ಕೂಡಿಗೆ, ಮೇ ೬: ರಾಮೇಶ್ವರ ಕೂಡು ಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಕಂಪಾನಿಯೋ ಇವರ ಸಹಯೋಗದೊಂದಿಗೆ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಶಿಬಿರ ಸಹಕಾರ ಸಂಘದ ಸಭಾಂಗಣದಲ್ಲಿ ಆರಂಭಗೊAಡಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಹಕಾರ ಸಂಘದ ಅಧ್ಯಕ್ಷ, ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಕೆ. ಹೇಮೇಂತ್ ಕುಮಾರ್ ನೆರವೇರಿಸಿದರು. ನಂತರ ಮಾತಾನಾಡಿದ ಅವರು, ಆರೋಗ್ಯವೇ ಭಾಗ್ಯ ಎಂಬ ನಾಡುನಡಿಯಂತೆ ಗ್ರಾಮೀಣ ಪ್ರದೇಶದ ರೈತರು ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಲು ಇಂತಹ ಉಚಿತ ಚಿಕಿತ್ಸಾ ಶಿಬಿರಗಳು ಉಪಯುಕ್ತವಾಗುತ್ತವೆ. ಇದರ ಸದುಪಯೋಗವನ್ನು ರೈತರು ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಕಂಪಾನಿಯೋ ಕಂಪೆನಿಯ ಥೆರಪಿಸ್ಟ್ ಶಶಿಕುಮಾರ್ ಪೂಜಾರ್ ಮಾತನಾಡಿ, ಯಾವುದೇ ಔಷಧವಿಲ್ಲದೇ ರಕ್ತ ಸಂಚಾರ ಮತ್ತು ನರ ಸಂಬAಧಿತ ಕಾಯಿಲೆಗಳಿಗೆ ಉಚಿತ ಥೆರಪಿಯ ಮೂಲಕ ತಮ್ಮ ಆರೋಗ್ಯ ಹಾಗೂ ಸೌಂದರ್ಯ ಕಾಪಾಡಿಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ. ಈ ಉಪಕರಣ ಪ್ರತಿದಿನ ಕೇವಲ ೩೦ ನಿಮಿಷಗಳ ಕಾಲ ಉಪಯೋಗಿಸುವುದರಿಂದ ನಮ್ಮ ಪಾದದಲ್ಲಿರುವ ಎಲ್ಲಾ ಆಕ್ಯುಫ್ರೇಶರ್ ಪಾಯಿಂಟ್‌ಗಳನ್ನು ಸಕ್ರಿಯಗೊಳಿಸಿ, ಮಾಂಸಖAಡ ಹಾಗೂ ನರಗಳನ್ನು ಉತ್ತೇಜಿಸಿ, ನಮ್ಮ ದೇಹದ ಎಲ್ಲಾ ಅಂಗಾAಶಗಳಿಗೆ ಸರಿಯಾದ ಪ್ರಮಾಣದಲ್ಲಿ ರಕ್ತ ಸಂಚಾರವನ್ನು ಮಾಡಲು ಸಹಾಯ ಮಾಡುತ್ತದೆ ಎಂಬುದರ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ರೈತರಿಗೆ, ಸಾರ್ವಜನಿಕರಿಗೆ ತಿಳಿಸಿದರು

ಈ ಸಂದರ್ಭ ಸಹಕಾರ ಸಂಘದ ನಿರ್ದೇಶಕರಾದ ಕೆ.ಪಿ. ರಾಜು ಎಸ್.ಎಸ್. ಕೃಷ್ಣ, ರಮೇಶ್, ನಾಗರಾಜ್, ರಾಮಚಂದ್ರ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಂಜಯ್ಯ, ನಾಗರಾಜ್, ಮುಖ್ಯ ಕಾರ್ಯನಿರ್ವಹರ್ಣಾಧಿಕಾರಿ ಕೆ.ಪಿ. ಹರ್ಷ ಸೇರಿದಂತೆ ರೈತರು ಭಾಗವಹಿಸಿದ್ದರು.