ಮಡಿಕೇರಿ, ಮೇ ೬: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟಲು ಹಾಗೂ ಆಯೋಗದಲ್ಲಿ ಮತ್ತಷ್ಟು ಸುಧಾರಣೆಗಳನ್ನು ತರಲು ಸೂಕ್ತ ಶಿಫಾರಸ್ಸುಗಳೊಂದಿಗೆ ವರದಿಯನ್ನು ನೀಡಲು ವಿಧಾನಸಭಾ ಸದಸ್ಯರನ್ನೊಳಗೊಂಡ ಸದನ ಸಮಿತಿಯನ್ನು ರಚಿಸಲಾಗಿದೆ.
ಈ ಸಮಿತಿಯಲ್ಲಿ ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಓರ್ವ ಸದಸ್ಯರಾಗಿದ್ದಾರೆ. ಆರ್.ವಿ. ದೇಶಪಾಂಡೆ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದ್ದು, ಒಟ್ಟು ೧೦ ಸದಸ್ಯರಿದ್ದಾರೆ. ಸದಸ್ಯರುಗಳಾಗಿ ಹಂಪನಗೌಡ ಬಾದರ್ಲಿ, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಹೆಚ್.ಸಿ. ಬಾಲಕೃಷ್ಣ, ಎ.ಎಸ್. ಪೊನ್ನಣ್ಣ, ಕೆ.ಎಂ. ಶಿವಲಿಂಗೇಗೌಡ, ರಾಘವೇಂದ್ರ ಬಸವರಾಜ ಹಿಟ್ನಾಳ್ ಕೆ., ರೂಪಕಲಾ ಎಂ., ಆರಗ ಜ್ಞಾನೇಂದ್ರ, ಎಸ್. ಸುರೇಶ್ ಕುಮಾರ್, ಮಹೇಶ್ ಟೆಂಗಿನಕಾಯಿ, ಎಂ.ಟಿ. ಕೃಷ್ಣಪ್ಪ ಅವರುಗಳಿದ್ದು, ಸಮಿತಿಯು ವರದಿಯನ್ನು ನೀಡಲು ೩ ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ.