ಮಡಿಕೇರಿ, ಮೇ ೧೧: ಥೈಲ್ಯಾಂಡ್ನಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ ರೋಟಾಕ್ಸ್ ಮ್ಯಾಕ್ಸ್ ಕಾರ್ಟಿಂಗ್ ಚಾಲೆಂಜ್ನಲ್ಲಿ ಕೊಡಗಿನ ತರುಣ್ ಕಾರ್ಯಪ್ಪ ಭಾರತವನ್ನು ಪ್ರತಿನಿಧಿಸಿ ಸಾಧನೆಗೈದಿದ್ದಾರೆ.
ಕಾರ್ಟಿಂಗ್ನ ಸೀನಿಯರ್ ಮ್ಯಾಕ್ಸ್ ವಿಭಾಗದಲ್ಲಿ ತರುಣ್ ಭಾರತವನ್ನು ಪ್ರತಿನಿಧಿಸಿದರು. ಕುಶಾಲನಗರ ನಳಂದ ವಿದ್ಯಾಸಂಸ್ಥೆಯಲ್ಲಿ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ತರುಣ್ ೨೦೨೪ರಲ್ಲಿ ಕಾರ್ಟಿಂಗ್ ಪ್ರಾರಂಭಿಸಿ ಸತತ ಅಭ್ಯಾಸದಿಂದ ಇದೀಗ ಭಾರತವನ್ನು ಪ್ರತಿನಿಧಿಸಿ ಥೈಲ್ಯಾಂಡ್ನಲ್ಲಿ ಹಲವಾರು ದೇಶಗಳ ಕಾರ್ಟಿಂಗ್ಪಟುಗಳೊAದಿಗೆ ಸೆಣಸಾಡಿ ಸಾಧನೆಗೈದಿದ್ದಾರೆ.
ಇವರು ಕುಶಾಲನಗರ ನಿವಾಸಿ ಬ್ರಿಜೇಶ್ ಪೊನ್ನಣ್ಣ ಹಾಗೂ ಅಂಜು ಸನ್ಸೋಅ ದಂಪತಿಯ ಪುತ್ರ.