ನಾಪೋಕ್ಲು, ಮೇ. ೬: ಯಶಸ್ವಿ ಶಿಬಿರವನ್ನು ಸಂಘಟಿಸಲು ಎಲ್ಲರ ಸಹಕಾರ ಮತ್ತು ಶಿಸ್ತು ಹಾಗೂ ಬದ್ಧತೆ ಮುಖ್ಯ ಎಂದು ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ ಹೇಳಿದರು.

ಸ್ಥಳೀಯ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕ್ರೀಡಾ ಅಕಾಡೆಮಿ ವತಿಯಿಂದ ಇಲ್ಲಿಯ ಕೆ.ಪಿ.ಎಸ್ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಹಾಕಿ ತರಬೇತಿ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸತತ ೨೬ ವರ್ಷಗಳ ಕಾಲ ಒಂದು ಶಿಬಿರವನ್ನು ನಡೆಸುವುದು ಸುಲಭದ ಮಾತಲ್ಲ ಎಂದ ಅವರು ಮೈಸೂರಿನ ಆರ್.ವಿ ವಿದ್ಯಾಸಂಸ್ಥೆ ಹಾಕಿ ಆಟಗಾರರಿಗೆ ಉಚಿತ ಟ್ಯೂಷನ್ ನೀಡುತ್ತದೆ, ಇವುಗಳ ಸದುಪಯೋಗವನ್ನು ಪಡೆದುಕೊಂಡು ಶಿಬಿರಾರ್ಥಿಗಳು ಕ್ರೀಡೆಗೆ ಆದ್ಯತೆಯನ್ನು ನೀಡಿ ಉನ್ನತ ಸಾಧನೆ ಮಾಡಬೇಕು ಎಂದರು.

ಇಲ್ಲಿಯ ಕೊಡವ ಸಮಾಜದ ಅಧ್ಯಕ್ಷ ಮುಂಡAಡ ಸಿ.ನಾಣಯ್ಯ ಮಾತನಾಡಿ, ಶಿಬಿರಾರ್ಥಿಗಳಲ್ಲಿ ಕೆಲವರು ತಂದೆ ತಾಯಿಗಳ ಒತ್ತಡದಿಂದ, ಆಯೋಜಕರ ಪ್ರೇರಣೆಯಿಂದ ಶಿಬಿರದಲ್ಲಿ ಭಾಗವಹಿಸುವುದು ಸರಿಯಲ್ಲ. ಶಿಬಿರದ ಪ್ರಯೋಜನಗಳ ಬಗ್ಗೆ ಅರಿತುಕೊಂಡು ಮುಂದಿನ ಭವಿಷ್ಯದ ಬಗ್ಗೆ ಶಿಬಿರಾರ್ಥಿಗಳು ಯೋಚಿಸಬೇಕು. ಉತ್ತಮ ಗುರಿಯಿಂದ ಉನ್ನತ ಸಾಧನೆ ಮಾಡಲು ಸಾಧ್ಯ ಎಂದರು. ಈ ಸಂದರ್ಭ ಅವರು ಕ್ರೀಡಾ ಅಕಾಡೆಮಿಗೆ ರೂ.೫೦ ಸಾವಿರ ದೇಣಿಗೆ ನೀಡಿದರು.

ಕೇಟೋಳಿರ ಹರೀಶ್ ಪೂವಯ್ಯ ಮಾತನಾಡಿ, ೨೬ ವರ್ಷ ಸತತ ಶಿಬಿರವನ್ನು ನಡೆಸಿರುವುದು ಶ್ಲಾಘನೀಯ. ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳ ಪೋಷಕರ ಜವಾಬ್ದಾರಿ ಪ್ರಮುಖವಾದದ್ದು. ಪೋಷಕರ ಉತ್ತೇಜನದಿಂದ ಶಿಬಿರ ಯಶಸ್ವಿ ಆಗುತ್ತದೆ. ಶಿಬಿರಾರ್ಥಿಗಳು ಒಂದು ಉತ್ತಮ ಗುರಿ ಇರಿಸಿ ಉನ್ನತ ಸ್ಥಾನಕ್ಕೇರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೀಡಾ ಅಕಾಡೆಮಿ ಅಧ್ಯಕ್ಷ ಕಾಂಡAಡ ಜೋಯಪ್ಪ ಮಾತ ನಾಡಿ, ಶಿಬಿರದಲ್ಲಿ ತರಬೇತಿಯನ್ನು ಪಡೆಯುವುದರ ಮೂಲಕ ಉತ್ತಮ ಹಾಕಿ ಆಟಗಾರರಾಗಿ ರೂಪುಗೊಂಡ ಹಲವು ಕ್ರೀಡಾಪಟುಗಳಿದ್ದಾರೆ, ತರಬೇತಿ ನಿರಂತರ ವಾಗಿರಲಿ. ಶಿಸ್ತಿನಿಂದ ಕ್ರೀಡೆಯನ್ನು ಅಭ್ಯಾಸ ಮಾಡಿದರೆ ಉನ್ನತ ಸ್ಥಾನವನ್ನು ಅಲಂಕರಿಸಲು ಸಾಧ್ಯ ಎಂದರು.

