ಗೋಣಿಕೊಪ್ಪ ವರದಿ, ಮೇ ೯: ಕಂಡAಗಾಲ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಮೊದಲನೇ ವರ್ಷದ ಕೊಡವ ಕೌಟುಂಬಿಕ ಮುಲ್ಲೇಂಗಡ ಕಬಡ್ಡಿ ನಮ್ಮೆಯಲ್ಲಿ ನೆರವಂಡ ಒಕ್ಕ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಅಂತಿಮ ಪಂದ್ಯದಲ್ಲಿ ಸೋಲನುಭವಿಸಿದ ಪೆಮ್ಮಂಡ ಒಕ್ಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಅAತಿಮ ಪಂದ್ಯದಲ್ಲಿ ನೆರವಂಡ ತಂಡ ೩೪-೨೪ ಅಂಕಗಳ ಮೂಲಕ ಕಪ್ ಗೆದ್ದುಕೊಂಡಿತು. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನೆರವಂಡ ಒಕ್ಕ ಕುಟ್ಟಂಡ ಒಕ್ಕ ವಿರುದ್ಧ ೩೯-೩೨ ಅಂಕಗಳ ಮೂಲಕ ಗೆಲುವು ಸಾಧಿಸಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪೆಮ್ಮಂಡ ಒಕ್ಕ ಕರ್ತಮಾಡ ವಿರುದ್ಧ ೩೩-೩೨ ಅಂಕಗಳಿAದ ಜಯ ಪಡೆದುಕೊಂಡಿತು.

ಕಾಳಿಮಾಡ ತಂಡ ಮಾಣಿಪಂಡ ವಿರುದ್ಧ ಜಯಿಸಿತು. ನೆರವಂಡ ತಂಡ ಮಲ್ಲಂಡ ಒಕ್ಕವನ್ನು ೩೪-೩೧ ಅಂಕಗಳಿAದ ಮಣಿಸಿತು. ಕುಟ್ಟಂಡ (ಮಾದಾಪುರ) ತಂಡ ಮಾಚಂಗಡ ವಿರುದ್ಧ ೩೩-೨೪ ಅಂಕಗಳಿAದ ಜಯ ಪಡೆದುಕೊಂಡಿತು. ಪೆಮ್ಮಂಡ ಒಕ್ಕ ಕಾಳಿಮಾಡ ವಿರುದ್ಧ ೨೮-೨೩ ಅಂಕಗಳಿAದ ಜಯಿಸಿತು. ಕರ್ತಮಾಡ (ಬಿರುನಾಣಿ) ತಂಡ ಚೆಪ್ಪುಡೀರ ವಿರುದ್ಧ ೩೯-೩೨ ಅಂಕಗಳಿAದ ಜಯ ಸಾಧಿಸಿತು.

ಉಳುವಂಗಡ ಒಕ್ಕಕ್ಕೆ ಧ್ವಜ ಹಸ್ತಾಂತರ

೨೦೨೭ ರಲ್ಲಿ ಆತಿಥ್ಯ ವಹಿಸಲಿರುವ ಉಳುವಂಗಡ ಒಕ್ಕಕ್ಕೆ ಕೊಡವ ಕಬಡ್ಡಿ ಅಕಾಡೆಮಿ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪೂವಯ್ಯ ಧ್ವಜ ಹಸ್ತಾಂತರ ಮಾಡಿದರು. ಉಳುವಂಗಡ ದತ್ತ, ಉದಯ, ಉಳುವಂಗಡ ಕಿಶೋರ್ ಸೇರಿದಂತೆ ಕುಟುಂಬ ಸದಸ್ಯರು ಇದ್ದರು. ೨೦೨೮ ರಲ್ಲಿ ಕಂಜಿತAಡ ಒಕ್ಕ ಕಬಡ್ಡಿ ಆತಿಥ್ಯ ವಹಿಸಲಿದೆ ಎಂದು ಪ್ರಕಟಿಸಿದರು.

ಸನ್ಮಾನ

ಪ್ರೋ ಕಬಡ್ಡಿ ಚಿನ್ನದ ಪದಕ ಸಾಧಕ ಹೊಟ್ಟೆಯಂಡ ಸಚಿನ್ ಪೂವಯ್ಯ ಹಾಗೂ ಪತ್ರಕರ್ತ ಮಾಣಿಪಂಡ ಸಂತೋಷ್ ತಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು.

ಸಮಾರೋಪ

ಟಾಟಾ ಕಾಫಿ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ಕಳ್ಳಿಚಂಡ ರಾಜೀವ್ ಮಾತನಾಡಿ, ಕೊಡವ ಕಬಡ್ಡಿ ಆರಂಭ ಭವಿಷ್ಯದಲ್ಲಿ ಹೆಚ್ಚು ಕ್ರೀಡಾಸಕ್ತಿ ಮೂಡಿಸಲಿದೆ ಎಂದರು.

ಬೆAಗಳೂರು ಕೊಡವ ಸಮಾಜದ ಖಜಾಂಚಿ ಚೇಮಿರ ಪೊನ್ನಪ್ಪ ಮಾತನಾಡಿ, ಕಬಡ್ಡಿ ಆಯೋಜನೆ ಕೊಡವ ಜನಾಂಗಕ್ಕೆ ಹೆಮ್ಮೆಯ ವಿಚಾರ ಎಂದರು.

ಮುಖ್ಯ ಶಿಕ್ಷಕಿ ಚೇಂದ್ರಿಮಾಡ ಪವಿನಾ ಶಾಲಾ ಮೈದಾನದಲ್ಲಿ ಸಾಕಷ್ಟು ಕ್ರೀಡಾಕೂಟಗಳು ನಡೆದಿದ್ದು, ಕೌಟುಂಬಿಕ ಕಬಡ್ಡಿ ಕೂಡ ವಿಶೇಷತೆಗೆ ಸಾಕ್ಷಿಯಾಗಿದೆ ಎಂದರು.

ಮುಲ್ಲೇAಗಡ ಒಕ್ಕ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಮಾತನಾಡಿ, ೫೪ ತಂಡಗಳು ನಮ್ಮೆಯಲ್ಲಿ ಪಾಲ್ಗೊಂಡಿರುವುದರಿAದ ನಮ್ಮೆ ಯಶಸ್ವಿಯಾಗಿದೆ. ಕುಟುಂಬದ ಸಹಕಾರ ನಮಗೆ ಪ್ರೋತ್ಸಾಹ ನೀಡಿದೆ ಎಂದರು.

ಕೊಡವ ಕಬಡ್ಡಿ ಅಕಾಡೆಮಿ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಆಟ್ರಂಗಡ ಪ್ರವೀಣ್, ಚೆಪ್ಪುಡೀರ ಎ. ಕಾರ್ಯಪ್ಪ, ಮಾಳೇಟಿರ ಶ್ರೀನಿವಾಸ್ ಪಂದ್ಯದ ವಿವರಣೆ ನೀಡಿದರು.

ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಸ್ವಾಗತಿಸಿದರು. ಮುಲ್ಲೇಂಗಡ ಒಕ್ಕ ಕಾರ್ಯದರ್ಶಿ ಮುಲ್ಲೇಂಗಡ ಕಿಟ್ಟು ಕುಟ್ಟಪ್ಪ ವಂದಿಸಿದರು.