ಮಡಿಕೇರಿ, ಮೇ ೧೧: ಗ್ರಾಮೀಣ ಪುನರ್ವಸತಿ ಯೋಜನೆಯಡಿ ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಯುಆರ್ಡಬ್ಲುö್ಯ/ವಿಆರ್ಡಬ್ಲುö್ಯ ಹುದ್ದೆಗಳು ಖಾಲಿ ಇದ್ದು ಬೌದ್ಧಿಕ ವಿಕಲತೆ ಹಾಗೂ ಮಾನಸಿಕ ಅಸ್ವಸ್ಥರನ್ನು ಹೊರತುಪಡಿಸಿ ಅರ್ಜಿ ಸಲ್ಲಿಸಬಯಸುವವರು ತಾ. ೩೦ ರೊಳಗೆ ಅರ್ಜಿ ಸಲ್ಲಿಸಬಹುದು. ನಗರದ ಪುನರ್ವಸತಿ ಕಾರ್ಯಕರ್ತರು (ಯುಆರ್ಡಬ್ಲುö್ಯ) ಹುದ್ದೆಗೆ ಮಾಸಿಕ ಗೌರವಧನ ರೂ. ೧೦ ಸಾವಿರ, ಎಸ್ಎಸ್ಎಲ್ಸಿ ಉತ್ತೀರ್ಣ, ಅನುತ್ತೀರ್ಣ, ವಿಕಲತೆಯ ಪ್ರಮಾಣ ಶೇ. ೪೦ ಕ್ಕಿಂತ ಮೇಲ್ಪಟ್ಟು ಶೇ. ೭೫ ಕ್ಕಿಂತ ಕಡಿಮೆ ಇರಬೇಕು. ೧೮ ರಿಂದ ೪೫ ವರ್ಷದ ವಯೋಮಾನದವರಾಗಿರಬೇಕು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು (ವಿಆರ್ಡಬ್ಲುö್ಯ) ಹುದ್ದೆಗೆ ಮಾಸಿಕ ಗೌರವಧನ ೧೦ ಸಾವಿರ, ಎಸ್ಎಸ್ಎಲ್ಸಿ ಉತ್ತೀರ್ಣ/ ಅನುತ್ತೀರ್ಣ, ವಿಕಲತೆಯ ಪ್ರಮಾಣ ಶೇ. ೪೦ ಕ್ಕಿಂತ ಮೇಲ್ಪಟ್ಟು ಶೇ. ೭೫ ಕ್ಕಿಂತ ಕಡಿಮೆ ಇರಬೇಕು. ೧೮ ರಿಂದ ೪೫ ವರ್ಷದ ವಯೋಮಾನದವರಾಗಿರಬೇಕು.
ಯುಆರ್ಡಬ್ಲುö್ಯ ಹುದ್ದೆಗಳು ನಗರಸಭೆ ಮಡಿಕೇರಿ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಹಾಗೂ ವಿಆರ್ಡಬ್ಲುö್ಯ ಹುದ್ದೆಗಳು ಮಡಿಕೇರಿ ತಾಲೂಕಿನ ಹಾಕತ್ತೂರು, ಕಾಂತೂರು-ಮುರ್ನಾಡು, ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಹಾಗೂ ವೀರಾಜಪೇಟೆ ತಾಲೂಕಿನ ಪೊನ್ನಪ್ಪಸಂತೆ, ಕೆ. ಬಾಡಗ, ಕಿರುಗೂರು, ಕಾನೂರು, ಶ್ರೀಮಂಗಲದಲ್ಲಿ ಖಾಲಿ ಇರುತ್ತದೆ. ಅರ್ಜಿ ನಮೂನೆಗಳನ್ನು ಸಂಬAಧಿಸಿದ ತಾಲೂಕು ಪಂಚಾಯಿತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್ಡಬ್ಲುö್ಯಗಳಿAದ ಪಡೆದು ನಿಗದಿತ ದಿನಾಂಕದೊಳಗೆ ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಗೆ ಅಥವಾ ಎಂಆರ್ಡಬ್ಲುö್ಯಗಳಿಗೆ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕಿನವರು ಹರೀಶ್ ಟಿ.ಆರ್ ಮೊ.ಸಂ. ೮೮೬೧೪೨೮೯೩೧, ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನವರು ಪ್ರಥನ್ ಕುಮಾರ್ ಸಿ.ಬಿ ಮೊ.ಸಂ. ೯೯೦೦೮೮೩೬೫೪ ಹಾಗೂ ಮಡಿಕೇರಿ ತಾಲೂಕಿನವರು ರಾಜೇಶ್ ಮೊ.ಸಂ. ೮೦೭೩೧೯೨೯೧೪ ಸಂಖ್ಯೆಗಳನ್ನು ಹಾಗೂ ಕಚೇರಿ ದೂ.ಸಂ.೦೮೨೭೨-೨೯೫೮೨೯ ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.