ಮಡಿಕೇರಿ,ಮೇ.೯; ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಕೊಡಗು ಗೌಡ ಯುವವೇದಿಕೆ ವತಿಯಿಂದ ಏರ್ಪಡಿಸಲಾಗಿರುವ ಕುಟುಂಬ-೨೦೨೬ ಕ್ರಿಕೆಟ್ ಹಬ್ಬದ ನಡುವೆ ಇದೇ ಪ್ರಥಮ ಬಾರಿಗೆ ಹಮ್ಮಿಕೊಂಡಿರುವ ಹೊನಲು ಬೆಳಕಿನ ರಿಂಕ್ ಹಾಕಿ ಹಬ್ಬಕ್ಕೆ ಇಂದು ಸಂಜೆ ಚಾಲನೆ ನೀಡಲಾಯಿತು.

ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿರುವ ರಿಂಕ್ ಹಾಕಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಾವಳಿಯನ್ನು ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಬಾಳಾಡಿ ಮನೋಜ್ ಸಾಂಪ್ರದಾಯಿಕವಾಗಿ ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಹಾಕಿ ಸರ್ವೀಸಸ್ ಆಟಗಾರರಾದ ಚೌಕಿಮನೆ ರಘು ತಿಮ್ಮಯ್ಯ, ಬೊಳ್ತಜಿ ಅಶೋಕ್, ಬೆಳೆಗಾರ ಯಶ್ ದೋಲ್ಪಾಡಿ, ಯುವ ವೇದಿಕೆ ಕ್ರೀಡಾ ಸಮಿತಿ ಅಧ್ಯಕ್ಷ ಕುಟ್ಟನ ಪ್ರಶಾಂತ್ ಹಾಗೂ ಪದಾಧಿಕಾರಿಗಳು ಇದ್ದರು.

ಲೆಜೆಂಡ್ಸ್ - ರೆವಿನ್ಯೂ

ಉದ್ಘಾಟನೆ ಬಳಿಕ ಪ್ರದರ್ಶನ ಪಂದ್ಯಾವಳಿ ನಡೆಯಿತು. ಹಿರಿಯ ಹಾಕಿ ಆಟಗಾರರನ್ನೊಳಗೊಂಡ ಗೌಡ ಲೆಜೆಂಡ್ಸ್ ಹಾಗೂ ಕಂದಾಯ ಇಲಾಖಾ ನೌಕರರ ತಂಡಗಳ ನಡುವೆ ಪಂದ್ಯಾಟ ನಡೆಯಿತು. ರೋಚಕತೆಯಿಂದ ಕೂಡಿದ್ದ ಪಂದ್ಯಾವಳಿಯಲ್ಲಿ ಕಂದಾಯ ಇಲಾಖಾ ನೌಕರರ ತಂಡ ೩-೧ ಗೋಲುಗಳ ಅಂತರದಿAದ ಗೌಡ ಲೆಜೆಂಡ್ಸ್ ತಂಡವನ್ನು ಮಣಿಸಿತು.

ಆ ಬಳಿಕ ಎಂದಿನAತೆ ಪಂದ್ಯಾವಳಿ ಆರಂಭಗೊAಡಿತು. ೫+೨ ಆಟಗಾರರನ್ನೊಳಗೊಂಡ ಪಂದ್ಯಾವಳಿಯ ಮೊದಲ ಪಂದ್ಯಾಟವು ಮರದಾಳು ಹಾಗೂ ಕಾಳಮನೆ ತಂಡಗಳ ನಡುವೆ ನಡೆದು ಮರದಾಳು ತಂಡ ೨-೦ ಗೋಲುಗಳ ಅಂತರದಿAದ ಜಯಗಳಿಸಿ ಮುನ್ನಡೆ ಸಾಧಿಸಿತು. ಡಿವೈಎಸ್ ರಾಷ್ಟಿçÃಯ ಆಟಗಾರ್ತಿ ಮರದಾಳು ಯಶಿಕಾ ಗೋಲು ಬಾರಿಸುವಲ್ಲಿ ಸಫಲಳಾದಳು.

ಪ್ರಥಮ ವರ್ಷದ ಹೊನಲು ಬೆಳಕಿನ ರಿಂಕ್ ಹಾಕಿ ಹಬ್ಬದಲ್ಲಿ ಒಟ್ಟು ೫೬ ಕುಟುಂಬ ತಂಡಗಳು ಭಾಗವಹಿಸಿದ್ದು, ತಾ. ೧೪ರವರೆಗೆ ಪಂದ್ಯಾವಳಿ ನಡೆಯಲಿದೆ. ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ ಕಾರ್ಯಕ್ರಮ ನಿರ್ವಹಿಸಿದರೆ, ಗೌರವ ಸಲಹೆಗಾರ ಕಟ್ಟೆಮನೆ ಸೋನಾಜಿತ್ ವೀಕ್ಷಕ ವಿವರಣೆ ಮಾಡಿದರು.