋಮ, ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹಾಕುಂಭಾಭಿಷೇಕ, ಪ್ರಸನ್ಯ ಪೂಜೆ, ಶನಿಶಾಂತಿ ಹೋಮದ ಪೂರ್ಣಾಹುತಿ, ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಸಂಜೆ ೪.೩೦. ಗಂಟೆಗೆ ಸ್ವಾಮಿಯ ರಥೋತ್ಸವ ನಡೆಯಲಿದೆ ಎಂದು ಎಸ್.ಆರ್. ಸುನಿಲ್ ರಾವ್ ತಿಳಿಸಿದ್ದಾರೆ.