ಮಡಿಕೇರಿ, ಮೇ ೪: ಕಳೆದ ತಿಂಗಳು ಪ್ರಕಟಗೊಂಡ ದ್ವಿತೀಯ ಪಿ.ಯು ಫಲಿತಾಂಶದಲ್ಲಿ ಹಳ್ಳಿಗಟ್ಟು ಸಿ.ಐ.ಪಿ.ಯು ಕಾಲೇಜಿನ ವಿದ್ಯಾರ್ಥಿನಿ ಭಾಷಿತ ಕೆ.ಡಿ ಅವರು ವಿಜ್ಞಾನದಲ್ಲಿ ೬೦೦ಕ್ಕೆ ೫೯೪ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಹಾಗೂ ರಾಜ್ಯಕ್ಕೆ ೬ನೇ ಸ್ತಾನ ಪಡೆದಿದ್ದರು. ಇದೀಗ ಮರುಮೌಲ್ಯಮಾಪನ ಬಳಿಕ ಒಟ್ಟು ೫೯೬ ಅಂಕ ಪಡೆದು ರಾಜ್ಯಕ್ಕೆ ೪ನೇ ಸ್ಥಾನವನ್ನು ಗಳಿಸಿದ್ದಾರೆ. ಭಾಷಿತ ಅವರು ಕೋಟೂರು ಗ್ರಾಮದ ಕಾಟಿಮಾಡ ಎ ದೇವಯ್ಯ - ಕಾವೇರಮ್ಮ ದಂಪತಿಯ ಪುತ್ರಿ.