ಕೊಡವ ಹಾಕಿ ಅಕಾಡೆಮಿ ಉಪಾಧ್ಯಕ್ಷರಾದ ಕೂತಂಡ ಪೂಣಚ್ಚ ಅವರು ಮಕ್ಕಳಿಗೆ ಹಿತವಚನ ನುಡಿದು ತಾವು ಕೂಡ ಗೋಣಿಕೊಪ್ಪಲಿನಲ್ಲಿ ಮಕ್ಕಳಿಗೆ ಹಾಕಿ ತರಬೇತಿ ಶಿಬಿರವನ್ನು ನಡೆಸಿಕೊಂಡು ಬರುತ್ತಿದ್ದು, ಮುಂದಿನ ಬಾರಿ ನಾಪೋಕ್ಲುವಿನ ಶಿಬಿರದ ವಿದ್ಯಾರ್ಥಿಗಳನ್ನು ಪೂನ್ನಂಪೇಟೆಯಲ್ಲಿರುವ ಟರ್ಫ್ ಮೈದಾನಕ್ಕೆ ಕರೆದುಕೊಂಡು ಬಂದು ಅಲ್ಲಿ ನಾಲ್ಕು ದಿನದ ತರಬೇತಿಯನ್ನು ನೀಡಲು ತಾವು ಸಹಕಾರ ಮಾಡುವುದಾಗಿ ಹೇಳಿದರು.ನಿವೃತ್ತ ಶಿಕ್ಷಕಿ, ಮಹಿಳಾ ಹಿರಿಯ ತರಬೇತುದಾರೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕ್ರೀಡಾ ವೀಕ್ಷಕ ವರದಿಗಾರ ಮಾಳೇಟೀರ ಶ್ರೀನಿವಾಸ್‌ಅವರು ಮಕ್ಕಳಿಗೆ ಹಿತವಚನ, ಕಿವಿ ಮಾತನ್ನು ಹೇಳಿ ಶುಭ ಹಾರೈಸಿದರು.

ಶಿಬಿರಾರ್ಥಿಗಳ ತಾವು ಪಡೆದ ತರಬೇತಿಯ ಬಗ್ಗೆ ತಮ್ಮ ತಮ್ಮ ಅನುಭವವನ್ನು ಹಂಚಿಕೊAಡರು. ಶಿಬಿರಾರ್ಥಿ ಪಾಡಿಯಮ್ಮಂಡ ದುದುಂಬೀ ೨೦೨೬ನೆ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಈ ಸಂದರ್ಭ ವೇದಿಕೆಯಲ್ಲಿದ್ದ ಅತಿಥಿಗಳು ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರವನ್ನು ವಿತರಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಹಾಕಿ ಅಕಾಡೆಮಿ ಉಪಾಧ್ಯಕ್ಷ ಕೊಂಡಿರ ಗಣೇಶ್, ಕೊಡವ ಹಾಕಿ ಅಕಾಡೆಮಿಯ ಕಾರ್ಯದರ್ಶಿಯಾದ ನಾಯಕಂಡ ದೀಪಕ್ ಚಿಣ್ಣಪ್ಪ, ಶಿವಾಚಾಳಿಯಂಡ ಅಂಬಿ ಕಾರ್ಯಪ್ಪ, ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ಶಿವಾಚಾಳಿಯಂಡ ಸೀಮಾ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಅಕಾಡೆಮಿಯ ಕಾರ್ಯದರ್ಶಿ ಮಾಚೆಟ್ಟಿರ ಕುಶು ಕುಶಾಲಪ್ಪ, ಮುಖ್ಯ ತರಬೇತುದಾರರು ಹಾಗೂ ಅಕಾಡೆಮಿಯ ಖಜಾಂಚಿ ಮಾಜಿ ಸೈನಿಕ ಕೇಟೋಳಿರ ಅಚ್ಚಪ್ಪ, ಅರೆಯಡ ಗಣೇಶ, ಬಿದ್ದಾಟಂಡ ಮಮತಾ ಚಿಣ್ಣಪ್ಪ, ನಿರ್ದೇಶಕರಾದÀ ದುಗ್ಗಳ ಸದಾನಂದ, ಕುಂಚೆಟ್ಟಿರ ಸುದೀ ಉತ್ತಪ್ಪ, ಕುಂಡ್ಯೋಳAಡ ಕವಿತಾ, ಪೋಷಕರು ಉಪಸ್ಥಿತರಿದ್ದರು.