ಕೋಲ್ಕತಾ, ಮೇ ೯: ದಶಕಗಳ ಪ್ರಯತ್ನಗಳ ಬಳಿಕ ಕೊನೆಗೂ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚನೆ ಮಾಡಿರುವ ಬಿಜೆಪಿಯ ಮೊದಲ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಶನಿವಾರ ಪ್ರಮಾಣವಚನ ಸ್ವೀಕರಿಸಿದರು. ಟಿಎಂಸಿಯ ಪ್ರಭಾವೀ ಮುಖ್ಯಮಂತ್ರಿಯಾಗಿ ಕಳೆದ ೧೫ ವರ್ಷಗಳಿಂದ ಸುದೀರ್ಘ ಆಡಳಿತ ನಡೆಸಿದ್ದ ಮಮತಾ ಬ್ಯಾನರ್ಜಿ ಅಧಿಕಾರ ಕಳೆದುಕೊಂಡಿದ್ದು, ಅವರನ್ನು ನೇರ ಸ್ಪರ್ಧೆಯಲ್ಲಿ ಸೋಲಿಸಿದ್ದ ಸುವೇಂದು ಮುಖ್ಯಮಂತ್ರಿ ಸ್ಥಾನ ಪಡೆಯುವ ಮೂಲಕ ಪಶ್ಚಿಮ ಬಂಗಾಳದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಬಿಜೆಪಿ ಅಧಿಕಾರ ಗಳಿಸಿದೆ.
ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಶನಿವಾರ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಆರ್. ಎನ್. ರವಿ ಅವರು ಬಿಜೆಪಿಯ ಸುವೇಂದು ಅಧಿಕಾರಿಗೆ ಹುದ್ದೆ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ರಾಜ್ಯಪಾಲರು ಸುವೇಂದು ಅಧಿಕಾರಿ ಮತ್ತು ಇಂದು ಅವರೊಂದಿಗೆ ಅಧಿಕಾರ ಸ್ವೀಕರಿಸಿದ ಐವರು ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಹಿಂದುಳಿದ ವರ್ಗಗಳ ಪ್ರಮುಖರಾದ ದಿಲೀಪ್ ಘೋಷ್, ಮಹಿಳಾ ಮತ್ತು ಕಾಯಸ್ಥ ಸಮುದಾಯದ ಪ್ರತಿನಿಧಿ ಅಗ್ನಿಮಿತ್ರಾ ಪಾಲ್, ಮತುವಾ ಸಮುದಾಯದ ನಾಯಕ ಅಶೋಕ್ ಕೀರ್ತನಿಯಾ, ಆದಿವಾಸಿ ಮತ್ತು ಬುಡಕಟ್ಟು ಜನರ ಪ್ರತಿನಿಧಿ ಕ್ಷುದಿರಾಮ್ ತುಡು ಹಾಗೂ ಉತ್ತರ ಬಂಗಾಳದ ರಾಜ್ಬನ್ಶಿ ಸಮುದಾಯದ ಯುವ ನಾಯಕ ನಿಸಿತ್ ಪ್ರಮಾಣಿಕ್ ಇವರುಗಳು ಸದ್ಯಕ್ಕೆ ನೂತನ ಸಚಿವರುಗಳಾಗಿ ಆಯ್ಕೆಯಾಗಿದ್ದಾರೆ.
ಈ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರದ ಇತರ ಸಚಿವರುಗಳು, ಎನ್‌ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಹಿರಿಯ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಬಿಜೆಪಿ ನಾಯಕರು ಉಪಸ್ಥಿತರಿದ್ದರು. )ಶನಿವಾರ ಈ ಸಮಾರಂಭವನ್ನು ವೀಕ್ಷಿಸಲು ದೇಶದ ವಿವಿಧ ಭಾಗಗಳಿಂದ ಹಾಗೂ ವಿದೇಶಗಳಿಂದ ಸಾವಿರಾರು ಬಿಜೆಪಿ ಬೆಂಬಲಿಗರು ಕೊಲ್ಕತ್ತಾಕ್ಕೆ ಹರಿದುಬಂದರು.
“ಜೈಶ್ರೀರಾಮ್” ಘೋಷಣೆಗಳು ಹಾಗೂ ಪ್ರಧಾನಿ ನರೇಂದ್ರಮೋದಿ ಮತ್ತು ಸುವೇಂದು ಅಧಿಕಾರಿ ಪರ ಘೋಷಣೆಗಳು ನಗರಾದ್ಯಂತ ಮೊಳಗಿದವು. ಒಟ್ಟು ೨೯೪ ಸದಸ್ಯರ ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ೨೦೭ ಸ್ಥಾನಗಳನ್ನು ಗೆದ್ದು, ಭಾರೀ ಬಹುಮತದ ಆಡಳಿಕ್ಕೆ ಪಾತ್ರವಾಗಿದೆ.
ಪ್ರಧಾನಿಯಿಂದ ನತ ಮಸ್ತಕ ನಮಸ್ಕಾರ
ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುವ ಸಂದರ್ಭದಲ್ಲಿ ಕಾರ್ಯಕ್ರಮದ ವೇದಿಕೆಯಲ್ಲಿ ಗಮನ ಸೆಳೆಯುವ ಪ್ರಸಂಗವೊAದು ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಪಕ್ಷದ ಹಿರಿಯ ವ್ಯಕ್ತಿ ಮಖನ್ ಲಾಲ್ ಸರ್ಕಾರ್ ಎಂಬವರ ಪಾದ ಮುಟ್ಟಿ ನಮಸ್ಕರಿಸಿದರು. ಬಳಿಕ ವೇದಿಕೆಯಲ್ಲಿ ಅವರನ್ನು ಆಲಿಂಗಿಸಿಕೊAಡರು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟುವಲ್ಲಿ ತಳಮಟ್ಟದಲ್ಲಿ ಕೆಲಸ ಮಾಡಿದ್ದ ಕೀರ್ತಿಗೆ ೯೮ ವರ್ಷದ ಸರ್ಕಾರ್ ಪಾತ್ರರಾಗಿದ್ದಾರೆ.
ಅಷ್ಟೇ ಅಲ್ಲ, ಪ್ರಮಾಣವಚನ ಸ್ವೀಕರಿಸುವ ಐತಿಹಾಸಿಕ ಕ್ಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೋರಿದ ಮತ್ತೊಂದು ನಡೆ ನೆರೆದ ಜನರ ಮನ ಗೆಲ್ಲುವಂತೆ ಮಾಡಿತು.. ವೇದಿಕೆಯ ಮೇಲೆ ಬಂದ ಪ್ರಧಾನಿ ಮೋದಿ, ಬಂಗಾಳದ ಜನತೆಗೆ ಕೈಮುಗಿದು, ಬಳಿಕ ಮಂಡಿಯೂರಿ ನೆಲದಲ್ಲಿ ನತ ಮಸ್ತಕರಾಗಿ ನಮಸ್ಕರಿಸುವ ಮೂಲಕ ರಾಜ್ಯದ ಜನತೆ ನೀಡಿದ ಅಭೂತಪೂರ್ವ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದರು. ಆ ಸಂದರ್ಭ ಮೈದಾನದಲ್ಲಿ ಮೋದಿ ಮೋದಿ ಎನ್ನುವ ಹರ್ಷೋದ್ಗಾರ ಮೊಳಗಿತು.