ಮಡಿಕೇರಿ, ಮೇ ೧೫: ನಾಪೋಕ್ಲು ಹಳೆತಾಲೂಕು ಬಳಿ ಅನುಮಾನಾಸ್ಪದವಾಗಿ ನಾಯಿಗಳು ಸಾವನ್ನಪ್ಪಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಈ ಶ್ವಾನಗಳು ಸೇವಿಸಿದ ಆಹಾರದಲ್ಲಿ ವಿಷ ಅಳವಡಿಸಿರುವ ಶಂಕೆ ಸಾರ್ವಜನಿಕರಲ್ಲಿ ಮೂಡಿದ್ದು ಈ ಸಂಬAಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇತ್ತೀಚೆಗೆ ಈ ಸಂಬAಧ ನಾಪೋಕ್ಲು ನಿವಾಸಿ ದಿನೇಶ್ ಎಂಬವರು ಠಾಣೆಯಲ್ಲಿ ದೂರು ನೀಡದ್ದು, ತನಿಖೆ ನಡೆಯುತ್ತಿರುವುದಾಗಿ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ಹಳೆ ತಾಲೂಕು ಬಳಿ ರಸ್ತೆಯಲ್ಲಿ ನಾಯಿಗಳು ಸತ್ತು ಬಿದ್ದಿದ್ದನು ಗಮನಿಸಿದ ದೂರುದಾರರಾದ ದಿನೇಶ್ ಅವರು, ವೀಡಿಯೋ ಚಿತ್ರೀಕರಣ ಮಾಡಿ ಮುಂದಿನ ದಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರುದಾರರ ಪ್ರಕಾರ ೧೦ಕ್ಕೂ ಅಧಿಕ ನಾಯಿಗಳು ಅಸ್ವಸ್ಥವಾಗಿದ್ದು ಬಳಿಕ ಕೆಲ ಶ್ವಾನಗಳು ಸಾವನ್ನಪ್ಪಿದ್ದಾಗಿ ತಿಳಿದುಬಂದಿದೆ. ಸಾವನ್ನಪ್ಪಿದ್ದ ನಾಯಿಗಳ ಕಳೇಬರಗಳನ್ನು ಮರುದಿನ ಬೆಳಿಗ್ಗೆ ಅಷ್ಟರಲ್ಲಿ ಪಂಚಾಯಿತಿಯಿAದ ವಿಲೇವಾರಿ ಮಾಡಲಾಗಿದೆ.

‘ಶಕ್ತಿ‘ಗೆ ಮಾಹಿತಿ ನೀಡಿದ ನಾಪೋಕ್ಲು ಠಾಣೆ ಅಧಿಕಾರಿ ರಾಘವೇಂದ್ರ ಅವರು, ಘಟನೆ ಸಂಬAಧ ತನಿಖೆ ನಡೆಯುತ್ತಿದೆ. ಮೇಲ್ನೋಟಕ್ಕೆ ಫುಡ್ ಪಾಯ್ಸನಿಂಗ್‌ನಿAದಾಗಿ ಶ್ವಾನಗಳು ಪ್ರಾಣ ಕಳೆದುಕೊಂಡಿರುವುದಾಗಿ ಅಂದಾಜಿಸಲಾಗಿದೆ. ಒಟ್ಟು ೪ ನಾಯಿಗಳು ಮೃತವಾಗಿದ್ದು, ಆ ವ್ಯಾಪ್ತಿಯಲ್ಲಿನ ಇತರ ನಾಯಿಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.