ಗೋಣಿಕೊಪ್ಪಲು. ಮೇ.೪: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮರು ಮೌಲ್ಯಮಾಪನ ನಡೆದು ಗೋಣಿಕೊಪ್ಪಲು ರ‍್ವತೊಕ್ಲುವಿನ ವಿದ್ಯಾನಿಕೇತನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಬಿ.ವಿ ಪಲ್ಲವಿ ೬೦೦ಕ್ಕೆ ೫೯೦ ಅಂಕಗಳನ್ನು ಪಡೆದು ಕೊಡಗು ಜಿಲ್ಲೆಗೆ ನಾಲ್ಕನೆ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಈ ಹಿಂದೆ ೫೭೯ ಅಂಕ ಗಳಿಸಿದ್ದರು. ಮರು ಮೌಲ್ಯಮಾಪನದಲ್ಲಿ ೧೧ ಅಂಕಗಳು ಹೆಚ್ಚುವರಿ ದೊರೆತ್ತಿದ್ದು ಇದೀಗ ಒಟ್ಟು ೫೯೦ ಅಂಕ ಗಳಿಸಿದ್ದಾರೆ. ಪಲ್ಲವಿ ಬಿ.ವಿ. ಬಿಟ್ಟಂಗಾಲದ ನಾಂಗಾಲ ಗ್ರಾಮದ ಬೊಪ್ಪಂಡ ವಸಂತ್ ಮತ್ತು ಶಕು ದಂಪತಿಯ ಪುತ್ರಿ.