ಮಡಿಕೇರಿ, ಮೇ. ೬: ವೀರಾಜಪೇಟೆ ಪ್ರಗತಿ ಶಾಲೆ ವತಿಯಿಂದ ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಗತಿ ಶೀಲ್ಡ್ ಅಂಡರ್-೧೫ ಸೀಸನ್-೧ ಲೆದರ್ ಬಾಲ್ ಕ್ರಿಕೆಟ್ ಚಾಂಪಿಯನ್ ಶಿಪ್‌ಗೆ ವರ್ಣರಂಜಿತ ತೆರೆ ಬಿದ್ದಿತು.

ಕರ್ನಾಟಕ ಸೇರಿದಂತೆ ತಮಿಳುನಾಡಿನ ಯುವ ಕ್ರಿಕೆಟ್ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ತಮಿಳುನಾಡಿನ ಆರ್ಮಿ ಕ್ರಿಕೆಟ್ ಕ್ಲಬ್ ಆ್ಯಂಡ್ ಅಕಾಡೆಮಿ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಮೈಸೂರಿನ ಹೆರಿಟೇಜ್ ಕ್ರಿಕೆಟ್ ಅಕಾಡೆಮಿ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಪAದ್ಯಾವಳಿಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಆರ್ಮಿ ಕ್ರಿಕೆಟ್ ಅಕಾಡೆಮಿಯ ಗುರುಪ್ರಘಲಾಥನ್ ಪಡೆದುಕೊಂಡರು. ಬೆಸ್ಟ್ ಬ್ಯಾಟ್ಸ್ಮನ್ ಹೆರಿಟೇಜ್ ಕ್ರಿಕೆಟ್ ಕ್ಲಬ್‌ನ ಆಕಾಶ್, ಬೆಸ್ಟ್ ಬೌಲರ್ ಹೆರಿಟೇಜ್ ಕ್ರಿಕೆಟ್ ತಂಡದ ಕುವಂ ಆರ್, ಬೆಸ್ಟ್ ಫೀಲ್ಡರ್ ಹೆರಿಟೇಜ್ ಕ್ರಿಕೆಟ್‌ನ ಆಕಾಶ್, ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಆರ್ಮಿ ಕ್ರಿಕೆಟ್‌ನ ಸುಜಿತ್ ಪಡೆದುಕೊಂಡರು.