ನಾಪೋಕ್ಲು, ಮೇ ೧೧: ದಿ. ಎಂ.ಎA. ನರೇಂದ್ರ ಅವರದು ಪ್ರೇರಣಶಕ್ತಿ. ಅವರ ಸಾಮಾಜಿಕ ಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದು ಸ್ವಯಂಸೇವಕ ಶ್ಯಾಮ್ ಪ್ರಸಾದ್ ಹೇಳಿದರು.

ಸಂಘ ಪರ ವಿಚಾರ ಹೊಂದಿದ ಕಾರ್ಯಕರ್ತರಲ್ಲಿ ಒಬ್ಬರಾಗಿ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದ ಎಂ.ಎA. ನರೇಂದ್ರ ಅವರ ನಿಧನಕ್ಕೆ ಸಂತಾಪ ಸೂಚಿಸಿ ಇಲ್ಲಿನ ಶ್ರೀರಾಮ ಮಂದಿರದಲ್ಲಿ ವಿಶ್ವ ಹಿಂದೂ ಪರಿಷತ್, ರಾಷ್ಟಿçÃಯ ಸ್ವಯಂ ಸೇವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶ್ಯಾಮಲಾ, ಉದಯ ಶಂಕರ್, ದಿನೇಶ್, ಕಂಗAಡ ಜಾಲಿ ಪೂವಪ್ಪ, ಪ್ರತೀಪ ಬಿ.ಎಂ., ಶಿವಚಾಳಿಯಂಡ ಜಗದೀಶ್ ಅವರು ಇತ್ತೀಚೆಗೆ ನಿಧನರಾದ ನರೇಂದ್ರ ಅವರ ಕುರಿತು ಮಾತನಾಡಿದರು. ಮೂವೇರ ಪಟ್ಟು ಪೆಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಓಂಕಾರ್ ರವಿ ಗೀತ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ದಿ. ಎಂ.ಎA. ನರೇಂದ್ರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ನರೇಂದ್ರ ಸಂಘದ ಸ್ವಯಂ ಸೇವಕರಾಗಿ, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿಯಾಗಿ, ಭಾರತೀಯ ಜನತಾ ಪಾರ್ಟಿಯ ಕಾರ್ಯದರ್ಶಿಯಾಗಿ, ಶಿವಾಜಿ ಯುವಕ ಸಂಘದ ಸ್ಥಾಪಕರಾಗಿ, ನಾಪೋಕ್ಲು ಗ್ರಾಮ ಪಂಚಾಯಿತಿ ಸದಸ್ಯರಾಗಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ, ಗ್ರಾಹಕರ ಸ್ಟೋರ್ ನಿರ್ದೇಶಕರಾಗಿ ಸೇರಿದಂತೆ ವಿವಿಧ ಸಂಘ-ಸAಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.